ಪಿರಿಯಾಪಟ್ಟಣ ತಾಲೂಕು ಆಡಳಿತ ಭವನದಲ್ಲಿ ನಡೆದ ದೇವರದಾಸಿಮಯ್ಯ ಜಯಂತಿಯನ್ನು ಶಾಸಕ ಕೆ ಮಹದೇವ್ ಉದ್ಘಾಟಿಸಿದರು 17/04/2021

ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ದೇವರದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ದೇವರದಾಸಿಮಯ್ಯ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಸಕ ಕೆ ಮಹದೇವ್ ಚಾಲನೆ ನೀಡಿದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ ತಿಮ್ಮೇಗೌಡ ದೇವರದಾಸಿಮಯ್ಯ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸಕ್ಕೆ ಮುಂತಾದವರಲ್ಲಿ ಅತ್ಯಂತ ಪ್ರಮುಖರು ಇವರು ಶರಣರಲ್ಲಿ ಪ್ರಥಮವಾಗಿ ವಚನಗಳನ್ನು ರಚಿಸಿ ಆ ಮೂಲಕ ಸಮಾಜ ತಿದ್ದುವ ಮೂಲಕ ಕೆಲಸ ಮಾಡಿದರು ಇವರ ಮುಖ್ಯ ಉದ್ದೇಶ ಸಮಾಜ ತಿದ್ದುವುದು ಆಗಿತ್ತು ಅಲ್ಲದೆ ಇವರು ಸಕಲ ಜೀವಿಗಳಲ್ಲಿ ಲೇಸನ್ನು ಬಯಸುವುದು ಹಾಗೂ ಸಮಾಜವನ್ನು ತಿದ್ದುವುದು ಆಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಕೆ ಮಹದೇವ್ ಮಾತನಾಡಿ ಅಂದು ಕಾಯಕದ ಆಧಾರದ ಮೇಲೆ ಜಾತಿ ನಿರ್ಮಾಣವಾಗಿತ್ತು ಈ ಸಂದರ್ಭದಲ್ಲಿ ಮೇಲುಕೀಳೆಂಬ ಅಸಮಾನತೆ ನಿರ್ಮಾಣವಾಗಿ ತಳ ಸಮುದಾಯದ ಜನರು ಸಮಾಜದಲ್ಲಿ ಅಪಮಾನಕ್ಕೆ ತುತ್ತಾಗಿದ್ದರು ಈ ಸಂದರ್ಭದಲ್ಲಿ ಜಾತೀಯತೆಯ ನಿರ್ಮಾಣಕ್ಕೆ ಪಣ ತೊಟ್ಟವರಲ್ಲಿ ದೇವರದಾಸಿಮಯ್ಯ ಅತ್ಯಂತ ಪ್ರಮುಖರು ಇಂತಹ ಮಹನೀಯರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮುನ್ನಡೆಯಬೇಕಿದೆ. ಜೇಡರ ದಾಸಿಮಯ್ಯ ನೇಕಾರ ಸಮಾಜದ ಮಹಾನಾಯಕ ಅಂತಹ ಮಹಾನ್ ವ್ಯಕ್ತಿಯ ಜಯಂತ್ಯೋತ್ಸವ ಸರ್ಕಾರದಿಂದ ಆಚರಿಸುವುದು ಬಹಳ ಸಂತಸದ ಸಂಗತಿ ಎಂದರು

ಈ ಸಂದರ್ಭದಲ್ಲಿ ತಹಸಿಲ್ದಾರ್ ಚಂದ್ರಮೌಳಿ ಮಾತನಾಡಿದರು.

ಈ ಸಂದರ್ಭದಲ್ಲಿ ಇಒ ರಘುನಾಥ್, ಉಪತಹಸೀಲ್ದಾರ್ ಟ್ರೀಜಾ, ಕೆಂಚಪ್ಪ, ಕೇದಾರ ವಿನೋದ್ ಕುಮಾರ್, ಪಾಂಡುರಂಗ, ಸಮಾಜ ಕಲ್ಯಾಣ ಅಧಿಕಾರಿ ಸಿದ್ದೇಗೌಡ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಣ್ಣಸ್ವಾಮಿ. ದೇವಾಂಗ ಸಮಾಜದ ಮುಖಂಡರು ವಿಜಯ್ ಕುಮಾರ್ ಗಿರೀಶ್ ಮಹೇಶ್ ಸುರೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top