ಪಿರಿಯಾಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ನಡೆದ ತಾಲೂಕು ಅಧಿಕಾರಿಗಳ ಸಭೆ 28/04/2021

ಪಿರಿಯಾಪಟ್ಟಣ : ಮೈಸೂರು ಜಿಲ್ಲೆಯಲ್ಲಿ ಯಾವುದೆ ಕೊರತೆ ಇಲ್ಲ ಖಾಸಗಿ ಆಸ್ಪತ್ರೆಗಳಗಿಗೆ ಬೇಕಾಗಿದ್ದ ಇಂಜೆಕ್ಷನ್ ಮತ್ತು ಸರಕಾರಕ್ಕೆ ಅಗತ್ಯವಾಗಿದ್ದ ಆಕ್ಸಿಜನ್ ವೆಂಟಿಲೇಟರ್‌ಗಳನ್ನು ಸರಕಾರದವತಿಯಿಂದ ನೀಡಲಾಗುತ್ತಿದ್ದು ಯಾವುದೆ ಭಯಬೇಡ ಎಲ್ಲವನ್ನು ಸರಕಾರ ನಿಭಾಯಿಸಲಿದೆ ಎಂದು ಸಹಕಾರ ಸಚಿವರು ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್ ಟಿ ಸೋಮಶೇಖರ್ ರವರು ತಿಳಿಸಿದರು. ಪಿರಿಯಾಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ನಡೆದ ತಾಲೂಕು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಈ ಹಿಂದೆ ಲ್ಯಾಬ್‌ಗಳಿಂದ ಫಲಿತಾಂಶ ಬರುವುದು ನಿಧಾನವಾಗುತ್ತಿರುವುದರಿಂದಲೆ ಲ್ಯಾಬ್‌ಸಂಖ್ಯೆ ಹೆಚ್ಚಿಸಿ ಖಾಸಗಿಯವರಿಗೂ ಅನುಮತಿ ನೀಡಿ ಶೀಘ್ರದಲ್ಲಿಯೆ ಫಲಿತಾಂಶ ಬರುವಂತೆ ಕ್ರಮವಹಿಸಲಾಗುತ್ತಿದೆ. ತಾಲೂಕು ಎಲ್ಲಾ ಇಲಾಖೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊರೊನಾ ರೋಗ ಹತೋಟಿಗೆ ಶ್ರಮಿಸಬೇಕು ಚೈನ್‌ಲಿಂಕ್ ಕಟ್ ಮಾಡುವ ಸಲುವಾಗಿಯೆ ಲಾಕ್‌ಡೌನ್ ಮಾಡಲಾಗಿದೆ ಎಂದು ತಿಳಿಸಿದರು.

ಪೊಲೀಸ್ ಇಲಾಖೆ ಕೊರೊನಾ ಲಾಕ್‌ಡೌನ್‌ನಲ್ಲಿ ಅನಧಿಕೃತವಾಗಿ ಓಡಾಟ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು. ರೈತರು, ರೋಗಿಗಳು ಮತ್ತತಿರರಿಗೆ ಮಾತ್ರ ತಿರುಗಾಟ ನಡೆಸಲು ಅವಕಾಶ ನೀಡಬೇಕು. ನಾನೇ ಕರೆಮಾಡಿ ಶೀಫಾರಸ್ಸು ಮಾಡಿದರು ಯಾರನ್ನು ಬಿಡಬೇಡಿ, ಪೊಲೀಸರು ಪರಿಸ್ಥಿತಿ ಬಿಗಿಗೊಳಿಸದಿದ್ದರೆ ಲಾಕ್‌ಡೌನ್ ಪ್ರಯೋಜನವಿಲ್ಲವಾಗುತ್ತದೆ ಆದ್ದರಿಂದ ಇಲಾಖೆವರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗ ಬೇಕು ಎಂದು ತಿಳಿಸಿದರು.

