ಮೈಮುಲ್ ನೂತನ ಅಧ್ಯಕ್ಷರಾಗಿ ಪಿ.ಎಂ ಪ್ರಸನ್ನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 30/03/2021

ಪ್ರತಿಷ್ಠಿತ ಸಹಕಾರ ಸಂಘಗಳಲ್ಲಿ ಒಂದಾದ MYMUL ನ ನೂತನ ಅಧ್ಯಕ್ಷರಾಗಿ ಪಿರಿಯಾಪಟ್ಟಣ ಜೆಡಿಎಸ್ ಶಾಸಕ ಕೆ ಮಹದೇವ್ ಅವರ ಪುತ್ರ ಪಿ.ಎಂ ಪ್ರಸನ್ನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಿ.ಎಂ ಪ್ರಸನ್ನ ಅವರು ಶಾಸಕ ಜಿ.ಟಿ ದೇವೇಗೌಡ ಬಣದಲ್ಲಿ ಗುರುತಿಸಿಕೊಂಡಿದ್ದು ಇದೆ ಬಣದಲ್ಲಿ ಅಧ್ಯಕ್ಷ ಆಕಾಂಕ್ಷಿಗಳಾಗಿದ್ದ ಹಲವರು ವಿವಿಧ ರೀತಿಯಲ್ಲಿ ಶಾಸಕರ ಮೇಲೆ ಒತ್ತಡ ಹೇರಿದ್ದರು ಆದರೆ ನಿರ್ದೇಶಕರ ಚುನಾವಣೆ ವೇಳೆ ಹೆಚ್.ಡಿ.ಕುಮಾರಸ್ವಾಮಿ ಬಣವನ್ನು ಎದುರುಹಾಕಿಕೊಂಡು ತಮಗೆ ಹೆಗಲು ನೀಡಿದ ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ಮಗನಿಗೆ ಜಿ.ಟಿ ದೇವೇಗೌಡರು ಸ್ಪಂದಿಸಿ ಅವರಿಗೆ ಅವಕಾಶ ಮಾಡಿಕೊಟ್ಟರು. ಉಳಿದ ಆಕಾಂಕ್ಷಿಗಳನ್ನು ಸಮಾಧಾನಪಡಿಸಿ ಮಂಗಳವಾರ ನಡೆದ ಚುನಾವಣೆಯಲ್ಲಿ ತಮ್ಮ ಬಣ್ಣದಿಂದ ಒಮ್ಮತದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರು. ಎದುರಾಳಿ ಸ್ಪರ್ಧೆಗಿಳಿಯುವ ಸಾಹಸ ಮಾಡಲಿಲ್ಲ ಪಿ.ಎಂ ಪ್ರಸನ್ನ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಲಿಲ್ಲ.

ಚುನಾವಣಾಧಿಕಾರಿ ಜನಾರ್ಧನ್ ನೇತೃತ್ವದಲ್ಲಿ ಬನ್ನೂರು ರಸ್ತೆಯಲ್ಲಿರುವ ಮೆಗಾ ಡೇರಿ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಿತು. ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದೆ. 2:00 ಗಂಟೆಗೆ ಚುನಾವಣಾ ಸಭೆ ನಡೆಸಿ ಪಿ.ಎಂ ಪ್ರಸನ್ನ ಅವರ ಅವಿರೋಧ ಆಯ್ಕೆ ಯನ್ನು ಅಧಿಕೃತವಾಗಿ ಘೋಷಿಸಲಾಯಿತು ಎಂದು ಜನಾರ್ದನ್ ತಿಳಿಸಿದರು.

ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ಎರಡನೇ ಅವಧಿಯಲ್ಲಿ ಪ್ರಸನ್ನ ಅವರಿಗೆ ಅಧ್ಯಕ್ಷ ಸ್ಥಾನದ ಅವಕಾಶ ಒಲಿದಿದೆ.
2015ರಲ್ಲಿ ಮೊದಲಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.

ನೂತನ ಮೈಮುಲ್ ಅಧ್ಯಕ್ಷ ಪಿ ಎಂ ಪ್ರಸನ್ನ ಮಾತನಾಡಿ ಅಧ್ಯಕ್ಷ ಸ್ಥಾನ ಪಡೆಯಲು ಸಹಕಾರ ನೀಡಿದ ಮಾಜಿ ಸಚಿವರಾದ ಜಿ ಟಿ ದೇವೇಗೌಡ ಹಾಗೂ ಅವರ ಪುತ್ರ ಜಿ ಡಿ ಹರೀಶ್ ಗೌಡ ಮತ್ತು ಎಲ್ಲಾ ನಿರ್ದೇಶಕರಿಗೆ ಧನ್ಯವಾದ ತಿಳಿಸಿ ಅಧಿಕಾರವಧಿಯಲ್ಲಿ ಪ್ರಾಮಾಣಿಕ ಹಾಗೂ ಪಾರದರ್ಶಕ ಕರ್ತವ್ಯ ನಿರ್ವಹಿಸಿ ಅಭಿವೃದ್ಧಿಗೆ ಶ್ರಮಿಸಿ ಹೈನುಗಾರರ ಹಿತ ಕಾಪಾಡಲು ಬದ್ಧನಾಗಿರುತ್ತೇನೆ ಎಂದರು . ಸಹಕಾರ ಕ್ಷೇತ್ರಕ್ಕೆ ರಾಜಕೀಯ ಬೆರೆಸಬಾರದು ಆದರೂ ಚುನಾವಣೆ ಸಂದರ್ಭ ಲೋಪದೋಷಗಳು ಆಗಿರಬಹುದು ಅವೆಲ್ಲವನ್ನೂ ಮರೆತು ಎಲ್ಲರೂ ಒಟ್ಟಾಗಿ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು. ನಾನು ಜೆಡಿಎಸ್ ಪಕ್ಷದಲ್ಲಿಯೇ ಇದ್ದೇನೆ ಅತಿ ಶೀಘ್ರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರಿಗೆ ಭೇಟಿಯಾಗುತ್ತೇನೆ ಎಂದು ತಿಳಿಸಿದರು. ಇದೇ ವೇಳೆ ನೂತನವಾಗಿ ಆಯ್ಕೆಯಾದ ಮೈಮುಲ್ ನಿರ್ದೇಶಕರನ್ನು ಅಭಿನಂದಿಸಲಾಯಿತು.

ಈ ಸಂದರ್ಭ ಮಾಜಿ ಸಚಿವ ಜಿ ಟಿ ದೇವೇಗೌಡ ಹಾಗೂ ಪತ್ನಿ ಲಲಿತಾ ಗೌಡ, ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿಡಿ ಹರೀಶ್ ಗೌಡ, ಶಾಸಕ ಕೆ ಮಹದೇವ್ ಹಾಗೂ ಪುತ್ರ ಉಮೇಶ್, ಮೈಮುಲ್ ನಿರ್ದೇಶಕರು ಸೇರಿದಂತೆ ಪಿರಿಯಾಪಟ್ಟಣದ ನೂರಾರು ಬೆಂಬಲಿಗರು ಹಾಜರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top