
ತಾಲೂಕಿನ ಹೋಟೆಲ್ ಮಾಲೀಕರ ತೊಂದರೆಗಳನ್ನು ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ ಮಹದೇವ್ ತಿಳಿಸಿದರು
ನೂತನ ಪುರಸಭೆ ಕಟ್ಟಡದಲ್ಲಿ ಕರೆದಿದ್ದ ತಾಲ್ಲೂಕು ಹೋಟೆಲ್ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಹೋಟೆಲ್ಗಳು 30ಕ್ಕೂ ಹೆಚ್ಚು ಬೇಕರಿಗಳು ಇದ್ದು ಹೋಟೆಲ್ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದ್ದು ಸಂಬಂಧಪಟ್ಟಂತಹ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕೊಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅನೇಕ ಹೋಟೆಲ್ ಮಾಲೀಕರು ಮಾತನಾಡಿ ತಾಲೂಕಿನ ಪೊಲೀಸ್ ಠಾಣೆಯ ಎಸೈ ಸದಾಶಿವ ತಿಪ್ಪಾರೆಡ್ಡಿ ಅವರು ಮಾಲೀಕರುಗಳಿಗೆ ಅವಾಚ್ಯಶಬ್ದಗಳಿಂದ ನಿಂದಿಸುತಿದ್ದು ರಾತ್ರಿ 9:30ಕ್ಕೆ ಹೋಟೆಲ್ ಬಂದ್ ಮಾಡುವಂತೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಎಂ ರಸ್ತೆಯ ಆಸುಪಾಸಿನಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿದ್ದು ಹೋಟೆಲ್ಗಳನ್ನು ರಾತ್ರಿ 11ರ ವರೆಗೂ ತೆರೆಯಲು ಅವಕಾಶ ಕೊಡಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ ಮಹದೇವ್ ರವರು ಯಾವುದೇ ಅಂಗಡಿ-ಮುಂಗಟ್ಟುಗಳ ಮಾಲೀಕರು ಹೋಟೆಲ್ ಮಾಲೀಕರು ಸಮಸ್ಯೆಗಳನ್ನು ನನ್ನ ಗಮನಕ್ಕೆ ತಾರದೆ ತೊಂದರೆಗಳನ್ನು ಅನುಭವಿಸುತ್ತಿದ್ದರೇ ನನ್ನನ್ನು ಹೊಣೆ ಮಾಡಬೇಡಿ ಸಮಸ್ಯೆಗಳಿದ್ದರೆ ನನ್ನನ್ನು ಸಂಪರ್ಕಿಸಿ ಪರಿಹಾರ ದೊರಕಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ ಮಾಲೀಕರು ತಾವು ನಡೆಸುವ ಹೋಟೆಲ್ಗಳ ಪರವಾನಿಗೆಯನ್ನು ನವೀಕರಿಸಿಕೊಂಡು ಸಂಬಂಧಿಸಿದ ತೆರಿಗೆಗಳನ್ನು ಪಾವತಿಸ ಏಕೆಂದು ಸಲಹೆ ನೀಡಿದರಲ್ಲದೆ ಕನ್ನಂಬಾಡಿ ಅಮ್ಮನವರ ಹಾಗೂ ಮಸಣೀಕಮ್ಮನವರ ಜಾತ್ರೆಗೆ ಪ್ರತಿಯೊಬ್ಬರು ದೀಪಾಲಂಕಾರ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ವಿನೋದ್ ಮುಖ್ಯಾಧಿಕಾರಿ ಚಂದ್ರಕುಮಾರ್, ಪುರಸಭಾ ಸದಸ್ಯರು ಮತ್ತು ಹೋಟೆಲ್ ಮಾಲೀಕರು ಹಾಜರಿದ್ದರು