
ಶ್ಯಾನುಭೋಗನಹಳ್ಳಿ ಗ್ರಾಮ ಪರಿಮಿತಿಯಲ್ಲಿ 20.೦೦ ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ಹೊನ್ನಾಪುರ ಗ್ರಾಮದಲ್ಲಿ 12.೦೦ ಲಕ್ಷ ರೂ ವೆಚ್ಚದ ಕುಡಿಯುವ ನೀರಿನ ಮೇಲ್ತೊಟ್ಟಿ ಕಾಮಗಾರಿ, ಚಾಮರಾಯನ ಕೋಟೆ ಗ್ರಾಮದಲ್ಲಿ 12.೦೦ ಲಕ್ಷ ರೂ ವೆಚ್ಚದ ಕುಡಿಯುವ ನೀರಿನ ಮೇಲ್ತೊಟ್ಟಿ ಕಾಮಗಾರಿ, ಕಂಬೀಪುರ ಗ್ರಾಮ ಪರಿಮಿತಿಯಲ್ಲಿ 20.೦೦ ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ಅಡಗೂರು ಗ್ರಾಮ ಪರಿಮಿತಿಯಲ್ಲಿ 20.೦೦ ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ಕೆ.ಬಸವನಹಳ್ಳಿ ಗ್ರಾಮ ಪರಿಮಿತಿಯಲ್ಲಿ 20.೦೦ ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗು ಆನೆಕಟ್ಟೆಯಲ್ಲಿ 20.೦೦ ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು ಶಾಸಕನಾಗಿ ಆಯ್ಕೆಯಾದ ನಂತರ ತಾಲೂಕಿನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಹಿಂಬಾಲಕರ ಮಾತಿಗೆ ಬೆಲೆ ನೀಡಿ ಟೀಕಿಸುವುದೇ ಮಾಜಿ ಶಾಸಕರಿಗೆ ಹವ್ಯಾಸವಾಗಿದೆ ಎಂದು ಹೇಳಿದರು. ತಾಲ್ಲೂಕಿನಾದ್ಯಂತ ಮತದಾರರು ನನ್ನನ್ನು ಬೆಂಬಲಿಸಿ ಶಾಸಕನಾಗಿ ಆಯ್ಕೆ ಮಾಡಿರುವುದರಿಂದ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸಿ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿ ಅಭಿವೃದ್ಧಿ ಕಾಮಗಾರಿಗಳಿಗೆ ಹಂತಹಂತವಾಗಿ ಚಾಲನೆ ನೀಡುತ್ತಿದ್ದರು ಇದನ್ನು ಸಹಿಸದ ವಿರೋಧಿಗಳು ಪ್ರತಿಬಾರಿ ನನ್ನನ್ನು ಟೀಕಿಸಿ ಅವರ ಬೆಂಬಲಿಗರಿಂದ ಚಪ್ಪಾಳೆ ಗಿಟ್ಟಿಸುವುದನ್ನೇ ಹವ್ಯಾಸ ಮಾಡಿಕೊಂಡಿರುವುದು ವಿಪರ್ಯಾಸ, ನಾನು ಚಾಲನೆ ನೀಡಿದ ಯಾವುದೇ ಕಾಮಗಾರಿಗಳು ಅರ್ಧಕ್ಕೆ ನಿಂತಿರುವುದು ಮತ್ತು ಈ ಹಿಂದಿನ ಅವಧಿಯಲ್ಲಿನ ಅನುದಾನಗಳಿಗೆ ಚಾಲನೆ ನೀಡುತ್ತಿರುವುದನ್ನು ವಿರೋಧಿಗಳು ಸಾಬೀತು ಮಾಡಲಿ, ಇಲ್ಲಸಲ್ಲದ ಅಪಪ್ರಚಾರ ಮಾಡುವುದನ್ನು ಬಿಟ್ಟು ನನ್ನ ಹೆಸರಿನ ವೆಬ್ ಸೈಟ್ www.kmahadev.com ನಲ್ಲಿ ನಾನು ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆಯಲಿ ಎಂದರು.

ಕಣಗಾಲು ಮತ್ತು ಹೊನ್ನಾಪುರ ಗ್ರಾ.ಪಂ ಗಳ ವಿವಿಧೆಡೆ ಈ ಹಿಂದೆ ತಾಲ್ಲೂಕಿನಲ್ಲಿ ಅಧಿಕಾರ ನಡೆಸಿದವರು ಭೇಟಿ ನೀಡದ ಕಾರಣ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ, ಆದರೆ ಈ ಭಾಗದ ಜನರು ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದ ವೇಳೆ 2 ಬಾರಿ ಸೋತಾಗಲೂ ಮತ್ತು ಕಳೆದ ಬಾರಿ ಗೆದ್ದಾಗಲೂ ಹೆಚ್ಚು ಮತ ನೀಡಿದ್ದು ಅವರ ನಂಬಿಕೆಗೆ ಚ್ಯುತಿ ಬರದಂತೆ ಹಂತಹಂತವಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭ ಜಿ.ಪಂ ಸದಸ್ಯೆ ರುದ್ರಮ್ಮ ನಾಗಯ್ಯ, ತಾ.ಪಂ ಸದಸ್ಯರಾದ ಸುಮಿತ್ರಾ ನಾಗರಾಜ್, ಮೋಹನ್ ರಾಜ್, ಪಿಡಬ್ಲ್ಯುಡಿ ಎಇಇ ಜಯಂತ್, ಜಿ.ಪಂ ಎಇಇ ಮಂಜುನಾಥ್, ಬಿಇಒ ವೈ.ಕೆ ತಿಮ್ಮೆಗೌಡ, ದೈಹಿಕ ಪರಿವೀಕ್ಷಕ ರಘುನಾಥ, ತಾ.ಪಂ ಸಹಾಯಕ ನಿರ್ದೇಶಕ ರಘುನಾಥ್, ಕಂದಾಯಾಧಿಕಾರಿ ಪ್ರದೀಪ್, ಮುಖಂಡರಾದ ಹನುಮಂತು, ಮಹದೇವ್, ಪ್ರಗತಿಪರ ರೈತ ಸುಪ್ರೀತ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಮುಖಂಡರು ಹಾಜರಿದ್ದರು.