ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟೀಯ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಲ್ಸ್ ಪೋಲಿಯೋ ಲಸಿಕೆಯ ಮೂಲಕ ಮಕ್ಕಳನ್ನು ಪೋಲಿಯೋ ಪಿಡುಗಿನ ತೊಂದರೆಯಿಂದ ಮುಕ್ತವಾಗಿಸಬೇಕಾಗಿದೆ ಇದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದ್ದು,ಈ ಕಾರಣಕ್ಕಾಗಿ ಆರೋಗ್ಯ ಇಲಾಖೆ ಮತ್ತು ಸಂಘಸಂಸ್ಥೆಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ.ಜೀವದ ಎರಡು ಹನಿ ಪೋಲಿಯೋ ಲಸಿಕೆಯ ಮೂಲಕ ಪೋಲಿಯೋ ಸಮಸ್ಯೆಯನ್ನು ನಿರ್ಮೂಲನೆ ಮಾಡಬಹುದಾಗಿದೆ ಇದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು.ಆದರಿಂದ್ದ ಇಲಾಖೆಯು ತಾಲ್ಲೂಕಿನಾದ್ಯಂತ 155 ಪಲ್ಸ್ ಪೋಲಿಯೋ ಬೂತ್ಗಳನ್ನು ಹಾಗು ೨ ಟ್ರಾನ್ಸಿಸ್ಟ್ ಬೂತ್ಗಳು ಸ್ಥಾಪಿಸಿದ್ದು, 0 ಯಿಂದ 5 ವರ್ಷದೊಳಗಿನ 19210 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವ ಗುರಿಯನ್ನು ಹೊಂದಲಾಗಿದ್ದು ಈ ಸಂಕಲ್ಪಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಂ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರವಿ, ಮುಖಂಡರಾದ ರಘುನಾಥ್ ,ತಾಲ್ಲೂಕು ಆರೋಗ್ಯಾಧಿಕಾರಿ ಶರತ್ ಬಾಬು ,ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಲತಾ ಪಿ.ಪಿ.,ಹಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶ್,ನಾಗರಾಜ್, ಶೇಷಗಿರಿ, ಆಸ್ಪತ್ರೆಯ ಸಿಬ್ಬಿಂದಿ ಹಾಗು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.