
ಜೀ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿರುವ ಮಹಾನಾಯಕ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ರವರ ಜೀವನ ಮತ್ತು ಸಿದ್ಧಾಂತ ನಮಗೆ ಸದಾ ಮಾರ್ಗದರ್ಶನವಾಗಿದೆ. ದೇಶದಲ್ಲಿ ಸಮಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಅವರ ತತ್ವ ಮತ್ತು ಸಿದ್ಧಾಂತಗಳನ್ನು ಅನುಸರಿಸಬೇಕೆಂದು ಶಾಸಕ ಕೆ ಮಹದೇವ್ ತಿಳಿಸಿದರು.

ತಾಲ್ಲೂಕಿನ ಹಳಗನಹಳ್ಳಿಯಲ್ಲಿ ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಕಥೆ ಧಾರವಾಹಿ ಫ್ಲೆಕ್ಸ್ ಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಕನ್ನಡದ ಜೀ ವಾಹಿನಿ ಪ್ರಸಾರ ಮಾಡುತ್ತಿರುವ ಈ ದಾರವಾಹಿಯಲ್ಲಿ ಅಂಬೇಡ್ಕರ್ ಅವರು ಅಂದಿನ ಕಾಲದಲ್ಲಿ ಪಟ್ಟಂತಹ ನೋವುಗಳು ಓದು-ಬರಹ ಕಷ್ಟ-ಸುಖಗಳು ಜಾತಿ ವ್ಯವಸ್ಥೆಯಲ್ಲಿ ಹೇಗೆ ಮೇಲೆ ಎದ್ದು ಬಂದರು ಎಂಬುದರ ಸಂಕ್ಷಿಪ್ತ ಮಾಹಿತಿ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತದೆ ಇದನ್ನು ತಪ್ಪದೆ ಪ್ರತಿಯೊಬ್ಬರು ನೋಡಬೇಕು ಅವರ ಬಗ್ಗೆ ತಿಳಿದುಕೊಳ್ಳಬೇಕು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆಯಬೇಕು ಎಂದರು, ಜಾತಿವ್ಯವಸ್ಥೆಯಲ್ಲಿ ನೊಂದು ಎಷ್ಟು ಕಷ್ಟಪಟ್ಟು ಶಿಕ್ಷಣ ಮುಂದುವರಿಸಿ ಇಡಿ ದೇಶಕ್ಕೆ ಇಡಿ ವಿಶ್ವವೇ ಮೆಚ್ಚುವಂತ ಸಂವಿಧಾನವನ್ನು ರಚನೆ ಮಾಡಿ ದೇಶಕ್ಕೆ ಸಮರ್ಪಿಸಿದ್ದಾರೆ ದೇಶದಲ್ಲಿ ಅಂದಿನಿಂದ ಇಂದಿನವರೆಗೂ ಹಲವು ಕಡೆ ಜಾತಿ ವ್ಯವಸ್ಥೆ ಇಂದು ತಾಂಡವಾಡುತ್ತಿದೆ, ಜಾತಿವ್ಯವಸ್ಥೆಯನ್ನು ಹೋಗಲಾಡಿಸಬೇಕು ಅಂಬೇಡ್ಕರ್ ಅವರಿಗೆ ಅಂದಿನ ಕಾಲದಲ್ಲಿ ಓದುವ ಸಂದರ್ಭ ಶಾಲೆಗಳಲ್ಲಿ ಅವರಿಗೆ ಓದುವ ಅವಕಾಶ ಸಿಕ್ಕಲಿಲ್ಲ ಬೀದಿ ದೀಪಗಳಲ್ಲಿ ಓದುವ ಮುಖಾಂತರ ದೇಶಕ್ಕೆ ಸಂವಿಧಾನ ತಂದುಕೊಟ್ಟಿದ್ದಾರೆ ದೇಶದ ಪ್ರಜೆಗಳು ಸಂವಿಧಾನಕ್ಕೆ ಬೆಲೆಕೊಟ್ಟು ಸಂವಿಧಾನದ ಮುಖಾಂತರ ಕಾನೂನು ಸುವ್ಯಸ್ಥೆ ಕಾಪಾಡಬೇಕು ದೇಶದಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ಒಗ್ಗಟ್ಟಿನಿಂದ ಇರಬೇಕು ಸಮಾಜಮುಖಿ ಕಾರ್ಯಗಳನ್ನು ಮಾಡಬೇಕಿದೆ ಇದಕ್ಕಾಗಿ ಧಾರವಾಹಿ ಮುಖಾಂತರ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ತಿಳಿದುಕೊಂಡು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರೂ ಮುಂದುವರಿಯಬೇಕು ಎಂದು ಕರೆಕೊಟ್ಟರು.

ಈ ಸಂದರ್ಭ ಅತ್ತರ್ ಮತೀನ್, ದಲಿತ ಮುಖಂಡ ತಮ್ಮಣ್ಣಯ್ಯ, ಪಟೇಲ್ ನಾಗರಾಜ್, ಪುಟ್ಟ ಮಾದಯ್ಯ, ಮುಖಂಡರು ಜಯಣ್ಣ, ಮುನಿಯಪ್ಪ, ಅಣ್ಣಯಾ, ಶಾಕಿಬ್, ಶೆಟ್ಟಿ, ವಿದ್ಯಾ ಶಂಕರ್ ಹಾಗು ಗ್ರಾಮಸ್ಥರು ಹಾಜರಿದ್ದರು.