
ಪ್ರತಿಯೊಂದು ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರಲ್ಲಿ ಕೊರೋನ ವೈರಸ್ ನ ಅರಿವು ಮೂಡಿಸಬೇಕು. ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿದೆ. ಹಾಲಿನ ಖರೀದಿ ಸಂದರ್ಭದಲ್ಲಿ ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿ ಮಾಡಬೇಕು. ಮಾಸ್ಕ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗು ಪ್ರತಿ ಸಂಘದಲ್ಲೂ ಸ್ಯಾನಿಟೈಸರ್ ಒದಗಿಸಬೇಕು ಇದರ ಮೂಲಕ ಕೊರೋನ ವೈರಸ್ ತಡೆಗಟ್ಟಬಹುದಾಗಿದೆ ಎಂದು ರೈತರಲ್ಲಿ ಅರಿವು ಮೂಡಿಸಿದರು. ರೈತರು ಹಾಲು ವಿತರಣೆ ಮಾಡುವ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಮಾಡಿಸಿದರು. ಹಾಗು ಕೋವಿಡ್ ಪ್ರಕರಣ ಕಂಡು ಬಂದ ಗ್ರಾಮಗಳಲ್ಲಿ ಹಾಲು ಖರೀದಿಸಲು ಒಕ್ಕೂಟದಿಂದ ನೀಡಿರುವ ಮಾರ್ಗಸೂಚಿಯಂತೆ ಹಾಲು ಖರೀದಿಸಬೇಕು ಹಾಗು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಇದೆ ಸಂದರ್ಭದಲ್ಲಿ ಹಾಲಿನ ಗುಣಮಟ್ಟದ ಪರೀಕ್ಷೆ ಮಾಡಲಾಯಿತು.
