ಶಾಸಕ ಕೆ.ಮಹದೇವ್ ತಾಲ್ಲೂಕಿನ ವ್ಯಾಪ್ತಿಯಲ್ಲಿ ರೂ 5.02 ಕೋಟಿ ವೆಚ್ಚದಲ್ಲಿ ಪದವಿ ಪೂರ್ವ ಕಾಲೇಜುಗಳ ಕೊಠಡಿಗಳನ್ನು ಉದ್ಘಾಟಿಸಿದರು. 22/01/2021

ಶಾಸಕ ಕೆ.ಮಹದೇವ್ ತಾಲ್ಲೂಕಿನ ವ್ಯಾಪ್ತಿಯಲ್ಲಿ ರೂ 5.02 ಕೋಟಿ ವೆಚ್ಚದಲ್ಲಿ ಪದವಿ ಪೂರ್ವ ಕಾಲೇಜುಗಳ ಕೊಠಡಿಗಳನ್ನು ಉದ್ಘಾಟಿಸಿದರು.

ಪಿರಿಯಾಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜು ಕೊಠಡಿ. ರೂ 42.75 ಲಕ್ಷ, ಬಾಲಕಿಯರ ಪದವಿಪೂರ್ವ ಕಾಲೇಜು ಕೊಠಡಿ. ರೂ 100.00 ಲಕ್ಷ, ಬಾಲಕಿಯರ ಪದವಿಪೂರ್ವ ಕಾಲೇಜು(ಪ್ರೌಢ ಶಾಲಾ ವಿಭಾಗ   ) ಕೊಠಡಿ. ರೂ 31.50 ಲಕ್ಷ, ದೊಡ್ಡಬೇಳಲು ವಿನಲ್ಲಿ ಸರ್ಕಾರಿ ಪ್ರೌಢ ಶಾಲಾ ಕೊಠಡಿ ರೂ 31.50 ಲಕ್ಷ, ಕಿತ್ತೂರಿನಲ್ಲಿ ಪದವಿಪೂರ್ವ ಕಾಲೇಜಿನ ಕೊಠಡಿ ರೂ 50.55 ಲಕ್ಷ, ಬೆಟ್ಟದಪುರದಲ್ಲಿ ಪದವಿಪೂರ್ವ ಕಾಲೇಜು ಕೊಠಡಿ ರೂ 100.00 ಲಕ್ಷ, ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಕೊಠಡಿ ರೂ 47.25 ಲಕ್ಷ, ಹಾಗೂ ಪದವಿಪೂರ್ವ ಕಾಲೇಜು ಕೊಠಡಿ ರೂ 94.50 ಲಕ್ಷ.  ಉದ್ಘಾಟಿಸಿದರು

ಸಮಾಜದ ಸೃಜನಾತ್ಮಕ ಏಳಿಗೆಯಲ್ಲಿ ಶಿಕ್ಷಣಾಲಯಗಳ ಪಾತ್ರ ಪ್ರಧಾನವಾಗಿದೆ ಎಂದರು. ಕೋವಿಡ್ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಸುಧಾರಿತ ವಾತಾವರಣ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು.

ಕಳೆದ ಎರಡುವರೆ ವರ್ಷದ ಅವಧಿಯಲ್ಲಿ ತಾಲ್ಲೂಕಿನಾದ್ಯಂತ ಹಲವು ಶಾಲೆಗಳಿಗೆ ನೂತನ ಕಟ್ಟಡ, ಕಾಂಪೌಂಡ್ ನಿರ್ಮಾಣ, ಶೌಚಾಲಯಗಳು, ವಿದ್ಯುತ್ ಸಂಪರ್ಕ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳು ಈ  ಸೌಲಭ್ಯವನ್ನು ಬಳಸಿಕೊಂಡು ಉತ್ಸುಕತೆಯಿಂದ ಓದಿನಲ್ಲಿ ತಲಿನರಾಗಿ ಉನ್ನತ ಹುದ್ದೆಗಳನ್ನು ಪಡೆಯಬೇಕು ಎಂದು ಆಶಿಸಿದರು. 

ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿಯೂ ಪ್ರಬುದ್ಧ ಶಿಕ್ಷಕ ವೃಂದ ಮತ್ತು ಅತ್ಯಾಧುನಿಕ ತತಂತ್ರಜ್ಞಾನ ಸಹಿತದ ಶಿಕ್ಷಣ ಸಾರ್ವಜನಿಕ ಶಿಕ್ಷಣಾಲಯಗಳ ಏಳಿಗೆಗೆ ಪ್ರಧಾನ ಕಾರಣ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 45 ತರಗತಿಗಳು ಸ್ಮಾರ್ಟ್ ಕ್ಲಾಸ್ಗಳಾಗಿ ಭಡ್ತಿ ಪಡೆದಿವೆ. ಈ ವಿಚಾರ ಇನ್ನೂ ಮುಂದುವರಿಯಲಿದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಕೆ.ಎಸ್. ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಅಧ್ಯಕ್ಷ ಮಂಜುನಾಥ್ ಸಿಂಗ್, ಸ್ಥಾಯಿ ಸಮಿತಿ ಅಧ್ಯಕ್ಷ ವಿನೋದ್ ಕುಮಾರ್, ಸದಸ್ಯರಾದ ಪಿಸಿ ಕೃಷ್ಣ, ಕೆ ಮಹೇಶ್, ನಿರಂಜನ್, ಶಿಕ್ಷಣಾಧಿಕಾರಿ ತಿಮ್ಮೇಗೌಡ, ನಾಗರಾಜ್, ಶಿವಕುಮಾರ್, ಶಿರಸ್ತೇದಾರ್ ಶಕೀಲಬಾನು,ಪಾಂಡು ಉಪನ್ಯಾಸಕರಾದ ಜಯಣ್ಣ, ಜ್ಯೋತಿಪ್ರಸಾದ್, ದಿವ್ಯಾ, ಅದ್ಯಾಪಕರುಗಳಾದ ಎ.ಎಸ್. ನಾರಾಯಣ್‌ಗೌಡ, ಗೊರಳ್ಳಿ ಜಗಧಿಶ್ ಸೆರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top