ಹಿಟ್ನಹಳ್ಳಿ ಗ್ರಾಮದಲ್ಲಿ ನೂತನ ಪಡಿತರ ಕೋಪ ಕೇಂದ್ರಕ್ಕೆ ಚಾಲನೆ ನೀಡಿದ ಶಾಸಕ ಕೆ ಮಹದೇವ್. 22/02/2021

ತಾಲೂಕಿನಲ್ಲಿ ಪಡಿತರ ಪದಾರ್ಥಗಳನ್ನು ತರಲು ಜನರು ದೂರದ ಊರುಗಳಿಗೆ ಅಲೆದಾಡುವುದನ್ನು ತಪ್ಪಿಸಲು 31 ಉಪ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ಶಾಸಕ ಕೆ ಮಹದೇವ್ ತಿಳಿಸಿದರು.
ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಹಿಟ್ನಹಳ್ಳಿ ಗ್ರಾಮದಲ್ಲಿ ಆರಂಭಿಸಿರುವ ನೂತನ ಪಡಿತರ ಉಪಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನಾದ್ಯಂತ ಒಟ್ಟು 90 ನ್ಯಾಯಬೆಲೆ ಅಂಗಡಿಗಳಿದ್ದು ಇವುಗಳಲ್ಲಿ ಅನೇಕ ಗ್ರಾಮಗಳ ಜನರು ಪಡಿತರ ಪಡೆಯಲು ದೂರದ ಕೇಂದ್ರಗಳಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ಇದನ್ನು ಅರಿತು ತಾಲೂಕಿನಲ್ಲಿ 31 ಉಪ ಕೇಂದ್ರಗಳನ್ನು ಗುರುತಿಸಿದ್ದು ಉಪ ಕೇಂದ್ರಗಳ ಮೂಲಕ ಪಡಿತರವನ್ನು ಮೂಲ ಕೇಂದ್ರದಿಂದ ಸರಬರಾಜು ಮಾಡಿ ಗ್ರಾಮದಲ್ಲಿ ಜನರಿಗೆ ಪಡಿತರ ವಿತರಣೆಯಾಗಲಿದೆ ಎಂದರು.

ಆಹಾರ ನಾಗರಿಕ ಇಲಾಖೆ ಶಿರಸ್ತೆದರ್ ಸಣ್ಣಸ್ವಾಮಿ ಮಾತನಾಡಿ 8900 ಅಂತ್ಯೋದಯ,59,189 ಬಿಪಿಎಲ್,4,001 ಐಪಿಎಲ್ ಸೇರಿ ಒಟ್ಟು 7,20,290 ಪಡಿತರ ಚೀಟಿಗಳಿವೆ. ಇದರಲ್ಲಿ ಶಾಸಕರ ಸೂಚನೆಯಂತೆ 31 ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸಲಾಗಿದೆ. ಹಿಟ್ನಳ್ಳಿ ಉಪಕೇಂದ್ರದ ವ್ಯಾಪ್ತಿಗೆ ಹಿಟ್ನೆಹೆಬ್ಬಾಗಿಲು, ಹಿಟ್ನಳ್ಳಿ,ಎಜಿ ಕಾವಲ್, ಮಂಜ ದೇವನಹಳ್ಳಿ ಗ್ರಾಮಗಳು ಒಳಪಡಲಿವೆ ಎಂದು ತಿಳಿಸಿದರು.

ಹಿಟ್ನೆಹೆಬ್ಬಾಗಿಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಮ್ಮ ಮಾತನಾಡಿ, ಗ್ರಾಮಸ್ಥರು ಪಡಿತರ ಪದಾರ್ಥ ಕಿತುರ ಗ್ರಾಮಕ್ಕೆ ಹೋಗುವುದನ್ನು ತಪ್ಪಿಸಲು ಉಪಕೇಂದ್ರ ತೆರೆಯಲಾಗಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಿಯಲ್ಲಿ ಬ್ಯಾಂಕ್ ಮಾಜಿ ಅಧ್ಯಕ್ಷ ಪರಮೇಶ್, ವಿನೋದ್, ವಿಎಸ್ಎಸ್ಎನ್ ಅಧ್ಯಕ್ಷ ಮಹದೇವ್ ಉಪಾಧ್ಯಕ್ಷ ಜ್ಯೋತಿಪ್ರಕಾಶ್ ನಿರ್ದೇಶಕರಾದ ಶಂಕರ್ ರಾಮಣ್ಣ ಗ್ರಾಮ ಪಂಚಾಯಿತಿ ಸದಸ್ಯರಾದ ಯಶೋದಮ್ಮ ರವಿ ಗ್ರಾಮದ ಮುಖಂಡರಾದ ಮುದ್ದೇಗೌಡ ಜಯಣ್ಣ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top