
ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಕಲ್ಕೆರೆ ಗ್ರಾಮದಲ್ಲಿ ಆರಂಭಿಸಿರುವ ನೂತನ ಪಡಿತರ ಉಪಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನಾದ್ಯಂತ ಒಟ್ಟು 90 ನ್ಯಾಯಬೆಲೆ ಅಂಗಡಿಗಳಿದ್ದು ಇವುಗಳಲ್ಲಿ ಅನೇಕ ಗ್ರಾಮಗಳ ಜನರು ಪಡಿತರ ಪಡೆಯಲು ದೂರದ ಕೇಂದ್ರಗಳಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ಇದನ್ನು ಅರಿತು ತಾಲೂಕಿನಲ್ಲಿ 31 ಉಪ ಕೇಂದ್ರಗಳನ್ನು ಗುರುತಿಸಿದ್ದು ಉಪ ಕೇಂದ್ರಗಳ ಮೂಲಕ ಪಡಿತರವನ್ನು ಮೂಲ ಕೇಂದ್ರದಿಂದ ಸರಬರಾಜು ಮಾಡಿ ಗ್ರಾಮದಲ್ಲಿ ಜನರಿಗೆ ಪಡಿತರ ವಿತರಣೆಯಾಗಲಿದೆ ಎಂದರು.