
ಪಿರಿಯಾಪಟ್ಟಣ: ತಾಲೂಕಿನ ನಂದಿಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಸದಸ್ಯರನ್ನು ಶಾಸಕ ಕೆ.ಮಹದೇವ್ ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಭಿನಂದಿಸಿದರು.
ನಂದಿಪುರ ಗ್ರಾಮದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 12 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತರು 8 ಸ್ಥಾನ ಪಡೆದಿರುವುದು ಮತ್ತು ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಪಕ್ಷದ ಮುಖಂಡರುಗಳ ಸಹಕಾರದಿಂದ ಸ್ಥಳೀಯ ಸಹಕಾರ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಜಯ ಗಳಿಸುತ್ತಿರುವುದು ಮತ್ತು ಹಲವೆಡೆ ಅವಿರೋಧ ಆಯ್ಕೆ ಆಗುತ್ತಿರುವುದು ಸಂತಸಕರ ಬೆಳವಣಿಗೆ, ಮುಂಬರುವ ಗ್ರಾ.ಪಂ ಚುನಾವಣೆಗಳಲ್ಲಿಯೂ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸಂಘಟಿತರಾಗುವಂತೆ ತಿಳಿಸಿದರು, ಕಾರ್ಯಕಾರಿ ಮಂಡಳಿ ಸದಸ್ಯರು ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸದೆ ಸಂಘದ ಅಭಿವೃದ್ಧಿ ಹಾಗೂ ಸದಸ್ಯರ ಹಿತ ಕಾಪಾಡುವಂತೆ ತಿಳಿಸಿ ನೂತನವಾಗಿ ಆಯ್ಕೆಯಾದ ನಿರ್ದೇಶಕರಾದ ಅನಿಲ್ ಕುಮಾರ್, ಅಣ್ಣಯ್ಯ, ಕರೀಗೌಡ, ಜಯಣ್ಣ, ಸಿ.ಎಸ್ ಜ್ಯೋತಿ, ಮಹದೇವ್, ಮುದ್ದಯ್ಯ, ಸಣ್ಣತಮ್ಮೇಗೌಡ ಅವರನ್ನು ಅಭಿನಂದಿಸಿದರು.
ಈ ಸಂದರ್ಭ ಜಿ.ಪಂ ಮಾಜಿ ಸದಸ್ಯ ಶಿವಣ್ಣ, ಪಕ್ಷದ ಮುಖಂಡರಾದ ಸ್ವಾಮಿ, ದೊಡ್ಡೇಗೌಡ, ಜಯಣ್ಣ, ಬಸವರಾಜ್, ಮಹದೇವ್, ವಿಶ್ವನಾಥ್, ಶಶಿಧರ್, ನಾಗೇಶ್ ಆರಾಧ್ಯ, ಸಣ್ಣೇಗೌಡ, ರೇವಣ್ಣಗೌಡ ಮತ್ತು ಗ್ರಾಮಸ್ಥರು ಹಾಜರಿದ್ದರು.