
ಸಂಕಷ್ಟಕ್ಕೊಳಗಾದ ಮೃತರ ಕುಟುಂಬಕ್ಕೆ ಸರಕಾರದಿಂದ ಪರಿಹಾರ ದೊರಕಿದ್ದು ಕುಟುಂಬ ನಿರ್ವಹಣೆಗೆ ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಕೆ ಮಹದೇವ್ ತಿಳಿಸಿದರು.
ಮೀನು ಮರಿ ದಾಸ್ತಾನು ಮಾಡಲು ಹೋಗಿ ಹರಿಗೋಲು ಮುಗುಚಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದ ವ್ಯಕ್ತಿಯ ಕುಟುಂಬಕ್ಕೆ ಸರಕಾರದಿಂದ ದೊರೆತ ಪರಿಹಾರ ಹಣದ ಮಂಜೂರಾತಿ ಆದೇಶ ಪತ್ರವನ್ನು ನೀಡಿದರು.
2019 ನೆ ಜೂನ್ 26 ರಂದು ಪಿರಿಯಾಪಟ್ಟಣ ತಾಲೂಕಿನ ಸಂಗರಶೆಟ್ಟಹಳ್ಳಿ ಗ್ರಾಮದ ಎಸ್ ಜೆ ಸುಧಾಕರ್ ಎಂಬುವವರು ಅರಕಲಗೂಡು ತಾಲೂಕು ಹಾನಗಲ್ಲು ದೊಡ್ಡಕೆರೆಯಲ್ಲಿ ಮೀನುಮರಿ ದಾಸ್ತಾನು ಮಾಡಲು ಹೋಗಿ ಹರಿಗೋಲು ಮೃತಪಟ್ಟಿದ್ದರು ಮೃತರ ಕುಟುಂಬದವರು ಸರಕಾರದಿಂದ ಪರಿಹಾರ ದೊರಕಿಸಿ ಕೊಡುವಂತೆ ಶಾಸಕ ಕೆ ಮಹದೇವ್ ಅವರಿಗೆ ಮನವಿ ಮಾಡಿದರು. ಶಾಸಕರ ಸೂಚನೆಗೆ ಸ್ಪಂದಿಸಿದ ಬೆಂಗಳೂರಿನ ಮೀನುಗಾರಿಕೆ ನಿರ್ದೇಶನಾಲಯ ಸರಕಾರ ವತಿಯಿಂದ 2 ಲಕ್ಷ ರೂ ಪರಿಹಾರ ಹಣ ಘೋಷಿಸಿದ್ದು ಮಂಜೂರಾತಿ ಆದೇಶ ಪತ್ರವನ್ನು ಶಾಸಕ ಕೆ ಮಹದೇವ್ ಮೃತರ ಪತ್ನಿ ವನಜಾಕ್ಷಿ ಅವರಿಗೆ ಹಸ್ತಾಂತರಿಸಿದರು .
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಿವರಂಜನ್, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಟಿ ರಂಗಸ್ವಾಮಿ, ಗುತ್ತಿಗೆದಾರರಾದ ನವೀನ್, ವಸಂತ್, ಮೃತರ ಪತ್ನಿ ವನಜಾಕ್ಷಿ, ಮಗಳು ರೋಹಿಣಿ, ಅಳಿಯ ಸಂತೋಷ್, ಸಹೋದರ ಸತ್ಯನಾರಾಯಣ ಇದ್ದರು.