
ಪಿರಿಯಾಪಟ್ಟಣದ ತಾಲೂಕು ಪಂಚಾಯಿತಿ ಬಳಿಯ ಶಾಸಕರ ಕಚೇರಿ ಬಳಿ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಆಯ್ಕೆಪತ್ರ ವನ್ನು ಶಾಸಕ ಕೆ.ಮಹದೇವ್ ವಿತರಿಸಿದರು.
ಸದರಿ ಯೋಜನೆಯ ಸೌಲಭ್ಯಕ್ಕೆ ಸಂಬಂಧಪಟ್ಟಂತೆ ಫಲಾನುಭವಿಗಳು ಮಾನ್ಯ ಜಿಲ್ಲಾ ವ್ಯವಸ್ಥಾಪಕರು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮೈಸೂರು ಇವರಿಗೆ ಅಗತ್ಯ ದಾಖಲಾತಿಗಳನ್ನು ನೀಡಿ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಶಾಸಕರು ತಿಳಿಸಿದರು.
ಈ ವೇಳೆ 2018-19ನೇ ಸಾಲಿನ ಇಪ್ಪತ್ತು ಮಂದಿ ಫಲಾನುಭವಿಗಳು ಹಾಗೂ 2019-20ನೇ ಸಾಲಿನ ಇಪ್ಪತ್ತು ಮಂದಿ ಫಲಾನುಭವಿಗಳಿಗೆ ಶಾಸಕರು ಆಯ್ಕೆ ಪತ್ರ ವಿತರಿಸಿದರು.
ಈ ಸಂದರ್ಭ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ ಸದಸ್ಯರಾದ ಎಸ್.ರಾಮು, ಆರ್.ಎಸ್ ಮಹದೇವ್, ಮಲ್ಲಿಕಾರ್ಜುನ್, ಮುಖಂಡರಾದ ಅಣ್ಣಯ್ಯಶೆಟ್ಟಿ, ಲೋಕೇಶ್, ಶಿವಣ್ಣ, ಪುರಸಭೆ ಸದಸ್ಯರು ಹಾಜರಿದ್ದರು.