
ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಅಂದಾಜು ವೆಚ್ಚ 1 ಕೋಟಿ 61.08 ಲಕ್ಷ , ಮಂಟಿಬಿಳಗುಳಿ ಶಾಲಾ ಕೊಠಡಿಗೆ 11 ಲಕ್ಷ, ಬ್ಯಾಡರಬಿಳಗುಳಿ ಶಾಲಾ ಕೊಠಡಿಗೆ 11 ಲಕ್ಷ, ಹಸುವಿನ ಕಾವಲು ಶಾಲಾ ಕೊಠಡಿಗೆ 11 ಲಕ್ಷ, ಸಾಲು ಕೊಪ್ಪಲು ಶಾಲಾ ಕೊಠಡಿಗೆ 11 ಲಕ್ಷ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಕೆಲವರು ನನ್ನನ್ನು ಜಾತಿವಾದಿ ಎಂದು ಹೇಳುತ್ತಾರೆ ಆದರೆ ನಾನು ಎಂದು ಜಾತಿವಾದ ಮಾಡಿಲ್ಲ ನಾನು ಬದುಕಿರುವವರೆಗೂ ಎಲ್ಲ ಜಾತಿ ಜನಾಂಗ ದವರನ್ನು ಪ್ರೀತಿ-ವಿಶ್ವಾಸದಿಂದ ಕಾಣುತ್ತೇನೆ ಎಂದು ಶಾಸಕ ಕೆ ಮಹದೇವ್ ತಿಳಿಸಿದರು.
ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ 65 ವರ್ಷ ಕಳೆದ ಎಲ್ಲಾ ವಯೋವೃದ್ಧರಿಗೆ ಪಿಂಚಣಿ ಬರುವಹಾಗೆ ಪಿಂಚಣಿ ಅದಾಲತ್ ನಡೆಸುವ ಮೂಲಕ ಅನುಕೂಲ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ರಂಗಯ್ಯ , ನಾಗರಾಜು, ಪಿಡಿಓ ದಿವಾಕರ್, ನಾರಾಯಣ್, ಸೇರಿದಂತೆ ಮತ್ತಿತರರು ಹಾಜರಿದ್ದರು