ಶಾಸಕ ಕೆ ಮಹದೇವ್ ರವರ ಮೊದಲ ಹಂತದ ಜನಸ್ಪಂದನ ಕಾರ್ಯಕ್ರಮವು ಯಶಸ್ವಿಯಾಗಿದೆ. 28/12/2020 – 29/12/2020

ದಿನಾಂಕ ೨೮/೧೨/೨೦೨೦ ರಂದು ವಾರ್ಡ್ ನಂ. ೧ ಹರವೆ ಮಲ್ಲರಾಜಪಟ್ಟಣ , ವಾರ್ಡ್ ನಂ. ೨ ಮೆಲ್ಲಹಳ್ಳಿ ಗ್ರಾಮ , ವಾರ್ಡ್ ನಂ. ೩  ಮತ್ತು ೪ ಪುರಸಭಾ ನೂತನ ಕಟ್ಟಡ ಹಾಗು ದಿನಾಂಕ ೨೯/೧೨/೨೦೨೦ ರಂದು ವಾರ್ಡ್ ನಂ. ೮ ಉಪ್ಪಾರಗೇರಿ ಸಮುದಾಯಭವನ , ವಾರ್ಡ್ ನಂ.  ೭ ಒಳಕೋಟೆ ಉಪ್ಪಾರ ಸಮುದಾಯಭವನ, ವಾರ್ಡ್ ನಂ. ೬ ರೋಟರಿ ಸಮುದಾಯಭವನ , ವಾರ್ಡ್ ನಂ. ೫ ಶ್ರೀ ಕೋದಂಡರಾಮ ಭವನದಲ್ಲಿ ಆಯೋಜಿಸಲಾಗಿತ್ತು.

ಸ್ಥಳದಲ್ಲಿದ್ದ ನಾಗರಿಕರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಮಾತನಾಡಿದ ಅವರು ಮೂಲಭೂತ ಸೌಕರ್ಯಗಳ ಸಮಸ್ಯೆ ಬಗೆಹರಿಸಲು ಪುರಸಭೆ ವತಿಯಿಂದ ಹಣದ ಕೊರತೆಯಾದರೆ ನನ್ನ ಗಮನಕ್ಕೆ ತನ್ನಿ ಸರ್ಕಾರದಿಂದ ಅನುದಾನ ತರಲು ಪ್ರಯತ್ನ ಮಾಡುವೆ, ಪಟ್ಟಣ ವ್ಯಾಪ್ತಿಯ  ವಯೋವೃದ್ಧರು, ಅಂಗವಿಕಲರು ಹಾಗೂ ವಿಧವೆಯರಿಗೆ ಮಾಸಾಶನ ವಿತರಿಸಲು ಪುರಸಭೆ ಸಿಬ್ಬಂದಿ ಅಗತ್ಯ ಕ್ರಮ ಕೈಗೊಳ್ಳಬೇಕು, ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಬೇಕು, ಕುಡಿಯುವ ನೀರು ಮತ್ತು ಬೀದಿ ದೀಪ ನಿರ್ವಹಣೆ ಸಂಬಂಧ ಸಾರ್ವಜನಿಕರಿಂದ ದೂರುಗಳು ಬರದಂತೆ ಎಚ್ಚರಿಕೆ ವಹಿಸಬೇಕು, ಯುಜಿಡಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಸಮರ್ಪಕ ವೈಜ್ಞಾನಿಕ ಕಾಮಗಾರಿಗೆ ಒತ್ತು ನೀಡುವಂತೆ ತಿಳಿಸಿ ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಗಳನ್ನು ಶೀಘ್ರ ಅಧಿಕಾರಿಗಳು ಮತ್ತು ಸಿಬ್ಬಂದಿ ಸದಸ್ಯರ ಸಹಕಾರದೊಂದಿಗೆ ಬಗೆಹರಿಸಲು ಪ್ರಯತ್ನಿಸಿ ಮತ್ತೊಮ್ಮೆ ಈ ಭಾಗಕ್ಕೆ ಭೇಟಿ ನೀಡಿದಾಗ ದೂರುಗಳು ಬರದಂತೆ ಎಚ್ಚರಿಕೆ ನೀಡಿದರು. ಸಾರ್ವಜನಿಕರು ಸರ್ಕಾರದ ವತಿಯಿಂದ ಕಡಿಮೆ ಹಣದಲ್ಲಿ ವಿವಿಧ ಬ್ಯಾಂಕ್ ಗಳ ಮುಖಾಂತರ ನೀಡುವ ವಿಮಾ ಪಾಲಿಸಿಯನ್ನು ಮಾಡಿಸುವಂತೆ ಕೋರಿದರು.

ಈ ಸಂದರ್ಭ ಪುರಸಭಾ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ಪ್ರಕಾಶ್ ಸಿಂಗ್, ಸುವರ್ಣ, ಪಿ.ಸಿ ಕೃಷ್ಣ, ಪಿ.ಎನ್ ವಿನೋದ್, ನಿರಂಜನ್, ಭಾರತಿ, ಸುವರ್ಣ, ಕಂದಾಯ ನಿರೀಕ್ಷಕ ಪಾಂಡುರಂಗ, ಆಹಾರ ನಿರೀಕ್ಷಕರಾದ ಆದರ್ಶ, ಪ್ರದೀಪ್, ಮುಖಂಡರಾದ ಸೈಯದ್ ಇಲಿಯಾಸ್, ರಘುನಾಥ, ಪುರಸಭೆ ಸಿಬ್ಬಂದಿ ಮತ್ತು ಸಾರ್ವಜನಿಕರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top