ಪಟ್ಟಣದ ಮಂಜುನಾಥ ಸ್ವಾಮಿ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಮತ್ತು ಪರಾಭವಗೊಂಡ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂಧನಾ ಸಮಾರಂಭ 16/01/2021

ನಾನು ಅಧಿಕಾರಕ್ಕೆ ಬಂದ ನಂತರ ತಾಲ್ಲೂಕಿನ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು.ನಮ್ಮ ಪಕ್ಷವು ಆಡಳಿತದಲ್ಲಿಲದಿದ್ದರು ಬಿಜೆಪಿ ಪಕ್ಷದ ಮಂತ್ರಿಗಳ ಬಳಿ ಶ್ರಮಿಸಿ ಅನುದಾನಗಳನ್ನು ತಂದು ಅಭಿವೃದ್ದಿ ಕಾಮಗಾರಿಗಳನ್ನು ಮಾಡುತ್ತಿದ್ದೇನೆ.ಇದನ್ನು ಸಹಿಸದ ಮಾಜಿ ಶಾಸಕರು ನನ್ನ ಮೇಲೆ ಭ್ರಷ್ಟಚಾರದ ಆರೋಪ ಮಾಡುತ್ತಿದ್ದಾರೆ.ಈ ಆರೋಪಗಳನ್ನು ಸಾಬೀತುಪಡಿಸಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಕೆ.ಮಹದೇವ್ ಸವಾಲೆಸೆದರು.ನಾನು ಶಾಸಕನಾಗಲು ತಾಲ್ಲೂಕಿನ ಜನತೆ ಮತ್ತು ಪಕ್ಷದ ಕಾರ್ಯಕರ್ತರು ಕಾರಣರಾಗಿದ್ದಾರೆ.ಇವರಿಗೆ ಎಂದಿಗೂ ಮೋಸ ಮಾಡುವುದಿಲ್ಲ.ಆದರಿಂದ್ದ ಯಾರೂ ಕೂಡ ಸುಳ್ಳು ಆರೋಪಗಳಿಗೆ ಕಿವಿಗೊಡದೆ ತಾಲ್ಲೂಕಿನ ಅಭಿವೃದ್ದಿಗೆ ಸಹಕರಿಸಬೇಕು ಮತ್ತು ನೂತನವಾಗಿ ಚುನಾಯಿತ ಪ್ರತಿನಿಧಿಗಳಾಗಿರುವವರು ಸಾರ್ವಜನಿಕ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವುದರ ಮೂಲಕ ಇತರರಿಗೆ ಮಾದರಿಯಾಗಬೇಕು.ನಿಮ್ಮೊಂದಿಗೆ ನಾನಿದ್ದೇನೆ ಯಾವುದೇ ಸಂದರ್ಭದಲ್ಲಿಯೂ ಧೃತಿಗೇಡಬೇಕಾಗಿಲ್ಲ ಹಾಗೂ ಪರಾಭವಗೊಂಡ ಅಭ್ಯರ್ಥಿಗಳು ಕೂಡ ಸೋಲನ್ನು ಮನಸ್ಸಿಗೆ ಹಾಕಿಕೊಳ್ಳದೆ ಮುಂದೆ ಗೆಲವು ಸಾಧಿಸಲು ಮಾಡಬೇಕಾದ ಯೋಜನೆಗಳ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.

ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಮಾತನಾಡಿ ಕಾರ್ಯಕರ್ತರು ಪ್ರತಿ ಸಂದರ್ಭದಲ್ಲೂ ಉತ್ಸಾಹ ಮತ್ತು ಧೈರ್ಯದಿಂದ ಪಕ್ಷ ಸಂಘಟನೆಯನ್ನು ಮಾಡಬೇಕು.ಪಕ್ಷದ ಬಲವರ್ಧನೆಗಾಗಿ ಯಾವುದೇ ಅಧಿಕಾರದ ತ್ಯಾಗಕ್ಕೂ ಕಾರ್ಯಕರ್ತರು ಸಿದ್ದವಿರಬೇಕು.ಶಾಸಕರು ಈಗಾಗಲೆ 400 ಕೋಟಿ ರೂಗಳ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ.ಆದರೆ ಇದನ್ನು ಸಹಿಸದವರು ಸುಳ್ಳು ಆರೋಪ ಮಾಡುತ್ತಿದ್ದಾರೆ.ಚುನಾವಣೆಗಳ ಮೂಲಕ ಇದಕ್ಕೆಲ್ಲಾ ತಕ್ಕ ಉತ್ತರ ನೀಡಲು ಪಕ್ಷವನ್ನು ಬಲಪಡಿಸಬೇಕು ಎಂದರು. ನನ್ನನು ಮೈಮುಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡದಂತ್ತೆ ಮಾಡಲು ಬಿಜೆಪಿ ಪಕ್ಷದ ಮಂತ್ರಿಗಳ ಬಳಿ ಹೋಗಿ ದೂರುಗಳನ್ನು ಮಾಜಿ ಶಾಸಕ ಕೆ.ವೆಂಕಟೇಶ್ ನೀಡುತ್ತಿದ್ದಾರೆ.ಆದರೆ ನಾನು ಯಾವುದೇ ತನಿಖೆಗೂ ಸಿದ್ದನಿದ್ದೇನೆ.ಚುನಾವಣೆಯಲ್ಲಿ ಗೆಲ್ಲಲು ಸಾರ್ವಜನಿಕರ ವಿಶ್ವಾಸವೇ ಮುಖ್ಯವೆ ಹೊರೆತು ಹಣ,ಆಮಿಷಗಳಲ್ಲ ಇದನ್ನು ಮಾಜಿ ಶಾಸಕರು ಅರ್ಥೈಯಿಸಿಕೊಳ್ಳಬೇಕು.ನಾನು ಮೈಮುಲ್ ನಿರ್ದೇಶಕನಾದ ಬಳಿಕ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಈ ಕ್ಷೇತ್ರದಲ್ಲಿ ಮಾಡಿದ್ದೇನೆ.ಆದರಿಂದ್ದ ಮುಂದಿನ ದಿನಗಳಲ್ಲಿ ಮೈಮುಲ್ ನಿರ್ದೇಶಕ ಸ್ಥಾನದ ಚುನಾವಣೆ ಬರುತ್ತಿದ್ದು ನನ್ನ ಗೆಲುವಿಗೆ ತಾಲ್ಲೂಕಿನ ಜನತೆ ಸಹಕರಿಸಿ ತಮ್ಮಗಳ ಸೇವೆ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಗೊಂಡ ಗ್ರಾಮ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಜಿ ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜುನಾಥ್,ಸದಸ್ಯ ಜಯಕುಮಾರ್,ತಾ ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ.ರಂಗಸ್ವಾಮಿ,ಸದಸ್ಯ ಐಲಾಪುರ ರಾಮು,ಟಿ.ಈರಯ್ಯ,ಜಯಂತಿ ಸೋಮಶೇಖರ್,ಮೋಹನ್ ರಾಜ್,ಶೋಭ,ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್,ಉಪಾಧ್ಯಕ್ಷೆ ನಾಗರತ್ನ ಉಮೇಶ್,ಸ್ಥಾಯಿ ಸಮಿತಿ ಅಧ್ಯಕ್ಷ ವಿನೋದ್,ಸದಸ್ಯ ಪ್ರಕಾಶ್ ಸಿಂಗ್ ನಿರಂಜನ್,ಪಿ.ಸಿ.ಕೃಷ್ಣ,ಭಾರತಿ,ಆಶಾ,ಪುಷ್ಪ,ಮಹೇಶ್,ಎ0ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ರವಿ,ಟಿಎಪಿಸಿಎಂಎಸ್ ಅಧ್ಯಕ್ಷ ತಿಮ್ಮೆಗೌಡ,ನಿರ್ದೇಶಕ ತಿಮ್ಮ ನಾಯಕ,ದೊರೆಕೆರೆ ನಾಗೇಂದ್ರ,ಮುಖ0ಡರಾದ ರಘುನಾಥ್,ಅಣ್ಣಯ್ಯಶೆಟ್ಟಿ,ಎಸ್‌ಆರ್‌ಎಸ್ ಗೌಡ,ಅತ್ತರ್ ಮತ್ತೀನ್,ಆರ್.ಎಲ್.ಮಣಿ.ವಿದ್ಯಾಶಂಕರ್ ಸೇರಿದಂತ್ತೆ ಇತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top