ತಾಲೂಕು ಆಸ್ಪತ್ರೆಗೆ ಅಗತ್ಯವಾದ ನರ್ಸಗಳು ಹಾಗೂ ಮತ್ತಿತರರನ್ನು 6 ತಿಂಗಳ ಮಟ್ಟಿಗೆ ತೆಗೆದುಕೊಳ್ಳಲು ಅವಕಾಶವಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಯಾವುದೆ ಕೊರತೆ ಬಾರದಂತೆ ಅಧಿಕಾರಿಗಳು ತಹಸೀಲ್ದಾರ್ ನೇತೃತ್ವದಲ್ಲಿ ಸಮನ್ವಯತೆ ಕಾಣಬೇಕು. ಅಲ್ಲದೆ ಪ್ರತಿನಿತ್ಯ ಮಾದ್ಯಮಗಳಿಗೆ ಎಷ್ಟುಜನ ರೋಗಿಗಳು ಗುಣಮುಖರಾಗಿದ್ಧಾರೆ ಮತ್ತಿತರ ಪ್ರಕರಣಗಳ ಬಗ್ಗೆ ಮಾಹಿತಿನೀಡಬೇಕು ಅಲ್ಲದೆ ಮಾಧ್ಯಮಗಳನ್ನು ಬಳಸಿಕೊಂಡು ಜನರಲ್ಲಿ ಅರಿವುಮುಡಿಸುವ ಕೆಲಸ ಮಾಡಬೇಕು.

ರಾಜ್ಯದಲ್ಲಿ 71ಲ್ಯಾಬ್‌ಗಳಿಗೆ ಕೊರೊನಾ ತಪಾಸಣೆಗೆ ಅನುಮತಿ ನೀಡಿದ್ದು ಮುಂದಿನ ದಿನಗಳಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ 24 ಗಂಟೆಯ ಒಳಗೆ ಫಲಿತಾಂಶ ದೊರಯಲಿದೆ. ರೋಗಿಗಳು ಮಾನಸಿಕವಾಗಿ ಕುಗ್ಗುತ್ತಿದ್ದು ತಾಲೂಕು ಹಂತದಲ್ಲಿ ತಂಡ ರಚನೆ ಮಾಡಿಕೊಂಡು ಪ್ರತಿರೋಗಿಗಳಿಗೆ ಮಾನಸಿಕವಾಗಿ ರ್ಧೈಯತುಂಬುವ ಮತ್ತು ಸರಕಾರದ ಸವಲತ್ತುಗಳನ್ನು ತಲಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಕೆ.ಮಹದೇವ ತಾವೇ ಖುದ್ದು ಹಲವಾರು ರೋಗಿಗಳ ಪಟ್ಟಿಪಡೆದು ಕೆಲವರಿಗೆ ದೂರವಾಣಿ ಕರೆ ಮಾಡಿ ಧೈರ್ಯಹೇಳುತ್ತಿರುವುದಾಗಿ ತಿಳಿಸಿದರು.

