
ಪಿರಿಯಾಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ನಡೆದ ಸಂತ ಸೇವಾಲಾಲ್, ಸವಿತಾ ಮಹರ್ಷಿ, ಛತ್ರಪತಿ ಶಿವಾಜಿ ಹಾಗೂ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಕ್ಕೆ ಶಾಸಕ ಕೆ.ಮಹದೇವ್ ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡಿದರು.
ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ನಡೆದ ಸಂತ ಸೇವಾಲಾಲ್, ಸವಿತಾ ಮಹರ್ಷಿ, ಛತ್ರಪತಿ ಶಿವಾಜಿ ಹಾಗೂ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು, ಮಹನೀಯರು ವರ್ಗಕ್ಕೆ ಸೀಮಿತವಾಗದೆ ಸಮಾಜದ ಬದಲಾವಣೆಗೆ ಶ್ರಮಿಸಿದವರು, ನಮ್ಮಲ್ಲಿನ ನಾನತ್ವ ಬಿಟ್ಟು ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ತಿಳಿಸಿದರು.
ಬಿಇಒ ವೈ.ಕೆ ತಿಮ್ಮೇಗೌಡ ಮಾತನಾಡಿ ಭಾರತ ಸಂಸ್ಕೃತಿಯನ್ನು ಶ್ರೀಮಂತವಾಗಿಸಲು ಪ್ರತಿಯೊಂದು ಸಮಾಜದ ಮಹನಿಯರು ಕಾರಣ, ಪ್ರಪಂಚದಾದ್ಯಂತ ಒಂದೇ ಭಾಷೆ ಹೊಂದಿದ ಹೆಗ್ಗಳಿಕೆ ಬಂಜಾರ ಸಮುದಾಯಕ್ಕೆ ಸಲ್ಲುತ್ತದೆ, ವೇದಗಳಲ್ಲಿ ಒಂದಾದ ಸಾಮವೇದ ರಚಿಸಿದ ಕೀರ್ತಿ ಸವಿತಾ ಮಹರ್ಷಿಗಳದು, ವಿದೇಶಿಯರು ದಾಳಿ ಹಿಮ್ಮೆಟ್ಟಿಸಿ ಪ್ರತಿಯೊಬ್ಬರಲ್ಲೂ ರಾಷ್ಟ್ರಪ್ರೇಮ ಮೂಡಿಸಿದ ಕೀರ್ತಿ ಛತ್ರಪತಿ ಶಿವಾಜಿ ಮಹಾರಾಜರದು, ಸರ್ವಕಾಲಿಕವಾಗಿಯೂ ಮರೆಯದ ಎಲ್ಲಾ ವಿಧದ ವಚನ ರಚಿಸಿದ ಕೀರ್ತಿ ಸರ್ವಜ್ಞ ಅವರದು ಎಂದು ತಿಳಿಸಿ ಸಂತ ಸೇವಾಲಾಲ್, ಸವಿತಾ ಮಹರ್ಷಿ, ಛತ್ರಪತಿ ಶಿವಾಜಿ ಹಾಗೂ ಸರ್ವಜ್ಞ ರವರ ಜೀವನ ಚರಿತ್ರೆ ವಿಷಯಗಳ ಬಗ್ಗೆ ಅರಿವು ಮೂಡಿಸಿ ಸಮಾಜದಲ್ಲಿನ ಅಂಕುಡೊಂಕು ತಿದ್ದುವಲ್ಲಿ ಮಹನೀಯರು ಸೇವೆ ಅಪಾರ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ಶಿರಸ್ತೇದಾರ್ ಟ್ರಿಜಾ, ವಿನೋದ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ಗ್ರಾಮ ಪಾಂಚಾಯಿತಿ ಸಹಾಯಕ ನಿರ್ದೇಶಕ ರಘುನಾಥ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ, ಸಿಡಿಪಿಒ ಕುಮಾರ್, ಎಡಿಎಲ್ ಆರ್ ಚಿಕ್ಕಣ್ಣ, ಉಪತಹಸಿಲ್ದಾರ್ ಗಳಾದ ಕೆಂಚಯ್ಯ, ಶಶಿಧರ್, ಆಹಾರ ಶಿರಸ್ತೆದಾರ್ ಸಣ್ಣಸ್ವಾಮಿ, ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್, ಮುಖ್ಯಾಧಿಕಾರಿ ಚಂದ್ರಕುಮಾರ್, ವಿವಿಧ ಸಮಾಜಗಳ ಪದಾಧಿಕಾರಿಗಳಾದ ಶಿವರಾಜ್, ಈಶ್ವರರಾವ್, ಕೃಷ್ಣ, ಸುಬ್ರಹ್ಮಣ್ಯ, ದೇವರಾಜ್ ಮತ್ತು ಮುಖಂಡರು, ತಾಲ್ಲೂಕು ಕಚೇರಿ ಸಿಬ್ಬಂದಿ ಹಾಜರಿದ್ದರು.