
ಪಿರಿಯಾಪಟ್ಟಣದ ಪುನಾಡಹಳ್ಳಿ ಗ್ರಾಮದಲ್ಲಿ ಸ್ವಮಿತ್ವ ಯೋಜನೆಡಯಡಿ ಡ್ರೋನ್ ಬಳಸಿ ಸರ್ವೆ ಕಾರ್ಯಾಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಮನೆ, ಗ್ರಾಮಠಾಣಾ, ಜಮೀನು ಮುಂತಾದವುಗಳನ್ನು ಡ್ರೋನ್ ಮೂಲಕ ನಿಖರವಾಗಿ ಅಳತೆ ಮಾಡಿ ಇವುಗಳ ಮಾಲೀಕತ್ವವನ್ನು ಸಹ ಗುರುತಿಸಿ ಪ್ರಾಪರ್ಟಿ ಕಾರ್ಡ್ ನೀಡಲಾಗುವುದು. ಈ ಕಾರ್ಡ್ನಲ್ಲಿ ತಮ್ಮ ಆಸ್ತಿಯ ಎಲ್ಲಾ ವಿವರಗಳನ್ನು ಅಡಕ ಮಾಡುವುದರಿಂದ ಗ್ರಾಮೀಣ ಜನರ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಲಿದ್ದು ಈ ಆಸ್ತಿ ಕಾರ್ಡ್ ಮೂಲಕ ಬ್ಯಾಂಕ್‌ಗಳಲ್ಲಿ ವ್ಯವಹಾರ ಮಾಡಿ ಸಾಲ ಮತ್ತಿತರರ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಇಂತಹ ಯೋಜನೆಯನ್ನು ನಮ್ಮ ತಾಲೂಕಿಗೆ ನೀಡಿರುವುದಕ್ಕೆ ಪ್ರಧಾನಿಗೆ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದರು.
ಈ ಯೋಜನೆಯನ್ನು ಪಿಡಿಒಗಳು ಸಮರ್ಥವಾಗಿ ಬಳಸಿಕೊಂಡು ಗ್ರಾಮೀಣ ಜನರ ಹಲವು ವರ್ಷಗಳ ಸಮಸ್ಯೆಗೆ ಮುಕ್ತಿ ನೀಡಬೇಕು ಮತ್ತು ಎಲ್ಲಾ ದಾಖಲಾತಿಗಳನ್ನು ಸಂರಕ್ಷಣೆ ಮಾಡಿಕೊಂಡು ಕಂದಾಯ ವಸೂಲಾತಿ ಮತ್ತು ಜನರಿಗೆ ಶೀಘ್ರದಲ್ಲಿ ಸೇವೆ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಎಡಿಎಲ್‌ಆರ್ ಚಿಕ್ಕಣ್ಣ ಮಾತನಾಡಿ ರಾಜ್ಯದಲ್ಲಿ ಒಟ್ಟು 16 ಜಿಲ್ಲೆಗಳನ್ನು ಈ ಯೋಜನೆಗೆ ತೆಗೆದುಕೊಂಡಿದ್ದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ಕೂಡ ಸೇರ್ಪಡೆಯಾಗಿದೆ. ಈಗಾಗಲೆ ಕಣಗಾಲು, ಮುತ್ತೂರು, ಮಾಲಂಗಿ, ನವಿಲೂರು, ಗ್ರಾಮಗಳಲ್ಲಿ ಸರ್ವೆ ಕಾರ್ಯ ನಡೆಸಲಾಗಿದೆ. ಡ್ರೋನ್ ಬಳಸಿ ಪ್ರಥಮವಾಗಿ ಪುನಾಡಹಳ್ಳಿ ಗ್ರಾಮದಿಂದ ಇತರೆ ಗ್ರಾ.ಪಂ.ಗಳಲ್ಲಿ ಸರ್ವೆ ಕಾರ್ಯ ಅರಂಭಿಸಲಾಗಿವುದು ಈ ಬಗ್ಗೆ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ವೇತ ಎನ್.ರವೀಂದ್ರ, ಸವೇ ಇಲಾಖೆ ಮಂಜುನಾಥ್, ಪ್ರಕಾಶ್, ಆರ್‌ಐ ಪ್ರದೀಪ್, ಗ್ರಾಮಲೆಕ್ಕಿಗರಾದ ಪವಿತ್ರ, ಪಿಡಿಒ ಆನಂದ್, ಮುಖಂಡರಾದ ಅಶೋಕ್, ಜಲೇಂದ್ರ, ಹೊನ್ನೇಗೌಡ, ತಿಮ್ಮೇಗೌಡ, ಕರೀಗೌಡ, ರೇವಣ್ಣ, ಸ್ವಾಮಿ, ರವಿ, ಮಂಜುನಾಥ್, ರಘುನಾಥ್, ಗೋವಿಂದೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.
