ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಇತರರಿಗೆ ಮಾದರಿಯಾಗಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯವಾದದ್ದು ಎಂದು ಶಾಸಕ ಕೆ.ಮಹದೇವ್ ಅಭಿಪ್ರಾಯ ವ್ಯಕ್ತಪಡಿಸಿದರು. 10/04/2021

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಕೊವೀಡ್-19 ನಿಯಂತ್ರಣದಲ್ಲಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಆರೋಗ್ಯ ಮತ್ತು ಶುಚಿತ್ವದ ಕಿಟ್ ಗಳ ವಿತರಣಾ ಕಾರ್ಯಕ್ರಮದಲ್ಲಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.
ಕೊವೀಡ್-19 ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತರ ಪಾತ್ರ ಅಪಾರವಾಗಿದ್ದು,ಇವರುಗಳು ತಮ್ಮ ಪ್ರಾಣದ ಹಂಗನ್ನು ತೊರೆದು ಕಾರ್ಯ ನಿರ್ವಹಿಸಿದ್ದಾರೆ.ಆದರಿಂದ್ದ ಇತರರ ಆರೋಗ್ಯವನ್ನು ಕಾಪಾಡುವ ಇವರುಗಳನ್ನು ಸ್ಮರಿಸುವ ಜವಾಬ್ದಾರಿ ನಮ್ಮದಾಗಿದೆ.ಈ ಹಿನ್ನೆಲೆಯಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆಯು ಇವರಿಗೆ ಆರೋಗ್ಯದ ಕಿಟ್ ಗಳನ್ನು ನೀಡುತ್ತಿರುವುದು ಉತ್ತಮವಾದ ಕೆಲಸ.ಇದಲ್ಲದೆ ಈ ಸಂಸ್ಥೆಯೂ ಸರ್ಕಾರದ ಯಾವುದೇ ಅನುದಾನವಿಲ್ಲದಿದ್ದರು ಇತರರ ಸಹಾಯ ಹಸ್ತದಿಂದ ಸಾಮಾಜಿಕ ದೂರದೃಷ್ಟಿಯ ಮೂಲಕ ಅಂಗವಿಕಲರಿಗೆ,ಬುದ್ದಿ ಮಾಂಧ್ಯ ಮಕ್ಕಳ ಕಲ್ಯಾಣದ ಸೇವಾ ಕಾರ್ಯಗಳನ್ನು ಮಾಡುತ್ತಾ ಇತರರಿಗೆ ಮಾದರಿಯಾಗಿದ್ದಾರೆ ಆದರಿಂದ್ದ ಇವರ ಕಾರ್ಯಗಳು ಶ್ಲಾಘನೀಯವಾದದ್ದು ಎಂದರು.

ಸಂಸ್ಥೆಯ ಜಿಲ್ಲಾ ಮುಖ್ಯಸ್ಥ ಶಿವರಾಜ್ ಮಾತನಾಡಿ ಸಂಸ್ಥೆಯ ವತಿಯಿಂದ ಕೊವೀಡ್ ನಿಯಂತ್ರಣಕ್ಕೆ ಸಾಕಷ್ಟು ಹಣವನ್ನು ಮೀಸಲಿಟ್ಟು ಸಾಮಾಜಿಕ ಕಾರ್ಯ ಮಾಡುವುದರ ಜೊತೆಗೆ ಕೊವೀಡ್ ನಿಂಯತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ನಾಗರೀಕನನ್ನು ಕೂಡ ಗೌರವಿಸುವ ಮತ್ತು ರಕ್ಷಿಸುವ ಕಾರ್ಯ ಮಾಡುತ್ತಿದೆ. ಇದಲ್ಲದೆ ಬುದ್ದಿ ಮಾಂಧ್ಯ ಮಕ್ಕಳಿಗೆ ಮತ್ತು ಅಂಗವಿಕಲರಿಗೆ ಉಚಿತವಾದ ಶಿಕ್ಷಣ,ಉದ್ಯೋಗ ವ್ಯವಸ್ಥೆ ಮತ್ತು ಉದ್ಯೋಗ ದೊರಕದಿದ್ದಲಿ ನಿರುದ್ಯೋಗ ಭತ್ಯಯನ್ನು ಕೂಡ ಕಲ್ಪಸಿ ಇವರುಗಳ ಜಿವನ ಸದೃಡಗೊಳ್ಳಲು ಶ್ರಮಿಸುತ್ತಿದೆ ಆದರಿಂದ್ದ ಈ ಸಂಸ್ಥೆಯ ಸಾಮಾಜಿಕ ಕಾರ್ಯಗಳಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.


ಈ ಸಂದರ್ಭದಲ್ಲಿ ತಹಸೀಲ್ದಾರ್ ಚಂದ್ರಮೌಳಿ,ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್,ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಚ್.ಡಿ.ಶರತ್,ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಘುನಾಥ್,ಪುರಸಭೆ ಮುಖ್ಯಾಧಿಕಾರಿ ಪ್ರಸನ್ನ,ಹಿಂದುಳಿದ ವರ್ಗಗಳ ಕಲ್ಯಾಣಾ ಇಲಾಖಾಧಿಕಾರಿ ಮೋಹನ್ ರಾಜ್,ಸಂಸ್ಥೆಯ ಸಿಬ್ಬಂದಿ ಸಿದ್ದರೂಡ ಆರ್ ಸೆರೆವಾಡ ಸೇರಿದಂತ್ತೆ ಮತಿತ್ತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top