
ಪಿರಿಯಾಪಟ್ಟಣ- ತಾಲೂಕಿನ ಶಾಸಕ ಕೆ. ಮಹದೇವ್ ರವರು ಕೊರೋನ ಸೋಂಕಿಗೆ ಒಳಗಾಗಿರುವುದರಿಂದ ಅತಿ ಶೀಘ್ರವೇ ಗುಣಮುಖರಾಗಲಿ ಎಂದು ತಾಲೂಕಿನ ಮುಸ್ಲಿಂ ಸಮುದಾಯದವರು ಪಟ್ಟಣದಲ್ಲಿ ಕಿರನಲ್ಲಿ ಸಮೀಪವಿರುವ ಬೋಲೆ ಬಾಲೆ ಷಾ ಖಾದ್ರಿ ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಸೈಯದ್ ಇಲಿಯಾಸ್ ಮಾತನಾಡಿ ಶಾಸಕ ಕೆ .ಮಹದೇವ್ ಕೊರೋನ ತಡೆಗಟ್ಟಲು ತಮ್ಮ ಪ್ರಾಣವನ್ನು ಲೆಕ್ಕಿಸದೆ ತಾಲೂಕಿನಾದ್ಯಂತ ಶ್ರಮಿಸಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಚಿತವಾಗಿ ಮಾಸ್ಕ್ ಸ್ಯಾನಿಟೈಸರ್ ಮತ್ತು ಆಹಾರದ ಕಿಟ್ ವಿತರಣೆ ಮಾಡುವುದರ ಮೂಲಕ ಜವಾಬ್ದಾರಿಯುತ ಶಾಸಕರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಇದಲ್ಲದೆ ತಾಲೂಕಿನ ಅಭಿವೃದ್ಧಿಗಾಗಿ ಶ್ರಮಕ್ಕೂ ಮೀರಿ ಅನುದಾನಗಳನ್ನು ತಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಇದರಿಂದಾಗಿ ತಾಲೂಕಿನ ಜನತೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿದೆ. ಪರಿಗೆ ಸಾಕಾರವಾಗಿ ಮೈಬು ನಿರ್ದೇಶಕ ಪಿಎಂ ಪ್ರಸನ್ನ ಶ್ರಮಿಸುತ್ತಿದ್ದಾರೆ. ಆದ್ದರಿಂದ ಕೊರೋನ ಸೋಂಕಿಗೆ ಒಳಗಾಗಿರುವ ಶಾಸಕ ಕೆ ಮಹದೇವ್ ರವರು ಅತಿ ಶೀಘ್ರದಲ್ಲಿ ಗುಣಮುಖರಾಗಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲಿ ಎಂದರು