
ಕೊರೊನ ವ್ಯರಸ್ ದಿನೇ ದಿನೇ ವ್ಯಾಪಕವಾಗಿ ಹೆಚ್ಚುತ್ತಿದ್ದು ಜನಸಾಮಾನ್ಯರಲ್ಲಿ ರೋಗನಿರೋಧಕ ಶಕ್ತಿ ಅತಿಮುಖ್ಯವಾಗಿರುವುದರಿಂದ ಕೆಲವೇ ದಿನಗಳ ಹಿಂದೆ ಮೈಮುಲ್ ನಿಂದ ಆಯುರ್ವೇದಿಕ್ ಅಂಶಗಳನ್ನೊಳಗೊಂಡ 6 ಬಗೆಯ ಹಾಲು ಹಾಗು 1 ಇಮ್ಮ್ಯೂನಿಟಿ ಬೂಸ್ಟರ್ ಕಷಾಯವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿತ್ತು. ಕೊರೊನ ವಾರಿಯರ್ಸ್ ಗಳಾದ ಆರಕ್ಷಕ ಸಿಬ್ಬಂದಿಗಳು ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮೈಮುಲ್ ಅಧ್ಯಕ್ಷರಾದ ಪಿ.ಎಂ.ಪ್ರಸನ್ನ ರವರು ವಯಕ್ತಿಕವಾಗಿ ಪಟ್ಟಣದ ಎಲ್ಲ ಆರಕ್ಷಕ ಸಿಬ್ಬಂದಿಗಳಿಗೆ ಇಮ್ಮ್ಯೂನಿಟಿ ಬೂಸ್ಟರ್ ಕಷಾಯವನ್ನು ನೀಡಿದರು.