
ಪಿರಿಯಾಪಟ್ಟಣ ತಾಲ್ಲೂಕು ಸುರಗಹಳ್ಳಿಯಲ್ಲಿ ಡಾ|| ಬಿ. ಆರ್. ಅಂಬೇಡ್ಕರ್ರವರ ಯುವಕರ ಸಂಘದ ಮತ್ತು ಅಂಬೇಡ್ಕರ್ರವರ130ನೇ ಜಯಂತಿಯ ಕಾರ್ಯಕ್ರಮವನ್ನು ನೂತನ ಮೈಮೂಲ್ ಅಧ್ಯಕ್ಷ ಪಿ ಎಂ. ಪ್ರಸನ್ನರವರು ಉದ್ಘಾಟಿಸಿ ಮಾತನಾಡಿದರು. ಭಾರತದ ಸಂವಿಧಾನ ವಿಶಿಷ್ಟವಾದುದು ಇದನ್ನು ರಚಿಸಿದ ಅಂಬೇಡ್ಕರ್ರವರು ವಿಶ್ವಕಂಡoತಹ ಮಹಾನ್ ನಾಯಕ ಇವರ ಆದರ್ಶವನ್ನು ಅನುಸರಿಸಬೇಕು. ಮಹಿಳೆಯರನ್ನು ಸಬಲೀಕರಣಗೊಳಿಸು ನಿಟ್ಟಿನಲ್ಲಿ ಅಂಬೇಡ್ಕರ್ರವರು ಅಂದೇ ಯೊಚಿಸಿ ಮಹಿಳೆಯರಿಗೆ ಶೇ 50% ಮಿಸಲಾತಿನೀಡಿ ಎಲ್ಲಾ ಕ್ಷೇತ್ರದಲ್ಲಿಯೂ ಗುರುತಿಸುವಂತಾಗಿದೆ ಎಂದರು ಇದರ ಜೊತೆಗೆ ಶಿಕ್ಷಣ ಆರೋಗ್ಯ ಮತ್ತು ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು ಪ್ರಸನ್ನರವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್ ಆರ್ ಕಾಂತರಾಜು, ಹಲಗನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಪಿ.ಕೆ ಮಹದೇವ್, ಸಿ.ಎನ್ ಜಗದೀಶ್, ಸುರಗಳ್ಳಿ ಶಂಕರೇಗೌಡ, ಹಲಗನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಮಹದೇವ್, ಉಪಾಧ್ಯಕ್ಷ ಸಫೀರ್ ಅಹಮ್ಮದ್, , ಸಂಘದ ಅಧ್ಯಕ್ಷ ಕುಮಾರ್ ಕಾರ್ಯದರ್ಶಿ ರಾಮಯ್ಯ, ರವಿ, ರವಿ .ಸಿ ಮಂಜು, ಮುಖಂಡರಾದ ಯ|| ಶ್ರೀನಿವಾಸ, ಪ|| ಸೋಮಶೇಖರ್, ವಿದ್ಯಾಶಂಕರ, ಕರಡಿಪುರ ಕುಮಾರ್, ರವೀಂದ್ರ, ಶಶಿಕುಮಾರ್, ಸಂತೋಷ್, ವೆಂಕಟೇಶ್, ಭರತ್ ಸುಮಂತ್ ಶ್ರೀ ಪುಟ್ಟರಾಜು ಸಾಗರ್, ದೆವರಾಜ್, ಗಣೇಶ್, ಮಾರುತಿ ಹಾಗು ಗ್ರಾಮಸ್ಥರು ಹಾಜರಿದ್ದರು