ತಾಲೂಕಿನ ವಿವಿಧೆಡೆ 1.69ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ನೂತನ ಕೊಠಡಿಗಳ ಉದ್ಘಾಟನೆಯನ್ನು ಶಾಸಕ ಕೆ ಮಹದೇವ್ ನೆರವೇರಿಸಿದರು 10/02/2021

ಚಿಕ್ಕವಡ್ಡರಕೆರಿ ಗ್ರಾಮ ಪರಿಮಿತಿಯಲ್ಲಿ 25 ಲಕ್ಷ ರು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ, ಬೆಕ್ಯ ಗ್ರಾಮ ಪರಿಮಿತಿಯಲ್ಲಿ 21ಲಕ್ಷ ರು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ, ಮಾಲಂಗಿ ಗೋಮಾಳದಲ್ಲಿ ನೂತನವಾಗಿ ನಿರ್ಮಿಸಿರುವ 44 ಲಕ್ಷ ರೂ ವೆಚ್ಚದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4 ಕೊಠಡಿಗಳ ಉದ್ಘಾಟನೆ,
ಚೌತಿ ಗ್ರಾಮದ ST ಸಮುದಾಯದ ಕಾಲೋನಿಯಲ್ಲಿ 18 ರೂ ಲಕ್ಷ ವೆಚ್ಚದ CC ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ, ಚಿಕ್ಕ ಮಾಗಳಿ ಹಾಗೂ ದೊಡ್ಡ ಮಾಗಳಿ ಗ್ರಾಮ ಪರಿಮಿತಿಯಲ್ಲಿ 40 ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಚಿಕ್ಕ ಮಾಗಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ 22 ಲಕ್ಷ ರೂ ವೆಚ್ಚದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳ ಉದ್ಘಾಟನೆ ಮಾಡಿ ಮಾತನಾಡಿದ ಅವರು

ತಾಲ್ಲೂಕಿನಾದ್ಯಂತ ಮೂಲಭೂತ ಸಮಸ್ಯೆಗಳು ಸಾಕಷ್ಟಿದ್ದು ಇವುಗಳನ್ನು ಬಗೆಹರಿಸುವ ಜವಾಬ್ದಾರಿ ಪ್ರತಿಯೊಬ್ಬ ಚುನಾಹಿತ ಪ್ರತಿನಿಧಿಯ ಮೇಲೆ ನಿಂತ್ತಿದೆ.ಈ ಕಾರಣಕ್ಕಾಗಿ ನಾನು ಸರ್ಕಾರದೊಂದಿಗೆ ಶ್ರಮಕ್ಕೆ ಮೀರಿ ಅನುದಾನಗಳನ್ನು ತಂದು ಅಭಿವೃದ್ದಿ ಕರ‍್ಯಗಳನ್ನು ಮಾಡುತ್ತಿದ್ದೇನೆ.ಆದರೆ ನನ್ನ ಅಭಿವೃದ್ದಿಯ ತೀವ್ರತೆಗೆ ತಕ್ಕಂತ್ತೆ ಅಧಿಕಾರಿಗಳು ಸಹಕರಿಸುತ್ತಿಲ್ಲ ಇದು ಬೇಸರದ ಸಂಗತಿಯಾಗಿದೆ. ಗ್ರಾಮೀಣ ಭಾಗದ ಜನತೆಯು ನಗರ ಪ್ರದೇಶದ ಜನತೆಯಂತ್ತೆಯೆ ಉತ್ತಮ ಮೂಲಭೂತ ಸೌಲಭ್ಯಗಳನ್ನು ಹೊಂದಿ ನೆಮ್ಮದಿಯ ಜೀವನ ನಡೆಸುವ ಹಂಬಲವನ್ನು ಹೊಂದಿದ್ದಾರೆ.ಈ ಕಾರಣಕ್ಕಾಗಿ ಆಧುನಿಕತೆಯ ವಾತಾವರಣವನ್ನು ನಿರ್ಮಾಣ ಮಾಡಲು ಉತ್ತಮ ಕುಡಿಯುವ ನೀರು,ವಿದ್ಯುತ್ ವ್ಯವಸ್ಥೆ,ರಸ್ತೆ ಸೇರಿದಂತ್ತೆ ಇನ್ನಿತರೆ ಮೂಲಭೂತ ಸೌಲಭ್ಯಗಳಿಗೆ ಮಾನ್ಯತೆ ನೀಡಿ ಹಗಲಿರುಳು ಶ್ರಮಿಸುತ್ತಿದೇನೆ.ಇದನ್ನು ಅರಿತು ಅಧಿಕಾರಿ ವರ್ಗ ನನಗೆ ಸಹಕರಿಸಿ ಅತೀ ಶೀಘ್ರದಲ್ಲಿ ಗ್ರಾಮೀಣ ಭಾಗದ ಅಭಿವೃದ್ದಿ ಕಾರ್ಯಗಳನ್ನು ಪೂರ್ಣಗೊಳಿಸಬೇಕು.ಇಲ್ಲದಿದ್ದಲ್ಲಿ ಶಿಸ್ತು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಎಇಇ ನಾಗರಾಜು,ಪ್ರಭು,ದಿನೇಶ್,ಆಹಾರ ಶಿರಾಸ್ಥೇದಾರ್ ಸಣ್ಣಸ್ವಾಮಿ,ಅಕ್ಷರ ದಾಸೋಹ ನಿರ್ದೇಶಕ ರಾಜಯ್ಯ,ಒಇಡಿಓ ನರಸಿಂಹಮೂರ್ತಿ,ತಾ ಪಂ ಸಹಾಯಕ ನಿರ್ದೇಶಕ ರಘುನಾಥ್,ಕಂದಾಯ ನಿರೀಕ್ಷಕ ಪಾಂಡು,ಗ್ರಾಮ ಲೆಕ್ಕಾಧಿಕಾರಿ ರಮ್ಯ,ಮುಖಂಡರಾದ ವಕೀಲ ಸ್ವಾಮಿ,ಚನ್ನೆನಳ್ಳಿ ನಾಗರಾಜು,ಮಲ್ಲಿಕ್ ಸೇರಿದಂತ್ತೆ ಇತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top