ಸಂಸದ ಪ್ರತಾಪ್‌ಸಿಂಹ ಮಾತನಾಡಿ ತಾಲೂಕು ಹಂತದಲ್ಲಿ ಇರುವ ಆಕ್ಸಿಜನ್ ಬೆಡ್‌ಗಳ ಸಂಖ್ಯೆ ಕಡಿಮೆಯಾಗಿದ್ದು ಪ್ರತಿತಾಲೂಕಿನಲ್ಲಿ ಕನಿಷ್ಠ 150 ಆಕ್ಸಿಜನ್ ಹಾಸಿಗೆಗಳು ಇರುವಂತೆ ಆರೋಗ್ಯಾಧಿಕಾರಿಗಳು ಕ್ರಮವಹಿಸಬೇಕು. ಮುಂದೆ ವೇಕ್ಸಿನೇಷನ್ ನೀಡಲಾಗುತ್ತಿದ್ದು ಈ ಬಗ್ಗೆ ಪ್ರತಿ ಹಳ್ಳಿಗಳಲ್ಲಿ ಪ್ರಚಾರ ಮಾಡಬೇಕು ಮತ್ತು 18 ವರ್ಷದ ಮೇಲ್ಪಟ್ಟ ಜನರ ಸಂಖ್ಯೆಯ ಮಾಹಿತಿಯನ್ನು ನೀಡಬೇಕು. ಪ್ರತಿ ತಾಲೂಕಿನಲ್ಲಿ ಕಾಲ್‌ಸೆಂಟರ್ ತೆರೆದು ಅದಕ್ಕೆ ಅಧಿಕಾರಿಯೊಬ್ಬರನ್ನು ನೇಮಿಸಿ ಕೊರೊನಾ ರೋಗಿಗಳ ಬಗ್ಗೆ ಮಾಹಿತಿ ಮತ್ತು ಸಾಂತ್ವನ ಹೇಳುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ಈಗಾಗಲೆ ತಂಬಾಕು ರೈತರಿಗೆ ಅಗತ್ಯವಾದ ರಸಗೊಬ್ಬರವನ್ನು ಪೂರೈಕೆ ಮಾಡಲಾಗುತ್ತಿದ್ದು ರೈತರಿಗೆ ಅಗತ್ಯವಾಧ ಸಮಯದಲ್ಲಿ ರಸಗೊಬ್ಬರ ತಲುಪಲಿದೆ. ಇದಕ್ಕೆ ಪೊಲೀಸರ ಸಹಕಾರ ಕೂಡ ಅಗತ್ಯ ಗೊಬ್ಬರ ದಾಸ್ತಾನು ನಂತರ ತಂಬಾಕು ಮಂಡಳಿಯಲ್ಲಿ ರಸಗೊಬ್ಬರ ನೀಡುವ ರೈತರನ ವಿವಿರವನ್ನು ಕಳುಹಿಸಿgರುತ್ತೇವೆ ರೈತರಿಗೆ ಪೊಲೀಸ್ ಇಲಾಖೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ವ್ಯಾಪಾರಸ್ಥಳ ಬಿಗಿಗೊಳಿ ತಾಲೂಕಿನಾದ್ಯಂತ ವಾಕ್ಸಿನೇಶನ ವಿಚಾರದಲ್ಲಿ ಉತ್ತಮ ಸಾಧನೆ ಮಾಡಿರುವ ಪಿರಿಯಾಪಟ್ಟಣ ತಾಲೂಕು ಅಧಿಕಾರಿಗಳ ಶ್ರಮದಿಂದ ಕೊರೊನಾ ಹತೋಟಿಗೆ ತರುವಲ್ಲಿಯೂ ಕೆಲಸ ಮಾಡಬೇಕು. ವ್ಯಾಪಾರ ವಹಿವಾಟು ನಡೆಯುವ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಬೇಕು. ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸುವ ಮತ್ತು ಮಾನಸಿಕ ಧ್ಯರ್ಯ ತುಂಬುವ ಕೆಲಸವಾಗಬೇಕು ಎಂದು ತಿಳಿಸಿದರು.

ಶವಸಂಸ್ಕಾರ ಮತ್ತಿತರ ಸಂದರ್ಭದಲ್ಲಿ ಕೊರೊನಾ ರೋಗಿಗಳಿಗೆ ವಾಹನವನ್ನು ಬಾಡಿಗೆಗೆ ಪಡೆಯಲು ಆಸ್ಪತ್ರೆಯ ರಕ್ಷಾ ಸಮಿತಿಯಲ್ಲಿ ಬಳಕೆ ಮಾಡಲು ಅವಕಾಶವಿದೆ. ಕ್ವಾರಂಟೇನ್ ಆದವರನ್ನು ಕಡ್ಡಾಯವಾಗಿ ವಾಚ್‌ಮಾಡಿ ಅವರಿಂದ ಇತರರಿಗೆ ಹರಡಂತೆ ಕ್ರಮವಹಿಸಿ, ಆರೋಗ್ಯ ಇಲಾಖೆಗೆ ಬೇಕಾದ ಗ್ರೂಪ್‌ಡಿ ಮತ್ತು ನರ್ಸ, ಡಾಟಾಎಂಟರಿ ಆಪರೇಟರ್‌ಗಳನ್ನು ನಿಯೋಜಿಸಿಕೊಳ್ಳಲು ಅವಕಾಶವಿದ್ದು ಸ್ಥಳೀಯ ಇದ್ದವಿರಿಗೆ ಆದ್ಯತೆ ನೀಡಿ. ಎಂದರು

