
ಹರಿಲಪುರ ಗ್ರಾಮ ಪರಿಮಿತಿಯಲ್ಲಿ 35 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ಕಗ್ಗುಂಡಿ ಗ್ರಾಮ ಪರಿಮಿತಿಯಲ್ಲಿ 20ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ,
ಬೆಟ್ಟದಪುರ ಗ್ರಾಮ ಪರಿಮಿತಿಯಲ್ಲಿ 40 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ರಾಮನಾಥಪುರ – ಪಿರಿಯಾಪಟ್ಟಣ ಮುಖ್ಯರಸ್ತೆಯಿಂದ ಸುರಗಳ್ಳಿ ಗ್ರಾಮದವರಿಗೆ 50 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.

ನನ್ನ ಆಡಳಿತದ ಅಭಿವೃದ್ದಿಯನ್ನು ಸಹಿಸದ ಮಾಜಿ ಶಾಸಕ ಸುಳ್ಳು ಆರೋಪ ಮಾಡುತ್ತಾ ಹತಾಶೆಯ ಮನೋಭಾವವನ್ನು ವ್ಯಕ್ತಪಡಿಸುತ್ತಿದ್ದಾರೆ. ನಾನು ಅವರ ಅಧಿಕಾರಾದವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುತ್ತಿರುವುದು ಸಾಬೀತುಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲೆಸೆದರು. ಕೇವಲ ವೇದಿಕೆಗಳಲ್ಲಿ ಶಿಲ್ಲೆ ಮತ್ತು ಚಪ್ಪಾಳೆ ಗಿಟ್ಟಿಸಲು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದನ್ನು ಮಾಜಿ ಶಾಸಕರು ಬಿಡಬೇಕು ಇದು ಅವರಿಗೆ ಗೌರವ ತರುವಂತದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು, ಅವರು ಮಾಜಿ ಶಾಸಕರು ಮೈಸೂರಿನಲ್ಲಿ ಕೋಟಿಗಟ್ಟಲೆ ಮೌಲ್ಯದ ಕಾಂಪ್ಲೆಕ್ಸ್ ಮತ್ತು ಅಪಾರ್ಟ್ಮೆಂಟ್ ಗಳನ್ನು ನಿರ್ಮಿಸುತ್ತಿದ್ದಾರೆ. ಇವುಗಳಿಗೆ ಹಣ ಎಲ್ಲಿಂದ ಬಂತ್ತು ಎಂದು ಮಾಜಿ ಶಾಸಕರು ಸ್ಪಷ್ಟಪಡಿಸಲಿ. ಇವುಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾಧ್ಯಮಗಳಿಗೆ ಭಾವಚಿತ್ರಗಳನ್ನು ನೀಡುತ್ತೇನೆ ಎಂದರು.

ಈ ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯ ಈರಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ತಿಮೇಗೌಡ ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದೇಗೌಡ, ಎಇಇ ಜಯಂತ್, ಪ್ರಭು, ದಿನೇಶ್,,ತಾ ಪಂ ಸಹಾಯಕ ನಿರ್ದೇಶಕ ರಘುನಾಥ್,ಮುಖಂಡರಾದ ವಿದ್ಯಾಶಂಕರ್,ಕೃಷ್ಣಯ್ಯ, ಪರಮೇಶ್,ನಾಗಣ್ಣ ಸೇರಿದಂತೆ ಇತರರು ಹಾಜರಿದ್ದರು.