ತಾಲ್ಲೂಕಿನ ಬೆಣಗಾಲು ಗ್ರಾಮದಲ್ಲಿ ಮಹಾಚೇತನ ಯುವ ವೇದಿಕೆವತಿಯಿಂದ ಇ ಕಾಂ ಗಿಲ್ ಕಾಫಿ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ಹಯೋಗದೊಂದಿಗೆ ನಿರ್ಮಿಸಿದ ಸಾವಿತ್ರಿ ಬಾಯಿ ಪುಲೆ ಉಚಿತ ಸಂಜೆ ಪಾಠ ಶಾಲೆಯ ಉದ್ಘಾಟನಾ ಸಮಾರಂಭ ಮತ್ತು ಉಪನ್ಯಾಸ ಕಾರ್ಯಕ್ರಮ 27/02/2021

ಶಾಸಕ ಕೆ.ಮಹದೇವ್ ಮಾತನಾಡಿ ಹೋರಾಟದ ಮುಖಾಂತರ ತಮ್ಮ ಗುರಿಯನ್ನು ತಲುಪಲು ಸಾಧ್ಯ.ಸಮಾಜದ ಕಳಕಳಿಯಿರಬೇಕು.ಈ ಹಿನ್ನೆಯಲ್ಲಿ ಮಹಾಚೇತನ ಯುವ ವೇದಿಕೆಯು ಸಾಮಾಜಿಕ ಕ್ರಾಂತಿಗೆ ಮುಂದಾಗಿದೆ ಇದಕ್ಕೆ ನಾನು ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ.ನಾನು ಕೂಡ ನನ್ನ ರಾಜಕೀಯ ಕ್ಷೇತ್ರವನ್ನು ಸಮಾಜ ಸೇವೆಯನ್ನು ಹಮ್ಮಿಕೊಳ್ಳುವುದರ ಮೂಲಕ ಪ್ರಾರಂಭಿಸಿದೆ ಇದರ ಅನುಭವ ನನಗಿದೆ.ಆದರಿಂದ್ದ ಸಾಮಾಜಿಕ ಕ್ರಾಂತೀಯ ಹರಿಕಾರರ ಮಾರ್ಗದರ್ಶನವನ್ನು ಪ್ರತಿಯೊಬ್ಬರೂ ಅರಿತುಕೊಳ್ಳುಬೇಕು ಎಂದರು.

ಭಾರತದಲ್ಲಿ ಪ್ರಜಾಪ್ರಭುತ್ವದ ಸಂವಿಧಾನಾತ್ಮಕ ಆಶಯಗಳ ಕಡೆ ರಾಜಕಾರಣ ಸಾಗದಿರುವುದು ಬೇಸರದ ಸಂಗತಿಯಾಗಿದೆ ಎಂದು ಮೈಸೂರಿನ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕರಾದ ಪ್ರೋ.ಜೆ.ಸೋಮಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು. ಡಾ.ಬಾಬ ಸಾಹೇಬ್ ಅಂಭೇಡ್ಕರ್ ರವರು ಸಂವಿಧಾನದ ಮೂಲಕ ಪ್ರಜಾಪ್ರಭುತ್ವದ ನೆಲೆಯನ್ನು ಹೊಂದಲು ರಾಜಕೀಯ ಶಕ್ತಿಯನ್ನು ಪ್ರತಿಯೊಬ್ಬರಿಗೂ ನೀಡಿದ್ದಾರೆ.ಆದರೆ ಇಂದು ಜಾತಿ ಮತ್ತು ಧರ್ಮದ ಆಧಾರದಲ್ಲಿ ರಾಜಕಾರಣ ನಡೆಯುತ್ತಿದೆ.ಇದರೊಂದಿಗೆ ದಲಿತ ಸಮುದಾಯಗಳು ಕೂಡ ಚಿದ್ರಗೊಂಡು ಸ್ವತಂತ್ರವನ್ನು ಕಳೆದುಕೊಂಡು ಇನ್ನೊಬ್ಬರ ಅವಲಂಬಿತರಾಗಿದ್ದಾರೆ.ಇದಲ್ಲದೆ ಸಾಮಾಜಿಕ ಸುವ್ಯವಸ್ಥೆ ಮತ್ತು ಆರ್ಥಿಕ ಸದೃಡತೆಗಿದ್ದ ರಾಜಕೀಯ ರಾಜಕಾರಣಗಳಿಗೆ ಬಂಡವಾಳದ ಉದ್ಯೋಗವಾಗಿದೆ.ಇದರಿಂದಾಗಿ ಸಂವಿಧಾನಾತ್ಮಕತೆಯ ಪ್ರಜಾಪ್ರಭುತ್ವದ ರಾಜಕಾರಣವನ್ನು ಕಾಣಲು ಸಾಧ್ಯವಾಗುತ್ತಿಲ್ಲ ಇದು ನೋವಿನ ಸಂಗತಿಯಾಗಿದೆ.ಆದರಿAದ್ದ ಜನ ಸಾಮಾನ್ಯರು ಸಂವಿಧಾನ ಆಶಯಗಳನ್ನು ಅರ್ಥಯಿಸಿಕೊಂಡು ಉತ್ತಮ ಆಳ್ವಿಕೆಯ ರಾಜಕರಣವನ್ನು ಜಾರಿಗೊಳಿಸಲು ಚಿಂತಿಸಬೇಕು ಎಂದರು.


ಮೈಸೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಪಕರಾದ ಡಾ.ನರೇಂದ್ರ ಕುಮಾರ್ ಮಾತನಾಡಿ ಬ್ರಾಹ್ಮಣೇತರ ಸಮುದಾಯಗಳು ಶಿಕ್ಷಣದಿಂದ ವಂಚಿತರಾಗಿದ್ದ ಕಾಲದಲ್ಲಿ ಜ್ಯೋತಿಬಾ ಪುಲೆ ಮತ್ತು ಸಾವಿತ್ರಿಬಾಯಿ ಪುಲೆ ದಂಪತಿಗಳು ಶಿಕ್ಷಣದ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ.ಈ ಕಾರಣಕ್ಕಾಗಿ ಸತ್ಯ ಶೋದಕ ಸಮಾಜ ಎಂಬ ಸಂಘವನ್ನು ಸ್ಥಾಪಿಸಿ ಬಾಲ್ಯ ವಿವಾಹ ಪದ್ದತಿ ನಿರ್ಮೂಲನೆ,ವಿಧವಾ ಮರು ವಿವಾಹ ಕಾರ್ಯಕ್ರಮಗಳ ಜಾರಿಗೊಳಿಸುವುದು,ಸರಳ ವಿವಾಹದಂತ್ತಹ ಸಾಮಾಜಿಕ ಕಾರ್ಯವನ್ನು ಜಾರಿಗೊಳಿಸಲು ತಮ್ಮ ಸ್ವಂತ ದುಡಿಮೆಯಿಂದ ಬಂದ್ದ ಹಣವನ್ನು ಬಳಸಿ ಶಾಲೆಗಳನ್ನು ನಡೆಸುತ್ತಿದ್ದರು.ಇವರ ಸಾಮಾಜಿಕ ಕ್ರಾಂತಿಯನ್ನು ಸಹಿಸದ ವ್ಯೆಕ್ತಿಗಳು ಕೊಲೆ ಮಾಡುವ ಯತ್ನ ಮಾಡಿದ ಘಟನೆಗಳು ಕೂಡ ನಡೆತಿತ್ತು ಆದರೆ ಇದ್ಯಾವುದಕ್ಕೂ ಹಿಂಜರಿಯದೆ ಪುಲೆ ದಂಪತಿಗಳು ಸಾರ್ವಜನಿಕ ಶಿಕ್ಷಣಕ್ಕೆ ಶ್ರಮಿಸಿದರು.ಆದರಿಂದ್ದ ಜ್ಯೋತಿಬಾ ಪುಲೆ ಮತ್ತು ಸಾವಿತ್ರಿಬಾಯಿ ಪುಲೆ ಅಸಮಾನತೆಯ ವಿರುದ್ಧ ಹೋರಾಟ ನಡೆಸಿದ ಇಂತಹ ಆದರ್ಶ ದಂಪತಿಗಳ ಆದರ್ಶವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು.


ಈ ಸಂದರ್ಭದಲ್ಲಿ ಇ ಕಾಂ ಗಿಲ್ ಕಾಫಿ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ದಿನೇಶ್ ಮಾತನಾಡಿದರು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ರಾಜೇಂದ್ರ,ತಾಪA ಸದಸ್ಯ ಟ.ಈರಯ್ಯ,ರಾಮು ಐಲಾಪುರ,ಜಯಂತಿ ಸೋಮಶೇಖರ್,ಗ್ರಾಪಂ ಅಧ್ಯಕ್ಷೆ ಮಂದಾರ ದಯಾನಂದ್,ಉಪಾಧ್ಯಕ್ಷ ಧನರಾಜ್,ಶಿವಶಂಕರ್ ಬಿಚ್ಚುಗತ್ತಿ,ಶೇಖರ್ ಚನ್ನಕಲ್,ಡಾ,ರಾಮಚಂದ್ರ,ಆರ್.ಎಸ್.ದೊಡ್ಡಣ್ಣ,ಪಿಡಿಓ ಮಂಜುನಾಥ್ ಶೆಟ್ಟಿ,ಅಭಿಯಂತರ ವಿಜಯ್ ಕುಮಾರ್,ರಂಗನಾಥ್,ಸ್ವಾಮಿ,ಎನ್.ಆರ್.ಕಾ0ತರಾಜು,ಭೀಮ್ ಆರ್ಮಿ ಗೀರೀಶ್, ಮಹಾಚೇತನ ಯುವ ವೇದಿಕೆ ಶ್ರೀಕಾಂತ್,ಪ್ರದೀಪ,ರಾಜೇಶ್,ಯಶ್ವ0ತ್,ಸಾಗರ್,ರೇವಣ್ಣ,ರಮೇಶ್,ಕಿರಣ್,ಶಶಿಕುಮಾರ್,ಪವನ್ನಕುಮಾರ್,ನ0ದೀಪ್,ರೋಹಿತ್,ಸುದೀಪ್ ಸೇರಿದಂತ್ತೆ ಇತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top