
ಗುರುವಯ್ಯನ ಕೊಪ್ಪಲುವಿನಲ್ಲಿ 909.38 ಲಕ್ಷ ರೂ ವೆಚ್ಚದ ಕಿತ್ತೂರು ಹಾಗೂ ಇತರೆ 17 ಗ್ರಾಮಗಳಿಗೆ ಕಾವೇರಿ ನದಿ ಮೂಲದಿಂದ
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆ, ಕಿತ್ತೂರು ಗ್ರಾಮದಲ್ಲಿ 400.00 ಲಕ್ಷ ರೂ ವೆಚ್ಚದ ನೂತನವಾಗಿ ಸ್ಥಾಪಿಸಿರುವ 66/11 ಕೆವಿ ವಿದ್ಯುತ್
ಉಪ ಕೇಂದ್ರದ ಉದ್ಘಾಟನೆ. ಬೆಟ್ಟದಪುರದಲ್ಲಿ 90.00 ಲಕ್ಷ ರೂ ವೆಚ್ಚದ ಚಾವಿಸನಿನಿ ಉಪವಿಭಾಗ ಮತ್ತು ಶಾಖಾ ಕಚೇರಿಯ ನೂತನ ಕಚೇರಿ ಕಾಮಗಾರಿ ಗುದ್ದಲಿ ಪೂಜೆ, ಬೆಟ್ಟದತುಂಗ ಗ್ರಾಮದಲ್ಲಿ 25.00 ಲಕ್ಷ ರೂ ವೆಚ್ಚದ ಕನ್ನಡ & ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಭವನ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ, ಕೆ.ಬಸವನಹಳ್ಳಿ ಗ್ರಾಮದಲ್ಲಿ 199.00 ಲಕ್ಷ ರೂ ವೆಚ್ಚದ ಪರಿಶಿಷ್ಟ ಜಾತಿಗೆ ಸೇರಿದ ರೈತರ ಜಮೀನುಗಳಿಗೆ ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸುವ ಯೋಜನೆ ಉದ್ಘಾಟನೆ ಹಾಗು 295.00 ಲಕ್ಷ ರೂ ವೆಚ್ಚದ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಕಾವೇರಿ ನದಿಯಿಂದ 150 ಕೆರೆ ತುಂಬಿಸುವ ಮುತ್ತಿನಮುಳಸೋಗೆ ಏತ ನೀರಾವರಿ ಯೋಜನೆ ಕಾಮಗಾರಿ ಪ್ರಗತಿ ವಿಕ್ಷಣೆ ಮಾಡಿದರು.

ಏಪ್ರಿಲ್ ಅಂತ್ಯದೊಳಗೆ ಕೆರೆಗೆ ನೀರು ತುಂಬಿಸುವ ಯೋಜನೆ ಕಾಮಗಾರಿಯ ಮೊದಲ ಹಂತ ಪೂರ್ಣಗೊಳಿಸುವಂತೆ ಹಾರಂಗಿ ಇಲಾಖೆ ಅಧಿಕಾರಿಗಳಿಗೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಸೂಚಿಸಿದರು. ಮುತ್ತಿನ ಮೋಡ ಹೋಗಿ ಬಳಿ ಕಾವೇರಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಸ್ಥಳ ವೀಕ್ಷಿಸಿ ಈಗಾಗಲೇ ಕಾಮಗಾರಿ ಪ್ರಾರಂಭವಾಗಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಮಹತ್ವಾಕಾಂಕ್ಷಿ ಯೋಜನೆಯ ಉಪಯೋಗ ಸಾರ್ವಜನಿಕರಿಗೆ ದೊರೆಯಲು ವಿಳಂಬವಾಗುತ್ತಿದ್ದು ಕೂಡಲೇ ಮೊದಲ ಹಂತದ 80ಕಾಮಗಾರಿ ಶೀಘ್ರ ಮುಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿ ಮೆ, ಜೂನ್ ತಿಂಗಳಲ್ಲಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆ ದಿನಾಂಕ ನಿಗದಿಯಾಗುವ ಹಿನ್ನೆಲೆ ಏಪ್ರಿಲ್ ಅಂತ್ಯದೊಳಗೆ ಕಾಮಗಾರಿ ಮುಗಿಸುವಂತೆ ಆದೇಶಿಸಿದರು.

ಶಾಸಕ ಕೆ ಮಹದೇವ್ ರವರು ಮಾತನಾಡಿ ಈಗಾಗಲೇ ಎರಡು ಬಾರಿ ಪ್ರವಾಹದ ಕಾರಣ ಕಾಮಗಾರಿ ವಿಳಂಬವಾದ ಹಿನ್ನೆಲೆ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆದು ಯೋಜನೆಗೆ ಅಗತ್ಯವಿರುವ ಹಣ ಮಂಜೂರಾತಿ ಮಾಡಿಸಿದ್ದು ಅಧಿಕಾರಿಗಳು ಇಲ್ಲಸಲ್ಲದ ಕಾರಣ ಹೇಳುವುದನ್ನು ನಿಲ್ಲಿಸಿ ಶೀಘ್ರ ಕಾಮಗಾರಿ ಮುಗಿಸಿ ರೈತರಿಗೆ ಉಪಯೋಗವಾಗುವಂತೆ ಮಾಡಿ ಎಂದರು.

ಈ ಸಂದರ್ಭದಲ್ಲಿ ಹಾರಂಗಿ ಪುನರ್ವಸತಿ ವಿಭಾಗ ಇ ಇ ಮಂಜು, ಉಪ ವಿಭಾಗ ಎ ಇ ಇ ನವೀನ್, ಎ ಇ ಗಳಾದ ಕಲೀಮ್, ಶಿವಕುಮಾರ್, ಗೌತಮ್, ತಾಲೂಕು ಪಂಚಾಯಿತಿ ಇ ಒ ಡಿಸಿ ಶೃತಿ, ಜಿಲ್ಲಾ ಪಂಚಾಯಿತಿ ಎಇ ಇ ಪ್ರಭು ಸರ್ಕಲ್ ಇನ್ಸ್ಪೆಕ್ಟರ್ ಬಿ.ಆರ್ ಪ್ರದೀಪ್, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎ. ಟಿ ರಂಗಸ್ವಾಮಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಜರಿದ್ದರು