ಮೀನುಗಾರಿಕೆಯನ್ನು ಕಸುಬನ್ನಾಗಿಸಿ ಜೀವಿಸುವ ಅನೇಕ ಕುಟುಂಬಗಳಿದ್ದು ಇವರುಗಳು ಸರ್ಕಾರದ ಪ್ರೋತ್ಸಾಹ ಧನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಕೆ ಮಹದೇವ್ ತಿಳಿಸಿದರು . 12/04/2021

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಮೀನುಗಾರಿಕೆ ಇಲಾಖೆಯ ವತಿಯಿಂದ ಮೀನುಗಾರಿಕೆ ತರಬೇತಿ ಪಡೆದ ಫಲಾನುಭವಿಗಳಿಗೆ ಮೀನುಗಾರಿಕೆ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು ಮೀನುಗಾರಿಕೆಯೂ ಕೂಡ ಆರ್ಥಿಕ ಸದೃಢತೆಯ ಉದ್ಯಮವಾಗಿದ್ದು ಇದನ್ನೇ ನಂಬಿ ಅನೇಕ ಕುಟುಂಬಗಳು ಜೀವನ ಸಾಗಿಸುತ್ತಿದೆ ಈ ಕಾರಣಕ್ಕಾಗಿ ಸರ್ಕಾರ ಮತ್ತು ಇಲಾಖೆಯು ಮೀನುಗಾರರಿಗೆ ಹರಿಗೋಲು, ಬಲೆ, ತಕ್ಕಡಿ ,ಕ್ರೇಟ್ ಸೇರಿದಂತೆ ಹತ್ತು ಸಾವಿರ ಮೌಲ್ಯದ ಸಲಕರಣೆಗಳನ್ನು ನೀಡುತ್ತಿದೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಯಾವುದೇ ಕಾರಣಕ್ಕೂ ಇತರರಿಗೆ ಮಾರಾಟ ಮಾಡಬಾರದು ಎಂದು ಸೂಚಿಸಿದರು.
ಮೀನುಗಾರಿಕೆಯೂ ಎಷ್ಟೇ ಅನುಕೂಲಕರವಾಗಿದ್ದರು ಕೂಡ ತುಂಬಾ ಅಪಾಯದ ಕಾರ್ಯ, ಮೀನು ಹಿಡಿಯುವ ಸಂದರ್ಭದಲ್ಲಿ ಬಹಳ ಎಚ್ಚರಿಕೆ ಅವಶ್ಯಕ ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ಅರಕಲಗೂಡಿನಲ್ಲಿ ನಮ್ಮ ತಾಲೂಕಿನ ಸಂಗರ ಶೆಟ್ಟಹಳ್ಳಿ ಗ್ರಾಮದ ಯುವಕ ಸುಧಾಕರ್ ಎಂಬ ವ್ಯಕ್ತಿ ಮೀನು ಹಿಡಿಯಲು ಹೋಗಿ ನದಿಯಲ್ಲಿ ಮುಳುಗಿ ಸತ್ತಿರುವುದು ಎಲ್ಲರಿಗೂ ತಿಳಿದಿದೆ. ಈ ಕುಟುಂಬಕ್ಕೆ ನಾನು ಹೋರಾಟಮಾಡಿ 2 ಲಕ್ಷ ರೂ ಪರಿಹಾರ ಧನ ಕೊಡಿಸಲು ಶ್ರಮಿಸಿದ್ದೇನೆ ಆದ್ದರಿಂದ ಮೀನುಗಾರರು ಯಾವುದೇ ಸಂದರ್ಭದಲ್ಲಿ ನಿರ್ಲಕ್ಷತನ ಮಾಡಬಾರದು ಎಂದು ತಿಳಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top