ಪಟ್ಟಣದ ವಿವಿಧ ವಾರ್ಡ್ ಸಂಖ್ಯೆ 18,19,21 ಹಾಗು 23ರಲ್ಲಿ ಶಾಸಕ ಕೆ.ಮಹದೇವ್ ರವರ ಜನಸ್ಪಂದನ ಕಾರ್ಯಕ್ರಮ 11/01/2021

ಬಜೆಟ್‌ನಲ್ಲಿ ಕಡು ಬಡತನದಲ್ಲಿರುವ ಜನ ಸಾಮಾನ್ಯರಿಗೆ ಸೂಕ್ತ ಆರ್ಥಿಕ ನೆರವನ್ನು ನೀಡುವಂತ್ತೆ ಶಾಸಕ ಕೆ.ಮಹದೇವ್ ಪುರಸಭಾ ಅಧ್ಯಕ್ಷ ಮತ್ತು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ವಿವಿಧ ವಾರ್ಡ್ ಸಂಖ್ಯೆ 18,19,21 ಹಾಗು 23 ಜನಸ್ಪಂದನ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು ಅನಾರೋಗ್ಯದಿಂದಾಗಿ ಬಳಲುತ್ತಿರುವ ಕಡು ಬಡತನದ ಸಾಕಷ್ಟು ವ್ಯೆಕ್ತಿಗಳು ಆರೋಗ್ಯ ಸುದಾರಿಸಲು ಔಷಧಿ ಖರಿದೀಸಲು ಕೂಡ ಹಣವಿಲ್ಲದೆ ಪರಿತಪಿಸುತ್ತಿದ್ದು,ಇಂತಹ ಸಂದರ್ಭದಲ್ಲಿ ಪುರಸಭಾ ವ್ಯಾಪ್ತಿಯ ಜನರಿಗೆ ಪುರಭೆಯ ಬಜೆಟ್‌ನಲ್ಲಿ ಅನುದಾನವನ್ನು ಮೀಸಲಿರಿಸಿ ಆರ್ಥಿಕ ನೆರವಾಗಬೇಕು ಎಂದು ಪರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್‌ಗೆ ಸೂಚಿಸಿದರು.
ನಾನು ಶಾಸಕನಾಗಿ ಎರಡು ವರ್ಷಗಳೆ ಕಳೆದರೂ ಕೂಡ ಪಟ್ಟಣದ ಜನತೆ ನನ್ನ ಬಳಿ ಸಮಸ್ಯೆಗಳನ್ನು ಹೇಳಲು ಬರಲಿಲ್ಲ.ಆದರಿಂದ್ದ ನಾನೇ ಅವರ ಬಳಿ ತೆರಳಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡಲು ಜನಸ್ಪಂದನ ಸಭೆಗಳನ್ನು ಹಮ್ಮಿಕೊಂಡಿದ್ದೇನೆ.ಪ್ರತಿ ವಾರ್ಡ್ಗಳಿಗೆ ಭೇಟಿ ನೀಡಿದ ಸಂದರ್ಭ ಸಾಕಷ್ಟು ಸಮಸ್ಯೆಗಳನ್ನು ನಿವಾಸಿಗಳು ಹೇಳುತ್ತಿದ್ದಾರೆ.ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಬAಧಪಟ್ಟ ಇಲಾಖಾಧಿಕಾರಿಗಳಿಗೆ ಸ್ಥಳದೆ ಆದೇಶಿಸುತ್ತಿದ್ದು,ಸಾರ್ವಕನಿಕರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷೀಣ್ಯ ಕ್ರಮವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಲವಾರು ಮಂದಿ ಇಲ್ಲಿಯವರೆಗೂ ನಿವೇಶನ ಅಥಾವ ಮನೆಗಳಿಗೆ ಖಾತೆ ಮತ್ತು ಈ- ಸ್ವತ್ತನ್ನು ಮಾಡಿಸಿದೆ ನಿರ್ಲಕ್ಷತನವನ್ನು ವಹಿಸಿದ್ದಾರೆ.ಆದರೆ ಇದರಿಂದಾಗಿ ಅವರುಗಳು ತಮ್ಮ ಆಸ್ತಿಯನ್ನು ಕಳೆದುಕೊಳ್ಳುವ ಪರಿಸ್ಥತಿ ನಿರ್ಮಾಣವಾಗುತ್ತದೆ ಇದನ್ನು ಅರಿತು ಪ್ರತಿಯೊಬ್ಬರು ತಮ್ಮ ಆಸ್ತಿಗಳ ಖಾತೆ ಹಾಗೂ ಈ ಸ್ವತ್ತನ್ನು ಮಾಡಿಸಿಕೊಳ್ಳಬೇಕು.ಇದಕ್ಕಾಗಿ ಮುಂದಿನ ದಿನಗಳಲ್ಲಿ ಖಾತಾ ಅದಾಲತ್ತನ್ನು ಪ್ರಾರಂಭಿಸುತ್ತಿದ್ದೇನೆ ಈ ಯೋಜನೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಸಾರ್ವಜನಿಕರು ಸೂಕ್ತ ರಸ್ತೆ,ಚರಂಡಿ ವ್ಯವಸ್ಥೆ,ನೀರಿನ ಸರಬರಾಜು,ಅಂಗನನವಾಡಿ ಕಟ್ಟಡ ನಿರ್ಮಾಣದ ಬಗ್ಗೆ ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ನಾಗರತ್ನ ಉಮೇಶ್,ಸ್ಥಾಯಿ ಸಮಿತಿ ಅಧ್ಯಕ್ಷ ವಿನೋದ್,ಸದಸ್ಯರಾದ ಮಹೇಶ್,ನಿರಂಜನ್,ಪಿ.ಸಿ.ಕೃಷ್ಣ,ಭಾರತಿ,ಪ್ರಕಾಶ್ ಸಿಂಗ್,ಟಿಎಪಿಸಿಎAಎಸ್ ನಿರ್ದೇಶಕ ತಿಮ್ಮನಾಯಕ,ಮುಖ್ಯಾಧಿಕಾರಿ ಚಂದ್ರು ಕುಮಾರ್,ಆರೋಗ್ಯ ನಿರೀಕ್ಷಕ ಆದರ್ಶ್,ಪೊಲೀಸ್ ಎಎಸ್‌ಐ ದೊರೆಸ್ವಾಮಿ,ಕಂದಾಯ ಇಲಖೆಯ ರಾಜಸ್ವ ನಿರೀಕ್ಷಕ ಪಾಂಡು,ಮುಖAಡರಾದ ಉಮೇಶ್,ಅನ್ಸರ್,ಸಣ್ಣಸ್ವಾಮಿ ಸೇರಿದಂತ್ತೆ ಇತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top