
ಮಹಾ ಕಾವ್ಯಗಳ ಮೂಲಕ ಮಾನವನ ಮನ ಪರಿವರ್ತನೆಗೆ ದಾರಿ ಮಾಡಿಕೊಟ್ಟವರು ವಾಲ್ಮಿಕಿ ಮಹರ್ಷಿ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ಪಟ್ಟಣದ ತಾಲ್ಲುಕು ಆಡಳಿತ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಾಲ್ಮಿಕಿ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿ ಮಾನವನಲ್ಲಿಯೂ ಮಾನಸಿಕ ತೊಳಲಾಟವಿರುತ್ತದೆ.ಇದನ್ನು ಶುದ್ದಿಕರಣ ಮಾಡಲು ಮಹನೀಯರ ತತ್ವ ಸಿದಾಂತಗಳನ್ನು ಪ್ರತಿಯೊಬ್ಬರೂ ಅಧ್ಯಾಯನ ಮಾಢಬೇಕು.ಈ ನಿಟ್ಟಿನಲ್ಲಿ ವಾಲ್ಮಿಕಿ ಮಹರ್ಷಿಯೂ ತಾನು ಬಾಲ್ಯದಲ್ಲಿ ಬೇಟೆಯಾಡುತ್ತಾ ಹಿಂಸಾತ್ಮಾಕತೆಯ ಜೀವನ ನಡೆಸುತ್ತಿದರು.ನಂತರ ದಿನಗಳಲ್ಲಿ ಅಹಿಂಸಾತ್ಮಾಕತೆಯನ್ನು ಒಪ್ಪಿ ತಮ್ಮ ಜೀವನವನ್ನು ಶುದ್ಧಿಕರಣ ಮಾಡಿಕೊಳ್ಳುತ್ತಾರೆ.ಈ ಪರಿವರ್ತನೆಯೂ ರಾಮಾಯಾಣದಂತಹ ಮಹಾ ಕಾವ್ಯಗಳನ್ನು ಬರೆಯಲು ಪ್ರೇರೆಪಣೆಯಾಗಿದೆ.ಈ ಘಟನೆಗಳು ಪ್ರತಿಯೊಬ್ಬರಲ್ಲೂ ಶಾಂತಿಯುತ ಮತ್ತು ಸಾಮರಸ್ಯದಂತಹ ಜಿವನಕ್ಕೆ ನಾಂದಿಯಾಗಿದೆ.ರಾಮಾಯಾಣ ಮತ್ತು ಮಹಾ ಭಾರತದಂತಹ ಘಟನೆಗಳು ನಡೆದಿರುವ ಕುರುಹುಗಳಿದ್ದು ಇದನ್ನು ನಾವೆಲ್ಲಾ ನಂಬಲು ಸಾಧ್ಯವಾಗದೆ.ಆದರಿಂದ್ದ ಇಂತಹ ಮಹನೀಯರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಧ್ಯಾಯನ ಮಾಢಬೇಕು ಎಂದರು.

ಎಪಿಎಂಸಿ ಸಹ ಕಾರ್ಯದರ್ಶಿ ಚಲುವರಾಯಿ ಮಾತನಾಡಿ ವಾಲ್ಮಿಕಿ ಮಹರ್ಷಿಯ ರಾಮಾಯಾಣ ಆಧಾರದ ಮೇಲೆ ಕುಂವೆಪು,ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸೇರಿದಂತ್ತೆ ಮತ್ತಿತ್ತರ ರಾಷ್ಟç ಕವಿಗಳು ಮತ್ತಷ್ಟು ಕಾವ್ಯಗಳನ್ನು ರಚಿಸಲು ಸಾಧ್ಯವಾಗಿದೆ.ಇವರ ಮಹಾ ಕಾವ್ಯಗಳು ನಮ್ಮನು ಸಾಮಾಜಿಕ ಆಲೋಚನೆಗೆ ಗುರಿ ಮಾಡುತ್ತದೆ.ರಾಮಾಯಾಣದಲ್ಲಿ ಬಳಸಿರುವ ಎಲ್ಲಾ ಪಾತ್ರಗಳು ಇಂದಿಗೂ ಪ್ರಸ್ತುತವಾಗಿದೆ.ಅಹಿಂಸೆಯನ್ನು ಜಗತ್ತಿಗೆ ಸಾರಿ ಹೇಳಿರುವ ಇವರು ರಾಮಾಯಾಣದ ಮೂಲಕ ನಾಡಿನ ಆಡಳಿತದ ನೀತಿಯನ್ನು ಕೂಡ ತಿಳಿಸಿಕೊಟ್ಟಿದಾರೆ.ಇವರ ಆಲೋಚನೆಯ ಕಾವ್ಯಗಳೇ ಇಂದಿಗೂ ಕಾನೂನುಗಳಾಗಿ ಮಾರ್ಪಾಡಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ನಿರೂಪ ರಾಜೇಶ್,ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ.ರಂಗಸ್ವಾಮಿ,ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ,ಸಮಾಜ ಕಲ್ಯಾಣಾಧಿಕಾರಿ ಸಿದ್ದೇಗೌಡ,ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್,ಉಪ ನಿರೀಕ್ಷಕ ಸದಾಶಿವ ತಿಪ್ಪಾರೆಡ್ಡಿ,ಎಇಇ ದಿನೇಶ್,ಪುರಸಭಾ ಮಾಜಿ ಅಧ್ಯಕ್ಷ ತಿಮ್ಮನಾಯಕ,ಸದಸ್ಯ ರಮೇಶ್,ದಸಂಸ ಸಂಘಟನಾ ಸಂಚಾಲಕ ನರಸಿಂಹ,ವಿ.ಸುಬ್ರಮಣ್ಯ,ಮುಖoಡರಾದ ಸಣ್ಣಪ್ದ,ಪುಟ್ಟಯ್ಯ,ರಾಮಚಂದ್ರ ಕೋಗಿಲವಾಡಿ,ಲಕ್ಷö್ಮಣ ನಾಯಕ,ಸಯ್ಯಾದ್ ಇಲಿಯಾಸ್,ರಾಜು ಸುಳಗೋಡು ಸೇರಿದಂತ್ತೆ ಇತರರು ಹಾಜರಿದ್ದರು,
