
ದೇವರ ಮೇಲೆ ಅಪಾರ ನಂಬಿಕೆ ಇಟ್ಟು ಕೊಂಡರೆ ಅವರು ಕಂಡಂತಹ ಕನಸನ್ನು ನನಸು ಮಾಡಿಕೊಳ್ಳಬಹುದು ಎಂದು ಶಾಸಕ ಕೆ ಮಹದೇವ್ ತಿಳಿಸಿದರು.
ತಾಲೂಕಿನ ಹಾಲನಹಳ್ಳಿ ಗ್ರಾಮದಲ್ಲಿ ಶ್ರೀ ಬೋರೆ ಲಿಂಗೇಶ್ವರ ಮತ್ತು ಶ್ರೀ ಹೊನ್ನೂರ ರಂಗ ದೇವರ ಜಾಲದ ಹೂವು ದೇವರ ದರ್ಶನ ಪಡೆದು ಮಾತನಾಡಿದರು.
ಆಲನಹಳ್ಳಿ ಗ್ರಾಮದಲ್ಲಿ ದುಷ್ಟ ಶಕ್ತಿಗಳನ್ನು ಸಂಹಾರ ಮಾಡುವಲ್ಲಿ ಎರಡು ದೇವರುಗಳ ಶಕ್ತಿ ಹೆಚ್ಚಿದೆ ಭಗವಂತನನ್ನು ನಂಬಿದರೆ ಅವರ ಕಷ್ಟಕಾರ್ಪಣ್ಯಗಳು ಅಳಿಸಿಹೋಗುತ್ತದೆ. ಹೊನ್ನೂರ ರಂಗ ದೇವಸ್ಥಾನದ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಇದರ ಸಂಪೂರ್ಣ ಕಾಮಗಾರಿ ಕೆಲಸಕ್ಕೆ 3ಲಕ್ಷ ರೂ ಹಣ ಬಿಡುಗಡೆ ಮಾಡಿಸಲಾಗುತ್ತದೆ ಎಂದರು.

ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಟಿ ರಂಗಸ್ವಾಮಿ ಶಾಸಕರು ನಮ್ಮ ಗ್ರಾಮಕ್ಕೆ ಈಗಾಗಲೇ ಒಂದು ಕೋಟಿಗಿಂತ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದಾರೆ ಹಾಗೆ ಬಹುದಿನಗಳಿಂದ ಬೇಡಿಕೆ ಇದ್ದ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಅನುದಾನ ನೀಡಿ ಕಾಮಗಾರಿ ಪ್ರಗತಿಯಲ್ಲಿದೆ ಸಣ್ಣಪುಟ್ಟ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ನೆರವೇರಿಸಿ ಕೊಡಬೇಕು ಎಂದರು ಈ ಬಾರಿ ತಾಲೂಕಿಗೆ ಎರಡನೇ ಅತಿದೊಡ್ಡ ಗ್ರಾಮವಾದ ಆಲನಹಳ್ಳಿ ಗ್ರಾಮಕ್ಕೆ ಜನಸಂಖ್ಯೆ ಅನುಗುಣವಾಗಿ ಈ ಬಾರಿ ಜಿಲ್ಲಾ ಪಂಚಾಯತ್ ಆಯ್ಕೆಯಾಗಿದೆ ಮುಂದೆ ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದು ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸುವ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕೆಂದು ತಿಳಿಸಿದರು.
ಈ ಸಂದರ್ಭ ಕಾಂಗ್ರೆಸ್ ಪಕ್ಷದ ಕಟ್ಟಾಳು ಹುಣಸವಾಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಆಲನಹಳ್ಳಿ ಗ್ರಾಮದ ಚಿಕ್ಕಯ್ಯ ಕಾಂಗ್ರೆಸ್ ಪಕ್ಷ ತೊರೆದು ಶಾಸಕ ಕೆ ಮಹದೇವ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಎಟಿ ರಂಗಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಇದರೊಂದಿಗೆ ಅವರ ಮಕ್ಕಳಾದ ದಿನೇಶ್ ಹಾಗೂ ಪ್ರಾಣೇಶ್ ಇವರು ಸಹ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು
ಈ ಸಂದರ್ಭದಲ್ಲಿ ಹುಣಸವಾಡಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಸುಶೀಲಮ್ಮ , ಉಪಾಧ್ಯಕ್ಷ ಎಜೆ ಸ್ವಾಮಿ ಗ್ರಾಮಪಂಚಾಯಿತಿ ಸದಸ್ಯರಾದ ನಾಗರಾಜ್ ಜ್ಯೋತಿ ರತ್ನಮ್ಮ ಮತ್ತಿತರರು ಹಾಜರಿದ್ದರು