ಶಾಸಕ ಕೆ.ಮಹದೇವ್ ಮತನಾಡಿ ತಾಲೂಕಿನಾದ್ಯಂತ ವಾಕ್ಸಿನೇಶನ ವಿಚಾರದಲ್ಲಿ ಉತ್ತಮ ಸಾಧನೆ ಮಾಡಿರುವ ಪಿರಿಯಾಪಟ್ಟಣ ತಾಲೂಕು ಅಧಿಕಾರಿಗಳ ಶ್ರಮದಿಂದ ಕೊರೊನಾ ಹತೋಟಿಗೆ ತರುವಲ್ಲಿಯೂ ಕೆಲಸ ಮಾಡಬೇಕು. ವ್ಯಾಪಾರ ವಹಿವಾಟು ನಡೆಯುವ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಬೇಕು. ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸುವ ಮತ್ತು ಮಾನಸಿಕ ಸ್ಥೈರ್ಯ ತುಂಬುವ ಕೆಲಸವಾಗಬೇಕು ಎಂದು ತಿಳಿಸಿದರು.

ತಾಲೂಕಿನಲ್ಲಿ ಕೊಪ್ಪ ಹಾರನಹಳ್ಳೀ ಬಾಗದಲ್ಲಿ ಇರುವ ಕೃಷಿಕಾರ್ಮಿಕರು ತೋಟಗಳ ಮಾಲೀಕರು ಕುಶಾಲನಗರ ಮತ್ತಿತರರ ಕಡೆ ವಾಸವಿದ್ದು ಲಾಕ್‌ಡೌನ್ ಸಂರ್ಭದಲ್ಲಿ ಒಡಾಟ ನಡೆಸಲು ತೊಂದೆ ಉಂಟಾಗುತ್ತಿದೆ. ಈ ಬಗ್ಗೆ ಕ್ರಮವಹಿಸುವಂತೆ ಎಡಿಎ ಶಿವಕುಮಾರ್ ಮನವಿ ಮಾಡಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕರು ನನಗೂ ಹಲವಾರು ಮಂದಿ ಕರೆಮಾಡಿದ್ದು ಕೊಪ್ಪ, ಬೈಲುಕುಪ್ಪೆಯಲ್ಲಿ ಇರುವ ಕೂಲಿಕಾರ್ಮಿಕರು ತೊಂದರೆಗೆ ಈಡಾಗಿದ್ದು ಶೀಘ್ರದಲ್ಲಿ ಕ್ರಮವಹಿಸುವಂತೆ ಮನವಿಮಾಡಿದರು.

ತಹಸೀಲ್ದಾರ್ ಕೆ.ಚಂದ್ರಮೌಳಿ, ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್‌ಬಾಬು, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀನಿವಾಸ್, ಸಿಇಒ ಸಿ.ಆರ್.ಕೃಷ್ಣಕುಮಾರ್ ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಕೆ.ಆರ್.ನಿರೂಪರಾಜೇಶ್, ಪುರಸಭೆ ಅಧ್ಯಕ್ಷ ಮಂಜುನಾಥ್‌ಸಿAಗ್, ಉಪವಿಭಾಗಾಧಿಕಾರಿ ವೀಣಾ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಸೋಮಶೇಖರ್, ಒಳಚರಂಡಿ ನಿಗಮದ ನಿರ್ದೇಶಕ ಆರ್.ಟಿ.ಸತೀಶ್, ಡಿವೈಎಸ್‌ಪಿ ರವಿಪ್ರಸಾದ್, ಸರ್ಕಲ್‌ಇನ್ಸ್ಪೆಕ್ಟರ್ ಬಿ.ಆರ್.ಪ್ರದೀಪ್‌ಕುಮಾರ್, ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top