
ಪಿರಿಯಾ ಪಟ್ಟಣದ ಸರ‍್ವಜನಿಕ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆ ಪಡೆದ ನಂತರ ಮಾತನಾಡಿದ ಅವರು,ಕೊರೊನಾ ಸೋಂಕು ಆರಂಭದಲ್ಲಿ ಪತ್ತೆಯಾದಾಗ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಬಲಿಯಾಗಿದ್ದು ವಿಶ್ವವೇ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದ ಸಂರ‍್ಭ ಲಸಿಕೆ ಕಂಡು ಹಿಡಿದಿರುವುದು ಶ್ಲಾಘನೀಯ, ಭಾರತದಲ್ಲಿ ಆವಿಷ್ಕರಿಸಿದ ಲಸಿಕೆಗೆ ವಿಶ್ವದ ಹಲವು ದೇಶಗಳಿಂದ ಬೇಡಿಕೆ ಬಂದಿರುವುದು ಸಂತಸದ ಬೆಳವಣಿಗೆಯಾಗಿದ್ದು ಆರೋಗ್ಯ ಇಲಾಖೆ ವತಿಯಿಂದ ನೀಡುತ್ತಿರುವ ಲಸಿಕೆಯನ್ನು ಪಡೆಯಲು ಸರ‍್ವಜನಿಕರು ಯಾವುದೇ ಹಿಂಜರಿಕೆ ಮತ್ತು ನರ‍್ಲಕ್ಷ ಭಾವ ತಾಳದೆ ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾಕ್ಟರ್ ಶರತ್ ಬಾಬು ಮಾತನಾಡಿ ರ‍್ಕಾರದ ಸೂಚನೆಯಂತೆ ಹಂತಹಂತವಾಗಿ ಆದ್ಯತೆಯ ಮೇರೆಗೆ ಲಸಿಕೆ ವಿತರಿಸಲಾಗುತ್ತಿದ್ದು ಸೋಮವಾರದಿಂದ ೬೦ ರ‍್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ವಿತರಿಸಲು ಸೂಚನೆ ಬಂದಿದ್ದು ಇದನ್ನು ಪಡೆಯಲು ಆನ್ಲೈನ್ನಲ್ಲಿ ಅಥವಾ ಪಟ್ಟಣದ ಸರ‍್ವಜನಿಕ ಆಸ್ಪತ್ರೆಯಲ್ಲಿ ನೊಂದಣಿ ಮಾಡಿಕೊಳ್ಳಬೇಕಿದೆ, ಸರ‍್ವಜನಿಕರು ಸರಕಾರದ ಯೋಜನೆ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಇದೇ ವೇಳೆ ಶಾಸಕರ ಅಂಗರಕ್ಷಕ ಸಿದ್ದಿಕ್ ಹಾಗೂ ಎಂ ಡಿಸಿಸಿ ಬ್ಯಾಂಕ್ ನರ‍್ದೇಶಕ ಸಿಎನ್ ರವಿ ಅವರು ಸಹ ಲಸಿಕೆ ಪಡೆದರು.
ಈ ಸಂರ‍್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ಜೆ ಶ್ರೀನಿವಾಸ್ ಆರೋಗ್ಯ ಶಿಕ್ಷಣಾಧಿಕಾರಿ ಪಿಪಿ ಲತಾ, ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.