
ಪಟ್ಟಣದ ಕನ್ನಂಬಡಿ ಅಮ್ಮ ಸಮುದಾಯಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಿದಿರು ಮಿಷನ್ ಯೋಜನೆಯಡಿಯಲ್ಲಿ ಮೇದಾರ ಫಲಾನುಭವಿಗಳಿಗೆ ಬಿದಿರು ಕೌಶಲ್ಯ ಅಭಿವೃದ್ಧಿ ಮತ್ತು ಅರಿವು ಮೂಡಿಸುವ ಜಿಲ್ಲಾಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಬಿದಿರು ಉತ್ಪನ್ನಗಳ ಬಳಕೆಯು ಇಂದು ಆಧುನಿಕತೆಯ ಸಮಾಜದಿಂದ ಬಳಕೆ ಕಡಿಮೆಯಾಗಿದೆ ಇದರಿಂದಾಗಿ ಬಿದಿರು ಉತ್ಪನ್ನ ಕಾರರ ಜೀವನ ಸಂಕಷ್ಟಕ್ಕೊಳಗಾಗಿದೆ ಇದನ್ನು ಅರಿತ ಸರ್ಕಾರ ಇಲಾಖೆಗಳ ಮೂಲಕ ಸಹಾಯಧನದಲ್ಲಿ ಕಡಿಮೆ ವೆಚ್ಚಕ್ಕೆ ಬಿದಿರನ್ನು ನೀಡಿದರು ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುತ್ತಿದೆ ಇದನ್ನು ಸಮುದಾಯಗಳು ಸದುಪಯೋಗಪಡಿಸಿಕೊಳ್ಳಬೇಕು. ಅರಣ್ಯ ಇಲಾಖೆ ವತಿಯಿಂದ ಯೋಜನೆಯನ್ನು ಸಾರ್ಥಕತೆ ಗೊಳಿಸಲು ರೈತರು ಸ್ವಂತ ಜಮೀನಿನಲ್ಲಿ ಕೂಡ ಬಿದಿರನ್ನು ಬೆಳೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಮೇದಾರ ಸಮುದಾಯಕ್ಕೆ ಬಿದಿರಿನ ಉತ್ಪನ್ನಗಳು ಜೀವನದ ಆಧಾರ ಸ್ತಂಭವಾಗಿದ್ದ ಇವುಗಳನ್ನು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡುವ ಅವಕಾಶ ಕೂಡ ಸರ್ಕಾರವೇ ವಹಿಸುತ್ತಿದ್ದು ಇದರಿಂದ ಬಿದಿರು ಉತ್ಪನ್ನ ಕಾರರ ಜೀವನ ಆರ್ಥಿಕ ಸದೃಢತೆ ಹೊಂದುತ್ತದೆ ಎಂದರಲ್ಲದೆ ಕಾರ್ಯಕ್ರಮದಲ್ಲಿ ನೆರೆದಿದ್ದ ಸಭಿಕರು ಕೋವಿ ಪರಿಣಾಮದಿಂದಾಗಿ ಬಿದಿರು ಉತ್ಪನ್ನಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ಸರ್ಕಾರಕ್ಕೆ ಕಡಿಮೆ ಹಣವನ್ನು ಕೊಡಲು ನೀಡಿ ಬಿದಿರನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶಾಸಕರು ಶಾಸಕರು ಸರ್ಕಾರದೊಂದಿಗೆ ಚರ್ಚಿಸಿ ತಿಂಗಳಿಗೊಮ್ಮೆಯಾದರೂ ಬಿದಿರನ್ನು ನೀಡುವಂತೆ ಮಾಡಬೇಕು ಎಂದು ಮನವಿ ಮಾಡಿದ ಪರಿಣಾಮ ಈ ಬಗ್ಗೆ ಅಧಿವೇಶನದಲ್ಲಿ ನಾನು ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ನಿರೂಪ ರಾಜೇಶ್ ಸ್ಥಾಯಿ ಸಮಿತಿ ಅಧ್ಯಕ್ಷ ಎ ಟಿ ರಂಗಸ್ವಾಮಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ರಘುನಾಥ್ ಹುಣಸೂರು ಉಪ ವಿಭಾಗ ವಲಯ ಅರಣ್ಯಾಧಿಕಾರಿ ಪೂವಯ್ಯ ಪಿರಿಯಾಪಟ್ಟಣ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಕೆ ಆರ್ ನಗರ ವಲಯ ಅರಣ್ಯ ಅಧಿಕಾರಿ ಜಗದೀಶ್ ಸಿಬ್ಬಂದಿಗಳಾದ ಪೆಮ್ಮಯ್ಯ ಸಂದೀಪ್ ರಾಜು ಸತೀಶ್ ನವೀನ್ ಪೂರ್ಣಿಮಾ ಮಧುಸೂದನ್ ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು