
ಕಿತ್ತೂರು ಗ್ರಾಮದಿಂದ ದಾಸೇಗೌಡನ ಕೊಪ್ಪಲು ಸೇರುವ ರಸ್ತೆ, ರಾವಂದೂರು – ಚಿಕ್ಕಮಳಲಿ ರಸ್ತೆಯ ಕೋತ್ತವಳ್ಳಿ ಕ್ರಾಸ್ ನಿಂದ ಕೋತ್ತವಳ್ಳಿ ಕೊಪ್ಪಲು, ಕೋತ್ತವಳ್ಳಿ ಮುಖಾಂತರ ಟಿ.ಬೋರೇಕೊಪ್ಪಲು ಸೇರುವ ರಸ್ತೆ ಹಾಗು ರಾವಂದೂರಿನಲ್ಲಿ ಅಟಲ್ ಜಿ ಜನಸ್ನೇಹಿ ಕೇಂದ್ರ (ನಾಡ ಕಚೇರಿ ) ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು ಸರ್ಕಾರಿ ಸವಲತ್ತುಗಳು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು. ಪ್ರತಿ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಮಸ್ಯೆಗಳು ಹರಿದುಬರುತ್ತಿದೆ ಎಲ್ಲಾ ಸಮಸ್ಯೆಗಳನ್ನು ಒಮ್ಮೆಲೆ ಬಗೆಹರಿಸಲು ಸಾಧ್ಯವಾಗಿಲ್ಲ. ಹಂತಹಂತವಾಗಿ ಬಗೆಹರಿಸಲು ಯತ್ನಿಸುವುದಾಗಿ ಭರವಸೆ ನೀಡಿದರು. ಶಾಸಕನಾಗಿ ಆಯ್ಕೆ ಆದಾಗಿನಿಂದ ಸರ್ಕಾರದಿಂದ ಅನುದಾನ ತರಲು ಅವಿರತವಾಗಿ ಶ್ರಮಿಸುತ್ತಿದ್ದೇನೆ. ಶೀಘ್ರದಲ್ಲೇ ತಾಲೂಕಿನ ಮಹತ್ವದ ಯೋಜನೆಯಾದ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಪೂರ್ಣಗೊಳ್ಳಲಿದೆ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಲೋಕಾರ್ಪಣೆ ಗೊಳಿಸುವುದಾಗಿ ತಿಳಿಸಿದರು.
ಇದೆ ಸಂದರ್ಭದಲ್ಲಿ 60 ಕ್ಕೂ ಹೆಚ್ಚು ಫಲಾನುಭವಿಗಳಿಗೆ ವಿಧವಾ ವೇತನ, ವೃದಾಪ್ಯ ವೇತನ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಕೆಂಚಯ್ಯ, ಇ.ಓ. ಡಿ.ಸಿ. ಶೃತಿ, ಕೃಷಿ ಸಹಾಯಕ ನಿರ್ದೇಶಕ ಶಿವಕುಮಾರ್, ಬಿ.ಇ.ಒ.ತಿಮ್ಮೆ ಗೌಡ ,ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಿ ಮುಖಂಡರಾದ ಆರೆಲ್ ಮಣಿ ಅಣ್ಣಯ್ಯ ಶೆಟ್ಟಿ ವಿಜಯಕುಮಾರ್ ನಂದೀಶ್ ರಾಮಚಂದ್ರು ಬಸವರಾಜ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.