ಕಂಪಲಾಪುರದಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಶಾಸಕ ಕೆ ಮಹದೇವ್ ಚಾಲನೆ ನೀಡಿದರು. 18/01/2021

ಪಿರಿಯಾಪಟ್ಟಣ: ತಾಲೂಕಿನ ಕಂಪಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಶಾಸಕ ಕೆ.ಮಹದೇವ್ ಸೋಮವಾರ ಚಾಲನೆ ನೀಡಿದರು.

 ನಂತರ ಮಾತನಾಡಿ ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸನ್ನದ್ದವಾಗಿದ್ದು ಕೋವಿಡ್ ಲಸಿಕೆಯನ್ನ ಬಿಡುಗಡೆಗೊಳಿಸಿದೆ.ಕೊರೊನಾ ಸಂಕಷ್ಟದ ಸಮಯದಲ್ಲಿ ಜೀವವನ್ನು ಲೆಕ್ಕಿಸದೆ ದುಡಿದ ಆರೋಗ್ಯ ಸಿಬ್ಬಂದಿಗೆ ಮೊದಲನೆಯದಾಗಿ ಲಸಿಕೆ ನೀಡಲಾಗುತ್ತಿದ್ದು , ಮುಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ ಈ ಲಸಿಕೆ ತಲುಪಲಿದೆ   ಲಸಿಕೆ ಪಡೆದುಕೊಂಡರೂ ಕೂಡ  ಆರೋಗ್ಯ ದ ಬಗ್ಗೆ  ನಿರ್ಲಕ್ಷ್ಯ ಬೇಡ, ಜಾಗರೂಕತೆ ಮುಖ್ಯ   ಎಂದರು.   

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು ಮಾತನಾಡಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ , ಯಾರೂ ಸಹ ಆತಂಕಕ್ಕೆ ಒಳಗಾಗಬಾರದು. ಪ್ರತಿ ದಿನ ನಿಗಧಿಯಾದಷ್ಟು ಮಂದಿಗೆ ಮಾತ್ರ ಲಸಿಕೆ ನೀಡಬೇಕು ಹೆಚ್ಚುವರಿಯಾಗಿ ಒಬ್ಬರಿಗೂ  ಈ ಲಸಿಕೆಯನ್ನು ನೀಡಲಾಗುವುದಿಲ್ಲ.ಲಸಿಕೆ ಹಾಕಿಸಿಕೊಂಡರೂ ಮಾಸ್ಕ್ , ಸಾಮಾಜಿಕ ಅಂತರ   ಕಡ್ಡಾಯ ಈ ನಿಯಮವನ್ನು ಎಲ್ಲರೂ ಪಾಲಿಸಬೇಕು ಆಗ ಕೊರೊನಾ ನಿಯಂತ್ರಣ ಸಾದ್ಯ ಎಂದರು.

 ಕಂಪಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 53 ಮಂದಿ ಆರೋಗ್ಯ ಸಿಬ್ಬಂದಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು ,  ಮದ್ಯಾಹ್ನ  3 ಗಂಟೆಯ ವರೆಗೆ 33 ಮಂದಿಗೆ ಲಸಿಕೆ ನೀಡಲಾಯಿತು.

 ಈ ಸಂದರ್ಭದಲ್ಲಿ ವೈಧ್ಯಾಧಿಕಾರಿ ಡಾ.ಪ್ರಸನ್ನಕುಮಾರ್ , ಸಹಕಾರ ಸಂಘದ ಅಧ್ಯಕ್ಷ ಕೆ.ಕುಮಾರ್, ನಿರ್ದೇಶಕ ಕೆ.ಎಂ.ಲಕ್ಷ್ಮಣ್, ಗ್ರಾ.ಪಂ.ಪಿಡಿಒ ಪರಮೇಶ್, ಸುಮಿತ್ರಾ , ಮಾಜಿ ಅಧ್ಯಕ್ಷ ರಾದ ಕೃಷ್ಣ , ಗಿರೀಶ್, ಭದ್ರೇಗೌಡ  ಅರೋಗ್ಯ     ಸಹಾಯಕರಾದ ಹೇಮಲತಾ , ಕಾವೇರಮ್ಮ , ವಿಶ್ವಜ್ಙ , ಧಾರುಣಾವತಿ , ಸುವರ್ಣ, ಜಮುನಾ , ಅನಿಲ್ , ಸೇರಿದಂತೆ ಅಂಗನವಾಡಿ , ಆಶಾ ಕಾರ್ಯಕರ್ತೆ ಯರು ಸೇರಿದಂತೆ ಚುನಾಯಿತ ಗ್ರಾ.ಪಂ.  ಸದಸ್ಯರು   ಹಾಜರಿದ್ದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು , ವೈಧ್ಯಾಧಿಕಾರಿ ಡಾ.ಪ್ರಸನ್ನ ಕುಮಾರ್ , ಕೆ.ಕುಮಾರ್ ,ಕೆ.ಎಂ.ಲಕ್ಷ್ಮಣ್ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top