
ಬಹಳ ವರ್ಷಗಳಿಂದಲ್ಲೂ ಗ್ರಾಮಾಂತರ ಪ್ರದೇಶದ ಜನತೆಗೆ ತಮ್ಮ ಆಸ್ತಿಗಳ ಬಗ್ಗೆ ಸೂಕ್ತ ದಾಖಲೆಗಳಿಲ್ಲದೆ ಸಾಲ ಸೌಲಭ್ಯ ಸೇರಿದಂತ್ತೆ ಇನ್ನಿತರೆ ಉಪಯೋಗವನ್ನು ಪಡೆಯಲು ಸಂಕಷ್ಟ ಎದುರಾಗಿತ್ತು.ಇದನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ಸ್ವಮಿತ್ವ ಯೋಜನೆಯನ್ನು ಜಾರಿಗೆ ತಂದು ಡ್ರೋನ್‌ನಿಂದ ಜಮೀನು,ಮನೆ,ಸರ್ಕಾರಿ ಸ್ಥಳಗಳನ್ನು ವೈಜ್ಞಾನಿಕ ತಂತ್ರಜ್ಞಾನದ ಮೂಲಕ ಸರ್ವೆ ಮಾಡಿಸಿ ಅನುಬೋಗದಾರರಿಗೆ ಪ್ರಾಪರ್ಟಿ ಕಾರ್ಡ್ನ್ನು ವಿತರಿಸುವಂತ್ತೆ ಮಾಡಿದ್ದಾರೆ.ಇದರಿಂದಾಗಿ ಬಹಳ ವರ್ಷಗಳಿಂದ್ದ ಆಸ್ತಿಯ ಬಗ್ಗೆ ಜನರಲ್ಲಿದ್ದ ಗೊಂದಲ ಮತ್ತು ಘರ್ಷಣೆಗಳು ಅಂತ್ಯವಾಗುತ್ತದೆ.ಆದರಿAದ್ದ ಈ ಸ್ವಮಿತ್ವ ಯೋಜನೆಗೆ ಜನತೆಯು ಇಲಾಖೆಯೊಂದಿಗೆ ಸಹಕಾರ ನೀಡಿದರೆ ತಮ್ಮ ಆಸ್ತಿಗಳನ್ನು ರಕ್ಷಿಸಲು ಸಾಧ್ಯ ಎಂದರು.

ಭೂ ಮಾಪನ ಇಲಾಖಾಧಿಕಾರಿ ಚಿಕ್ಕಣ ಮಾತನಾಡಿ ಈ ಸ್ವಮಿತ ಯೋಜನೆಯನ್ನು ಯಶಸ್ವಿಗೊಳಿಸಲು ಕಂದಾಯ ಇಲಾಖೆ ಮತ್ತು ಪಂಚಾಯಿತಿ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಭೂ ಮಾಪನ ಇಲಾಖೆಯೂ ಕಾರ್ಯ ನಿರ್ವಹಿಸುತ್ತಿದೆ.ಗ್ರಾಮದ ವ್ಯಾಪ್ತಿಯ ಸ್ಥಳಗಳು ಸೇರಿದಂತ್ತೆ ಇನ್ನಿತರೆ ಸಾರ್ವಜನಿಕ ಆಸ್ತಿಗಳನ್ನು ಗುರುತಿಸಲು ಈ ಯೋಜನೆ ಸಹಕಾರಿಯಾಗಿದೆ.ಕರ್ನಾಟಕದಲ್ಲಿ 16 ಜಿಲ್ಲೆಗಳು ಆಯ್ಕೆಯಾಗಿದ್ದು,ಇದರಲ್ಲಿ ಮೈಸೂರು ಕೂಡ ಸೇರಿದೆ.ಅದರಂತ್ತೆ ನಮ್ಮ ತಾಲ್ಲೂಕಿನಲ್ಲಿ ಈಗಾಗಲೆ 5 ಗ್ರಾಮ ಪಂಚಾಯಿತಿಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಂಡಿದೆ.ಆದರಿAದ್ದ ನಮ್ಮ ಸಿಬ್ಬಂದಿಗಳು ತಮ್ಮ ಗ್ರಾಮಕ್ಕೆ ಸರ್ವೆ ಕಾರ್ಯಕ್ಕೆ ಬಂದಾಗ ಅವರಿಗೆ ನಿಮ್ಮ ಆಸ್ತಿ ವಿವಿರಗಳನ್ನು ಸಂಪೂರ್ಣವಾಗಿ ನೀಡಿದರೆ ಅವುಗಳ ಅಳತೆ ಮಾಡಿ ದಾಖಲೆಗಳನ್ನು ನೀಡುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ.ರಂಗಸ್ವಾಮಿ,ಗ್ರಾ ಪಂ ಸದಸ್ಯ ಸೀಗೂರು ವಿಜಯ್ ಕುಮಾರ್,ಅನಿಲ್ ಕುಮಾರ್,ಕಾಮರಾಜು,ಮೀನಾಕ್ಷಮ,ಮಂಜುನಾಯಕ,ಸಮಾಜ ಕಲ್ಯಾಣಾ ಇಲಾಖಾದಿಕಾರಿ ಸಿದ್ದೇಗೌಡ,ಎಇಇ ನಾಗರಾಜು,ಪ್ರಭು,ನರೇಗಾ ಸಹಾಯಕ ನಿರ್ದೇಶಕ ರಘುನಾಥ್, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಶ್ರೀಧರ್,ಗ್ರಾಪಂ ಅಭಿವೃದ್ದಿ ಅಧಿಕಾರಿ ಪ್ರಶಾಂತ್,ಮುಖAಡರಾದ ಜಯಶಂಕರ್,ಮಹದೇವ್,ಶಿವಶAಕರ್ ಸೇರಿದಂತ್ತೆ ಇತರರು ಹಾಜರಿದ್ದರು.