ಪಿರಿಯಾಪಟ್ಟಣ ತಾಲ್ಲೂಕು ಆಡಳಿ ಕಛೇರಿ ಸಭಾಂಗಣದಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ಶಾಸಕ ಕೆ.ಮಹದೇವ್ ವಿತರಿಸಿದರು. 11/01/2021

ಪಿರಿಯಾಪಟ್ಟಣ: ಸರ್ಕಾರಿ ಗೋಮಾಳ ಗಳಲ್ಲಿ ವಾಸಿಸುವರಿಗು ದಾಖಲೆ ಪರಿಶೀಲಿಸಿ ಹಕ್ಕುಪತ್ರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಶಾಸಕ ಕೆ.ಮಹದೇವ್  ತಿಳಿಸಿದರು.   ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಅಕ್ರಮ ಸಕ್ರಮದಡಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು, ಸರ್ಕಾರಿ ಕೆಲಸಗಳಿಗಾಗಿ ಸಾರ್ವಜನಿಕರು ಕಚೇರಿಗಳಿಗೆ ಪದೇಪದೆ ಭೇಟಿ ನೀಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕ್ರಮ ವಹಿಸಬೇಕು, ಸರ್ಕಾರಿ ಖರಾಬು ಹಾಗೂ ಬೀಳು ಜಾಗಗಳಲ್ಲಿ ವಾಸಿಸುತ್ತಿರುವವರ ದಾಖಲಾತಿ ಪರಿಶೀಲಿಸಿ ಹಕ್ಕು ಪತ್ರ ವಿತರಿಸಿದ್ದು ಮುಂದಿನ ದಿನಗಳಲ್ಲಿ ಯೋಜನೆಯು ಎಲ್ಲರಿಗೂ ತಲುಪುವ ನಿಟ್ಟಿನಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.   ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ ಮಾತನಾಡಿ 2014 ರಿಂದ ಅರ್ಜಿಗಳನ್ನು ಸ್ವೀಕರಿಸಿದ್ದು ಇದುವರೆಗೆ 930 ಅರ್ಜಿಗಳು ಬಂದಿದ್ದು ಯೋಜನೆಯಡಿ 120 ಅರ್ಹ  ಫಲಾನುಭವಿಗಳನ್ನು ಗುರುತಿಸಿ ಇದುವರೆಗೆ 75 ಮಂದಿಗೆ ಹಕ್ಕು ಪತ್ರ ವಿತರಿಸಿದ್ದು ಉಳಿದವರಿಗೆ ಶೀಘ್ರ ಹಕ್ಕುಪತ್ರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.   ಈ ವೇಳೆ ಕಸಬಾ ಬೆಟ್ಟದಪುರ ಹಾಗೂ ಹಾರನಹಳ್ಳಿ ಹೋಬಳಿ ವ್ಯಾಪ್ತಿಯ 45 ಮಂದಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ಶಾಸಕ ಕೆ.ಮಹದೇವ್ ವಿತರಿಸಿದರು.   ಕಾರ್ಯಕ್ರಮದಲ್ಲಿ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಶಿರಸ್ತೇದಾರ್ ಗಳಾದ ಶಕಿಲಾಬಾನು, ನಿಜಾಮುದ್ದೀನ್, ಕಂದಾಯ ಅಧಿಕಾರಿ ಪ್ರದೀಪ್ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top