
ತಿರುಮಲಾಪುರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ 354.00 ಲಕ್ಷ, ನವಿಲೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ 516.00 ಲಕ್ಷ, ಮಾಲಂಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ 346.00 ಲಕ್ಷ, ಕುಡಕೂರು ಮತ್ತು ಕೆಳಗಿನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 568.00 ಲಕ್ಷ, ಒಟ್ಟು 17,84,00,000 ರೂಪಾಯಿಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ ಮಹದೇವ್ ಹಾಗು ಸಂಸದ ಪ್ರತಾಪ್ ಸಿಂಹ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಸಂಸದ ಪ್ರತಾಪ್ ಸಿಂಹ. ಮೋದಿಯವರ ಕನಸಿನಂತೆ ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ದಿಯಾಗ ಬೇಕು ಈ ಮೂಲಕ ದೇಶದ ಅಭಿವೃದ್ದಿ ಸಾಧ್ಯವಾಗುತ್ತದೆ. ರಾಜ್ಯ ಸರಕಾರದ ಸಹಾಯದಿಂದ ಕೇಂದ್ರ ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಕೆ.ಮಹದೇವ್ ಮಾತನಾಡಿ ತಾಲೂಕಿನಲ್ಲಿ ನಾನು ಮತ್ತು ಪ್ರತಾಪ್ಸಿಂಹ ತಾಲೂಕಿನ ಅಭಿವೃದ್ದಿಗೆ ಜೋಡೆತ್ತುಗಳ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೇವೆ. ೨ ವರ್ಷ ಶಾಸಕನಾಗಿ ಅಸ್ಟೆ ಕಳೆದಿದೆ ಸಂಸದರು ಕೇವಲ ೫ ವರ್ಷ ಪೂರೈಸಿದ್ಧಾರೆ ೮ ಕ್ಷೇತ್ರಗಳ ಅಭಿವೃದ್ದಿ ಜವಾಬ್ದಾರಿ ಇದೆ. ಇಬ್ಬರಿಂದಲೂ ಏಕಾಏಕಿ ಎಲ್ಲಾ ಗ್ರಾಮಗಳ ಅಭಿವೃದ್ದಿ ಸಾಧ್ಯವಿಲ್ಲ ಹಂತಹAತವಾಗಿ ಗ್ರಾಮಗಳನ್ನು ಅಭಿವೃದ್ದಿ ಪಡಿಸುತ್ತೇವೆ. ಒಟ್ಟಿಗೆ ತಾಲೂಕಿನ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ಧೇವೆ. ಯಾವುದೆ ಮಾಹಿತಿ ಮಾರ್ಗದರ್ಶನವಿದ್ದರು ಪರಸ್ಪರ ಒಮ್ಮತದಿಂದಲೆ ನಡೆಯುತ್ತಿದ್ದು ಜನರು ತಾಳ್ಮೆಯಿಂದ ಅಭಿವೃದ್ದಿ ಕೆಲಸಗಳು ಪೂರ್ಣವಾಗುವವರೆಗೂ ಕಾಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಸಿ.ಬಸವರಾಜು, ನಗರ ನೀರು ಸರಬರಾಜು ಮಂಡಳಿ ನಿರ್ದೇಶಕ ಆರ್.ಟಿ.ಸತೀಶ್, ತಾ.ಪಂ.ಸ್ಥಾಯಿಸಮಿತಿ ಅಧ್ಯಕ್ಷ ರಂಗಸ್ವಾಮಿ, ಮುಖಂಡ ಕೌಲನಹಳ್ಳಿ ಸೋಮಶೇಖರ್,&ಟಿbsಠಿ; ಪುರಸಭೆ ಸದಸ್ಯ ಮಹೇಶ್, ಜಿಲ್ಲಾ ಉಪಾಧ್ಯಕ್ಷ ರಾಜೇಗೌಡ, ವಿಕ್ರಂರಾಜ್, ಯುವಮೋರ್ಚಾ ಅಧ್ಯಕ್ಷ ಪ್ರವೀಣ್, ಸೇರಿದಂತೆ ಮತ್ತಿತರರು ಹಾಜರಿದ್ದರು.
