ಪ್ರಾಚೀನ ಇತಿಹಾಸ ಇರುವ ಕನ್ನಡ ನಾಡಲ್ಲಿ ಜನಿಸಿರುವುದು ನಮ್ಮ ಪುಣ್ಯ ಎಂದು ಶಾಸಕ ಕೆ.ಮಹದೇವ್ ಹೇಳಿದರು.01/11/2020

 ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಕನ್ನಡ ಗೊತ್ತಿದ್ದರೂ ಅನ್ಯ ಭಾಷೆ ಮಾತನಾಡುವವರನ್ನು ನಾನು ಒಪ್ಪುವುದಿಲ್ಲ, ಹರುಕು ಮುರುಕು ಇಂಗ್ಲಿಷ್ ನನಗೆ ಬಂದರೂ ಸಹ ಕನ್ನಡದಲ್ಲಿಯೇ ಮಾತನಾಡುತ್ತೇನೆ, ಕರ್ನಾಟಕ ರಾಜ್ಯ ಎಂದು ಹೆಸರಿಡಲು ಶ್ರಮಿಸಿದ ಡಿ.ದೇವರಾಜ ಅರಸು ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ.

   ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದಕ್ಕೆ ಕೊರೊನಾ ಸೋಂಕಿನ ಕಾರಣ ತಿಳಿಸಿ ಕೊರೊನಾ ತೀವ್ರತೆ ಕಾರಣ ಸರಳವಾಗಿ ಕನ್ನಡ ಹಬ್ಬ ಆಚರಿಸಲಾಗುತ್ತಿದೆ, ಮಹಾಮಾರಿ ವಿಶ್ವದಿಂದ ದೂರವಾಗಿ ಎಲ್ಲರೂ ನೆಮ್ಮದಿಯಿಂದ ಜೀವಿಸುವಂತಾಗಲಿ ಎಂದು ಪ್ರಾರ್ಥಿಸಿದರು.  

    ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ಕನ್ನಡ ಧ್ವಜಾರೋಹಣ ನೆರವೇರಿಸಿ ಧ್ವಜ ಸಂದೇಶ ನೀಡಿದರು.

   ಬಿಇಒ ವೈ.ಕೆ ತಿಮ್ಮೇಗೌಡ ಮಾತನಾಡಿ ಕನ್ನಡ ಭಾಷೆಯಲ್ಲಿ ಪ್ರದೇಶಗಳ ಮೇಲೆ ವಿವಿಧತೆಯಿದೆ, ಸಕ್ರಿಯ ಭಾಷೆಗಳಲ್ಲಿ ಕನ್ನಡ ಸಹ ಒಂದು ಎಂಬುದು ಹೆಮ್ಮೆಯ ಸಂಗತಿ, ಕನ್ನಡ ಪ್ರಾಚೀನ ಭಾಷೆಯಾಗಿದ್ದು  ಸಾವಿರಾರು ವರ್ಷಗಳ ಇತಿಹಾಸವಿದೆ, ಶಾಸ್ತ್ರೀಯ ಭಾಷೆ ಸ್ಥಾನ ಪಡೆದ ಆರು ಭಾಷೆಗಳಲ್ಲಿ ಕನ್ನಡ ಸಹ ಇದೆ ಎಂದು ತಿಳಿಸಿ ಜಾನಪದ ಸೊಗಡಿನ ಮಾತಿನ ಮೂಲಕ ನೆರೆದಿದ್ದ ಸಾರ್ವಜನಿಕರನ್ನು ರಂಜಿಸಿದರು.

   ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಕೆ. ಮಹದೇವ್ ಅವರಿಗೆ ಹಾಗು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪರವಾಗಿ ಅಧ್ಯಕ್ಷ ಸಿ.ಎನ್ ವಿಜಯ್ ಅವರನ್ನು ತಾಲ್ಲೂಕು ಆಡಳಿತ ವತಿಯಿಂದ ಗೌರವಿಸಲಾಯಿತು.

   ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಸದಸ್ಯ ಮಲ್ಲಿಕಾರ್ಜುನ, ಇಒ ಡಿ.ಸಿ ಶ್ರುತಿ, ಸಿಪಿಐ ಬಿ.ಆರ್ ಪ್ರದೀಪ್, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಶಿರಸ್ತೆದಾರ್ ಶಕೀಲಾಬಾನು ಉಪತಹಶೀಲ್ದಾರ್ ಗಳಾದ ನಿಜಾಮುದ್ದೀನ್, ಕೆಂಚಪ್ಪ, ಮುಖಂಡ ಸೈಯದ್ ಇಲಿಯಾಸ್, ಆರಕ್ಷಕ, ಶಿಕ್ಷಣ ಮತ್ತು ಅಂಗನವಾಡಿ ಹಾಗು ವಿವಿಧ ಇಲಾಖೆ ಸಿಬ್ಬಂದಿ ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top