
ಚಿಟ್ಟೇನಹಳ್ಳಿ ಗ್ರಾಮ ಪರಿಮಿತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ 20ಲಕ್ಷರೂ, ಜಿ ಬಸವನಹಳ್ಳಿ ಗ್ರಾಮ ಪರಿಮಿತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ 25 ಲಕ್ಷ ರೂ.
ಬೂದಿತಿಟ್ಟು ಗ್ರಾಮ ಪರಿಮಿತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ 20 ಲಕ್ಷ ರೂ ಹಾಗೂ ಕಿರನಹಳ್ಳಿ ಗ್ರಾಮ ಪರಿಮಿತಿಯಲ್ಲಿ 20 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು ಸುಳ್ಳಿನ ಅಪಪ್ರಚಾರಕ್ಕೆ ಕಿವಿಗೊಡದೆ ಅಭಿವೃದ್ಧಿಯ ಸತ್ಯತೆಯನ್ನು ಅರಿತು ಜನತೆ ಜಾಗೃತರಾಗಬೇಕು, ತಾಲೂಕಿನ ಅಭಿವೃದ್ಧಿಯ ವಿಚಾರದಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಪ್ರತಿ ಸಮುದಾಯದ ಗ್ರಾಮಗಳಿಗೂ ಅನುದಾನ ಹಂಚಿಕೆ ಮಾಡಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿದ್ದೇನೆ ಇದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಆದ್ದರಿಂದ ಸಾರ್ವಜನಿಕರು ಅಪಪ್ರಚಾರಕ್ಕೆ ಕಿವಿಗೊಡದೆ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಬರುತ್ತಿದ್ದು, ಹೆಚ್ಚಿನ ಅಭಿವೃದ್ಧಿಗಾಗಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು. ನನ್ನ ರಾಜಕಾರಣದಲ್ಲಿ ತಾಲೂಕಿನ ಅನೇಕ ಗ್ರಾಮಗಳು ಹೆಚ್ಚಿನ ಮತಗಳನ್ನು ನೀಡಿ ಸದಾ ನನ್ನ ಜೊತೆ ಇದ್ದೀರಿ ಅದಕ್ಕೆ ನಾನು ಚಿರಋಣಿಯಾಗಿರುತ್ತೇನೆ. ಇದೇ ವಿಶ್ವಾಸ ಸದಾ ಇರಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಿ, ಸದಸ್ಯ ಟಿ ಈರಯ್ಯ, ಜಿಲ್ಲಾ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ. ಎನ್. ರವಿ,ಗ್ರಾಪಂ ಅಧ್ಯಕ್ಷ ಮಹದೇವ್, ಮಂಜುನಾಥ್, ಮಾಜಿ ತಾಪಂ ಸದಸ್ಯ ರಘುನಾಥ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದೇಗೌಡ ಕ್ಷೇತ್ರಶಿಕ್ಷಣಾಧಿಕಾರಿ ತಮ್ಮೇಗೌಡ,ಅಭಿಯಂತರಾದ ಕುಮಾರ್,ಕೃಷಿ ಇಲಾಖೆ ಅಧಿಕಾರಿ ಶಿವಕುಮಾರ್, ತಾಪಂ ಸಹಾಯಕ ನಿರ್ದೇಶಕ ರಘುನಾಥ್, ಭೂಮಾಪನ ಇಲಾಖೆಯ ಎಂ.ಕೆ.ಪ್ರಕಾಶ್, ಗುತ್ತಿಗೆದಾರ ಶಿವಣ್ಣ,ವಸಂತ ಸೇರಿದಂತೆ ಮತ್ತಿತರರು ಹಾಜರಿದ್ದರು.