
ಪಿರಿಯಾಪಟ್ಟಣ ತಾಲೂಕಿನ ಹುಣಸೆಕುಪ್ಪೆ ಗ್ರಾಮದಲ್ಲಿ ವಿದ್ಯುತ್ ಪ್ರವಾಹದಿಂದ ಸಾವಿಗೀಡಾದ ಹಸುವಿಗೆ ಪರಿಹಾರ ಧನವಾಗಿ ಶಾಸಕ ಕೆ ಮಹದೇವ್ 50000 ರೂ ನ ಚೆಕ್ ವಿತರಿಸಿದರು.
ಶಾಸಕರು ರೈತರ ಪರ ಧ್ವನಿ ಎತ್ತಿದರಿಂದ ತೊಂದರೆಗೀಡಾಗಿದ್ದ ರೈತನಿಗೆ ಇಲಾಖೆ ವತಿಯಿಂದ ಅತಿ ಹೆಚ್ಚು 50000 ರೂ ನಷ್ಟು ಪರಿಹಾರವಾಗಿ ನೀಡಲಾಗುತ್ತಿದೆ ಎಂದು ಸೆಸ್ಕ್ ಇಲಾಖೆಯ ಇಇ ಬಿಎಸ್ ಚಂದ್ರಶೇಖರ್ ತಿಳಿಸಿದರು.
ಪಿರಿಯಾಪಟ್ಟಣದಲ್ಲಿ ಹುಣಸೇಕುಪ್ಪೆ ಗ್ರಾಮದ ರೈತ ಮರಿಗೌಡ ಎಂಬುವವರ ಹಸು ವಿದ್ಯುತ್ ಕಂಬದಿಂದ ವಿದ್ಯುತ್ ಪ್ರವಾಹವಾಗಿ ಸಾವಿಗೀಡಾಗಿದ್ದು. ಹಸುವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಮರಿಗೌಡನ ಕುಟುಂಬಕ್ಕೆ ಆಧಾರವಾಗಿದ್ದ ಹಸು ಸಾವಿಗೀಡಾಗಿರುವ ಬಗ್ಗೆ ಶಾಸಕರಿಗೆ ಊರಿನ ಜನರು ತಿಳಿಸಿದರು. ಶಾಸಕ ಕೆ ಮಹದೇವ್ ರೈತನ ಸ್ಥಿತಿಯನ್ನು ಗಮನಿಸಿ ಆತನಿಗೆ ಮತ್ತೊಂದು ಹಸು ಖರೀದಿಗೆ ಅಗತ್ಯವಾದಷ್ಟು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇದರ ಪರಿಣಾಮವಾಗಿ ಇಲಾಖೆಯಿಂದ 50 ಸಾವಿರ ರೂ ಚೆಕ್ ನೀಡಲಾಗುತ್ತಿದೆ. ಸಾಮಾನ್ಯ ಸಂದರ್ಭದಲ್ಲಿ 10ರಿಂದ 15 ಸಾವಿರದಷ್ಟು ಮಾತ್ರ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.