
ಈ ವೇಳೆ ಮಾತನಾಡಿದ ಶಾಸಕರು ಐಟಿಐ ತರಬೇತಿದಾರರಿಗೆ ಕೌಶಲ್ಯ ಆಧಾರಿತ ತರಬೇತಿ ನೀಡುವ ಉದ್ದೇಶದಿಂದ ಟಾಟಾ ಟೆಕ್ನಾಲಜಿ ಕಂಪನಿ ರಾಜ್ಯದ 150 ಐಟಿಐ ಸಂಸ್ಥೆಗಳಲ್ಲಿ ಕಟ್ಟಡ ನಿರ್ಮಿಸಿ ಆಧುನಿಕ ತಂತ್ರಜ್ಞಾನ ಆಧಾರಿತ ತರಬೇತಿ ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಲು ಮುಂದಾಗಿರುವುದು ಸಂತಸದ ವಿಷಯ, ಈ ರೀತಿಯ ನೂತನ ಯೋಜನೆಗಳಿಂದ ಮುಂದಿನ ಪೀಳಿಗೆಯ ತರಬೇತುದಾರರಿಗೆ ಹೆಚ್ಚು ಸ್ಪೂರ್ತಿ ದೊರೆಯಲಿದೆ.
ಕೋರೋನ ಸಂಕಷ್ಟ ಕಾಲದಲ್ಲಿ ಹಲವೆಡೆ ಉದ್ಯೋಗ ಕಡಿತವಾಗಿ ಜೀವನ ನಿರ್ವಹಣೆ ದುಸ್ತರವಾದ ಸಂದರ್ಭ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿಎಸ್ಆರ್ ಅನುದಾನ ಮುಖಾಂತರ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಿರುವುದು ಶ್ಲಾಘನೀಯ ಎಂದರು.

ಪ್ರಾಂಶುಪಾಲ ಶ್ರೀಧರ್ ಮಾತನಾಡಿ ಟಾಟಾ ಟೆಕ್ನಾಲಜಿ ಅವರ ವಿನೂತನ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಪಡೆಯಲು ಸಹಕಾರಿಯಾಗಲಿದೆ. ಐಟಿಐ ತರಬೇತಿ ಪಡೆದವರಿಗೆ ಸಾಕಷ್ಟು ಉದ್ಯೋಗ ಅವಕಾಶಗಳು ದೊರೆಯಲಿದ್ದು ತರಬೇತುದಾರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ನಿರ್ಮಿತ ಕೇಂದ್ರದ ಅಧಿಕಾರಿ ರಕ್ಷಿತ್ ಮಾತನಾಡಿ ಟಾಟಾ ಟೆಕ್ನಾಲಜಿಸ್ ಸಹಭಾಗಿತ್ವದಲ್ಲಿ ರಾಜ್ಯದ ವಿವಿಧೆಡೆ 4550 ಕೋಟಿ ಸಿ ಎಸ್ ಆರ್ ಅನುದಾನದಡಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಆಧುನಿಕ ತಂತ್ರಜ್ಞಾನ ಕೌಶಲ್ಯಾಧಾರಿತ ತರಬೇತಿಗೆ ಒತ್ತು ನೀಡಿ ಉದ್ಯೋಗ ಅವಕಾಶ ನೀಡಲಾಗುತ್ತಿದೆ ಎಂದರು.

ಈ ಸಂದರ್ಭ ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್ ಸದಸ್ಯರಾದ ಪುಷ್ಪಲತಾ ಮುಖ್ಯಾಧಿಕಾರಿ ಪ್ರಸನ್ನಕುಮಾರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿಡಿಸಿ ಸದಸ್ಯ ರಾಜಣ್ಣ ಮುಖಂಡರಾದ ಉಮೇಶ್ ತರಬೇತಿ ಅಧಿಕಾರಿಗಳಾದ ಪ್ರೇಮ ಹೆಚ್ ಎಸ್ ರಾಜ, ಸಿಬ್ಬಂದಿ ಸಂಧ್ಯಾರಾಣಿ, ಶಾಂತಲಾ, ಮತ್ತಿತರರು ಹಾಜರಿದ್ದರು