ಪಿರಿಯಾಪಟ್ಟಣ:ಸರ್ಕಾರವು ಸಾರ್ವಜನಿಕರ ಸಂಕಷ್ಟಗಳನ್ನು ಅರಿತು ಯೋಜನೆಗಳನ್ನು ಜಾರಿಗೊಳಿಸುತಿದೆ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ‌‌ ಕೆ.ಮಹದೇವ್ ತಿಳಿಸಿದರು. 13/11/2020


ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ಅಂಗನವಾಡಿ ಸಹಾಯಕರಿಗೆ ಮೊಬೈಲ್ ಪೋನ್ ವಿತರಿಸಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಹಿತದೃಷ್ಟಿಯಿಂದ ಉಪಯುಕ್ತವಾದ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸುತ್ತಿದೆ.ಆರ್ಥಿಕ ಸಂಕಷ್ಟದಿಂದಿರುವ ಅನೇಕ ಮಹಿಳೆಯರು ಇಂದು ಅಪೌಷ್ಟಿಕ ಆಹಾರ ಮತ್ತು ಸೂಕ್ತ ಚಿಕಿತ್ಸೆ ಸಿಗದೆ ಬಹಳ ಸಂಕಷ್ಟಗಳನ್ನು ಅನುಭವಿಸುತ್ತಿರುವುದನ್ನು ಕಾಣುತ್ತಿದ್ದೇವೆ.ಆದರಿಂದ್ದ ಸರ್ಕಾರವು ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಿದೆ.ಇದಲ್ಲದೆ ಪ್ರಸ್ತುತ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ‌ಸರ್ಕಾರಿ ಶಿಕ್ಷಣದ ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕಗಳನ್ನು ಗಳಿಸಿ ಉತ್ತಮ‌ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದಾರೆ.ಆದರಿಂದ್ದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಲ್ಯಾಪ್ ಟ್ಯಾಪ್ ವಿತರಿಸಲಾಗುತ್ತಿದೆ.
ಯೋಜನೆ ಮತ್ತು ಸವಲತ್ತುಗಳ ಬಗ್ಗೆ ಸಾರ್ವಜನಿಕರಿಗೆ‌ ಸೂಕ್ತ ಮಾಹಿತಿ ನೀಡುವ ಜವಬ್ದಾರಿ ಅಧಿಕಾರಿಗಳಿಗಿದ್ದು,ಪಾರದರ್ಶಕವಾಗಿ ಫಲಾನುಭವಿಗಳಿಗೆ ತಲುಪಬೇಕು ಎಂದು ಸೂಚಿಸಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮನಗೌಡ ಮತ್ತು ಮಹಿಳಾ ಮಕ್ಕಳ ಕಲ್ಯಾಣ ‌ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾ ಪಂ ಅಧ್ಯಕ್ಷೆ ನಿರೂಪ ರಾಜೇಶ್,ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಿ,ಸದಸ್ಯ ಐಲಾಪುರ ರಾಮು,ಕಾರ್ಯ ನಿರ್ವಾಹಕಾಧಿಕಾರಿ ಡಿ.ಸಿ.ಶೃತಿ, ಮಾಜಿ ಸದಸ್ಯ ರಘುನಾಥ್, ಶ್ವೇತಾ ಸೇರಿದಂತೆ ಇತರರು ಹಾಜರಿದ್ದರು..

Leave a Comment

Your email address will not be published. Required fields are marked *

error: Content is protected !!
Scroll to Top