ಗ್ರಾಮ ಪಂಚಾಯಿತಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುದಾನಗಳನ್ನು ಸ್ಥಳೀಯ ಗ್ರಾಮಗಳ ಅಭಿವೃದ್ಧಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು. 12/04/2021

ತಾಲೂಕಿನ ಬೆಕ್ಕರೆ, ದೊಡ್ಡಕಮರವಳ್ಳಿ, ಹಳಿಯೂರು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮಗಳ ಅಭಿವೃದ್ಧಿಯನ್ನು ಮಾಡಲು ಕೋಟಿಗಟ್ಟಲೆ ಅನುದಾನಗಳ ಅನಿವಾರ್ಯತೆ ಇದೆ. ಆದ್ದರಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅನುದಾನಗಳನ್ನು ಜನಪ್ರತಿನಿಧಿಗಳು ಬಳಸಿ ಗ್ರಾಮಗಳ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಬೇಕು. ಸಾರ್ವಜನಿಕರು ಕೂಡ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಳ್ಳಬೇಕು.ತಾಲೂಕಿನಾದ್ಯಂತ ಗ್ರಾಮೀಣ ಭಾಗಗಳು ಇಂದಿಗೂ ಕೂಡ ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿದ್ದು, ಇವುಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನದ ಅವಶ್ಯಕತೆ ಇದೆ ಆದರೆ ಈ ಹಿಂದೆ ಇದ್ದ ಪ್ರತಿನಿಧಿಗಳು ಅನುದಾನಗಳನ್ನು ವ್ಯರ್ಥ ಗೊಳಿಸಿದ್ದಾರೆ. ಅವರು ಈ ಅನುದಾನಗಳನ್ನು ಸಂಪೂರ್ಣವಾಗಿ ಬಳಸಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿದ್ದರೆ ನಾನು ಇಂದು ಇಷ್ಟು ಶ್ರಮ ಪಡಬೇಕಾಗಿರಲ್ಲಿಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಚುನಾವಣೆಯಲ್ಲಿ ಎರಡು ಬಾರಿ ಸೋತರೂ ಕೂಡ ತಾಲೂಕಿನ ಜನತೆ ನನ್ನ ಜೊತೆ ಇದ್ದು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನಾನು ಶಾಸಕನಾಗಿ ಆಯ್ಕೆಯಾದ ನಂತರ ಪ್ರವಾಹ ಮತ್ತು ಕರೋನ ದಂತಹ ಸಂಕಷ್ಟ ಎದುರಾಗಿದೆ. ಇದರ ಜೊತೆಗೆ ಸಮ್ಮಿಶ್ರ ಸರ್ಕಾರದ ಪತನವು ಕೂಡ ಆಯ್ತು ಇದರಿಂದ ಅನುದಾನದ ಕೊರತೆ ತಾಲೂಕಿನ ಅಭಿವೃದ್ಧಿಗೆ ಮುಳುವಾಗಿದೆ ಇದನ್ನು ತಾಲೂಕಿನ ಜನತೆ ಅರ್ಥಮಾಡಿಕೊಳ್ಳಬೇಕು. ಆದರೂ ಕೂಡ ನಾನು ಇಂದು ದೃತಿಗೆಡದೆ ಈಗಿರುವ ಸರ್ಕಾರದಲ್ಲಿ ತಾಲೂಕಿನ ಅಭಿವೃದ್ಧಿಗೆ ಅನುದಾನಗಳನ್ನು ತರಲು ಸಾಕಷ್ಟು ಶ್ರಮಿಸುತ್ತಿದ್ದೇನೆ .ಆದ್ದರಿಂದ ತಾಲೂಕಿನ ಅಭಿವೃದ್ಧಿಗೆ ಸಾರ್ವಜನಿಕರು ನನಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.


ಈ ಸಂದರ್ಭದಲ್ಲಿ ದೊಡ್ಡಕಮರವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರು, ಸದಸ್ಯರು ಶಾಂಭವಿ, ಮುಖಂಡರಾದ ಹೇಮಂತಕುಮಾರ್, ಚಂದ್ರಕುಮಾರ್, ಮಹಾದೇವ್, ನಾಗಯ್ಯ, ಪದ್ಮಣ್ಣ, ತಾಸಿಲ್ದಾರ್ ಚಂದ್ರಮೌಳಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದೇಗೌಡ, ಎಇಇ ಜಯಂತ್, ಮಂಜುನಾಥ್, ಕುಮಾರ್, ನವೀನ್, ಕುಮಾರ್, ಶಿವಕುಮಾರ್, ಭೂಮಾಪನ ಇಲಾಖೆ ಅಧಿಕಾರಿ ಚಿಕ್ಕಣ್ಣ, ತಾಪಂ ಸಹಾಯಕ ನಿರ್ದೇಶಕ ರಘುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top