
ಶಾಸಕ ಕೆ.ಮಹದೇವ್ ರವರು ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಹಾಗು ರೈತ ಸಂಪರ್ಕ ಕೇಂದ್ರದ ಉದ್ಘಾಟನೆ ನಡೆಸಿದರು.

ಬೆಟ್ಟದಪುರದಲ್ಲಿ 18.50 ಲಕ್ಷ ರೂ ವೆಚ್ಚದ ಅಟಲ್ ಜಿ ಜನಸ್ನೇಹಿ ಕೇಂದ್ರ, ಚಿಕ್ಕನೇರಳೆ ಗ್ರಾಮದಲ್ಲಿ 35.೦೦ ರೂ ವೆಚ್ಚದ ಪಶು ಆಸ್ಪತ್ರೆ ಕಟ್ಟಡ, ವಡೇರಹೊಸಹಳ್ಳಿ ಗ್ರಾಮದಲ್ಲಿ 20.೦೦ ಲಕ್ಷ ರೂ ವೆಚ್ಚದ ಮುಖ್ಯಮಂತ್ರಿ ಗ್ರಾಮ ವಿಕಾಸ್ ಯೋಜನೆಯ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗು ಬೆಟ್ಟದಪುರದಲ್ಲಿ 50.೦೦ ಲಕ್ಷ ರೂ ವೆಚ್ಚದ ರೈತ ಸಂಪರ್ಕ ಕೇಂದ್ರದ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದರು.

ರಿಯಾಯಿತಿ ದರದಲ್ಲಿ ಹುಲ್ಲು ಕಟಾವು ಮಾಡುವ ಯಂತ್ರವನ್ನು ರೈತರಿಗೆ ವಿತರಿಸಿದರು.
60 ಕ್ಕೂ ಹೆಚ್ಚು ಫಲಾನುಭವಿಗಳಿಗೆ ವಿಧವಾ ವೇತನ, ವೃದಾಪ್ಯ ವೇತನ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿದರು.
ಬೆಟ್ಟದಪುರ ಪಟ್ಟಣ ಬೆಳೆದಂತೆ ಸಾರ್ವಜನಿಕರ ಸಮಸ್ಯೆಗಳು ಏರುಗತಿಯಲ್ಲಿ ಸಾಗುತ್ತಿವೆ, ಅದಕ್ಕೆ ತಕ್ಷಣವೇ ಸ್ಪಂದಿಸಿ ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿದರೆ ಮಾತ್ರ ಜನರ ನಂಬಿಕೆಗೆ ಅರ್ಹರಾಗುತ್ತೇವೆ ಎಂದು ತಿಳಿಸಿದರು. ಗ್ರಾಮಸ್ಥರ ಹಲವು ದಿನಗಳ ಬೇಡಿಕೆಯಾಗಿರುವ ಕಾವೇರಿ ನದಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಲು ಬೇಕಾದ ಎಲ್ಲ ಕಾರ್ಯ ಯೋಜನೆಗಳನ್ನು ಕೈಗೊಳ್ಲಲಾಗಿದೆ ಎಂದು ತಿಳಿಸಿದರು ಹಾಗು ಬೆಟ್ಟದಪುರ ಹೋಬಳಿ ಕೇಂದ್ರದಲ್ಲಿ ರಾಗಿ ಖರೀದಿ ಕೇಂದ್ರವನ್ನು ರೈತರ ಅನುಕೂಲಕ್ಕಾಗಿ ನೂತನವಾಗಿ ಪ್ರಾರಂಭಿಸಲು ಬೇಕಾದ ಎಲ್ಲ ಸಿದ್ಧತೆ ಮಾಡಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಸಿಲ್ದಾರ್ ಶ್ವೇತ ಎನ್ ರವೀಂದ್ರ , ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ.ರಂಗಸ್ವಾಮಿ , ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಘುನಾಥ್, ಎ ಇ ಇ ಪ್ರಭು, ರೈತ ಮುಖಂಡರಾದ ದೇವರಾಜು ಸೇರಿದಂತೆ, ಗ್ರಾಮ ಪಂಚಾಯಿತಿ ಸದಸ್ಯರುಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಮತ್ತಿತರರು ಹಾಜರಿದ್ದರು.