
ಈಚೂರು ಗ್ರಾಮ ಪರಿಮಿತಿಯಲ್ಲಿ 20.೦೦ ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿಕಾಮಗಾರಿ, ಈಚೂರು ಗ್ರಾಮದಲ್ಲಿ 11.5೦ ಲಕ್ಷ ರೂ ವೆಚ್ಚದ ಶುದ್ಧ ಕುಡಿಯುವ ನೀರು ಕಾಮಗಾರಿ, ಹರೀನಹಳ್ಳಿಗ್ರಾಮ ಪರಿಮಿತಿಯಲ್ಲಿ 15.೦೦ ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ಸಂಗರಶೆಟ್ಟಿಹಳ್ಳಿ ಗ್ರಾಮ ಪರಿಮಿತಿಯಲ್ಲಿ 20.೦೦ ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ಅತ್ತಿಗೋಡು ಕೆರೆ ಮತ್ತು ಬೆಟ್ಟದಪುರ ಕೆರೆ ಏರಿಯಲ್ಲಿ 100.೦೦ ಲಕ್ಷ ರೂ ವೆಚ್ಚದ ರಕ್ಷಣಾ ಕಾಮಗಾರಿ, ಕಿತ್ತೂರು ಪೂಜಾರಯ್ಯನ ಕೊಪ್ಪಲು ಗ್ರಾಮದಲ್ಲಿ 16.೦೦ ಲಕ್ಷ ರೂ ವೆಚ್ಚದ ಅಂಗನವಾಡಿ ಕಟ್ಟಡ ಕಾಮಗಾರಿ, ಎಸ್ ಕೊಪ್ಪಲು ಗ್ರಾಮದಲ್ಲಿ 10.೦೦ ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ಹಾಗು 11.5೦ ಲಕ್ಷ ರೂ ವೆಚ್ಚದ ಶುದ್ಧ ಕುಡಿಯುವ ನೀರು ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದರು.

ತಾಲೂಕಿನ ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಟ್ಟಡಗಳು ಶಿಥಿಲವಾಗಿದ್ದು ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಹಳೆಯ ಅಂಗನವಾಡಿಗಳನ್ನು ತೆರವುಗೊಳಿಸಿ ನೂತನ ಅಂಗನವಾಡಿಗಳಿಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈ ಕಾಮಗಾರಿಗಳಿಗೆ ಅತೀ ಶೀಘ್ರದಲ್ಲೇ ಗುದ್ದಲಿ ಪೂಜೆ ನೆರವೇರಿಸಲಾಗುವುದು. ಅದರಂತೆ ಗ್ರಾಮಗಳ ಅಭಿವೃದ್ಧಿಗೆ ಸಂಪೂರ್ಣವಾಗಿ ಸಹಕಾರ ನೀಡಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶೃತಿ,ನಾಗರಾಜು,ದಿನೇಶ್, ರಂಗಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್, ಸುಬ್ರಮಣ್ಯ,ಪಿ ಡಿ ಓ ರಾಜಶೇಖರ್ ಮುಖಂಡರಾದ ಅಣ್ಣಯ್ಯ ಶೆಟ್ಟಿ ಸೇರಿದಂತೆ ಇತರರು ಹಾಜರಿದ್ದರು.
1 thought on “ಶಾಸಕ ಕೆ.ಮಹದೇವ್ ರವರು 2.04 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. 09/02/2021”
Anna chpradhelei & harenelei road Dayvtu seri medsei