
ಬಿಎಂ ರಸ್ತೆಯಿಂದ ದೊಡ್ಡ ಹೊನ್ನೂರು ಸೇರುವಾ ರಸ್ತೆಗೆ ಅಂದಾಜು ಮೊತ್ತ 1 ಕೋಟಿ 30 ಲಕ್ಷ ಹಾಗೂ ಜಿ ಬಸವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ನಿರ್ಮಾಣಕ್ಕೆ 11ಲಕ್ಷ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ರಸ್ತೆಗಳು ದೀರ್ಘಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳುವ ಕೆಲಸ ಗುತ್ತಿಗೆದಾರರ ಜೊತೆ ಗ್ರಾಮಸ್ಥರ ಮೇಲಿದೆ ಎಂದು ಶಾಸಕ ಕೆ ಮಹದೇವ್ ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭ ಗ್ರಾಮದ ರಸ್ತೆ ತೀರಾ ಹದಗೆಟ್ಟಿದ್ದು ಸರಿಪಡಿಸಿ ಕೊಡಿ ಎಂದು ಮನವಿ ಮಾಡಿದ್ದರು ಅವರ ಮನವಿಗೆ ಸ್ಪಂದಿಸಿ ರಸ್ತೆ ಅಭಿವೃದ್ಧಿ ಪಡಿಸಿದ ತೃಪ್ತಿ ನನಗಿದೆ ಎಂದು ತಿಳಿಸಿದರು, ದೊಡ್ಡ ಹೊನ್ನೂರು ಕಾವಲು ರಸ್ತೆಯನ್ನು ಶೀಘ್ರದಲ್ಲೇ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು ನಾನು ಅಧಿಕಾರಕ್ಕೆ ಬಂದ ಮೇಲೆ ಬೈಲುಕುಪ್ಪೆ ಗ್ರಾಮದಲ್ಲಿ ಶೇಕಡ 80ರಷ್ಟು ಕೆಲಸಗಳು ಪೂರ್ಣಗೊಂಡಿವೆ ಎಂದರು , ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಎಇಇ ಗಳಾದ ನಾಗರಾಜ್, ಪ್ರಭು ಅನಿಲ್, ಶಿವಕುಮಾರ್, ಮುಖಂಡರಾದ ವಿಜಯ್ ಕುಮಾರ್ ರಘು ಸಿಡಿ ಭೈರವ ಮತ್ತಿತರರು ಹಾಜರಿದ್ದರು