ಕೊರೊನಾ ವೈರಸ್‌ನಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಜನಪತ್ರಿನಿಧಿಗಳು ಮತ್ತು ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡು ಜನರನ್ನು ವೈರಸ್ ನಿಂದ ಕಾಪಾಡಲು ಯುದ್ದೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕಾಗಿದೆ ಎಂದು ಶಾಸಕ ಕೆ.ಮಹದೇವ್ ತಿಳಿಸಿದರು. 03/05/2021

ಪಟ್ಟಣದಲ್ಲಿ ಕೊರೊನಾದಲ್ಲಿ ಸಾವಿಗೀಡಾಗದ ಸಾರ್ವಜನಿಕ ಅನೇಕ ಸಮಾಜ ಅತ್ಯವಶ್ಯತಕತೆ ಇದೆ ಮೂರು ವರ್ಷಗಳಿಂದ ಈ ಕೆಲಸ ನೆನೆಗುದಿಗೆ ಬಂದಿದೆ. ಆದ್ದರಿಂದ ಶೀಘ್ರದಲ್ಲಿ ಸಾರ್ವಜನಿಕ ಸ್ಮಶಾನಕ್ಕೆ 5 ಎಕರೆಯಷ್ಟು ಜಾಗವನ್ನು ಗುರುತಿಸಿ ಕ್ರಮವಹಿಸಬೇಕು ಎಂದು ಶಾಸಕ ಕೆ.ಮಹದೇವ್ ಸೂಚನೆ ನೀಡಿದರು.

ತಾಲೂಕು ಪಂಚಾಯಿತಿ ಆವರಣದಲ್ಲಿ ಪಿಡಿಒ ಗಳಿಗೆ ಕೋರೊನಾ ಮುಂಜಾಗ್ರತಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಶಾಸಕ ಕೆ.ಮಹದೇವ್ ಮಾತನಾಡಿದರು. ನಮ್ಮ ಕರ್ತವ್ಯ, ಹೊಣೆಗಾರಿಕೆ, ಜವಾಬ್ದಾರಿ ಈ ಮೂರನ್ನು ಅರಿತು ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ಕೊರೋನ 2ನೇ ಅಲೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕರಾಗಿಯಾಗಿದೆ. ರೈತರು ಗ್ರಾಮೀಣ ಪ್ರದೇಶದ ಜನರು ಹೆಚ್ಚು ಬಲಿಯಾಗುತ್ತಿರುವುದು ನೋವು ತಂದಿದೆ. ಇದಕ್ಕೆ ಸರಕಾರ ಮತ್ತು ಅಧಿಕಾರಿಗಳ ನಿರ್ಲಕ್ಷವೇ ಕಾರಣ ಮೊದಲ ಅಲೆಯಲ್ಲಿ ತೆಗೆದುಕೊಂಡು ಎಚ್ಚರಿಕೆ ಕ್ರಮಗಳನ್ನು ಈ ಬಾರಿ ಮರೆತಿದ್ದು ಇಷ್ಟು ರೋಗ ಹರಡಲು ಕಾರಣವಾಗಿದೆ ಎಂದು ತಿಳಿಸಿದರು.

ಜನಪತ್ರಿನಿಗಳು ಬಳಕೆ
ಗ್ರಾಮಪಂಚಾಯಿತಿ ಮಟ್ಟದಲ್ಲಿ ಸ್ಥಳೀಯ ಜನಪತ್ರಿನಿಧಿಗಳನ್ನು ಬಳಕೆ ಮಾಡಿಕೊಂಡು ಪಿಡಿಒ ಗಳು ಕೆಲಸ ನಿರ್ವಹಿಸಬೇಕು. ಜನರಿಗೆ, ಜನಪತ್ರಿನಿಧಿಗಳಿಗೆ ಕೊರೊನಾದ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿಕೊಂಡು ಕೆಲಸ ಮಾಡಿಕೊಳ್ಳಬೇಕು. ಸತ್ತವರ ಅಂತ್ಯಸಂಸ್ಕಾರಕ್ಕೆ ಜೆಸಿಬಿ ಮಾಲೀಕರು ಮುಂದೆ ಬಾರದ ಕಾರಣ ಈಗಲೆ ಎಲ್ಲಾ ಹೋಬಳಿ ಕೇಂದ್ರದಲ್ಲಿ ಒಂದು ಜೆಸಿಬಿ 24 ಗಂಟೆಯೂ ಸಿದ್ದವಾಗಿ ಇರುವಂತೆ ಕ್ರಮವಹಿಸಬೇಕು. ಶವಸಂಸ್ಕಾರದ ಸಂದರ್ಭದಲ್ಲಿ ಹಣ, ಅನುಮತಿಗೆ ಕಾಯದೆ ಮಾನವೀಯತೆಯನ್ನು ಮೆರೆಯಿರಿ ಶವಸಂಸ್ಕಾರ ಪುಣ್ಯದ ಕೆಲಸ ಅದನ್ನು ಮರೆಯಬೇಡಿ ಎಂದು ತಿಳಿಸಿದರು.

ದೂರು ಬರದಂತೆ ಕೆಲಸ ನಿರ್ವಹಿಸಿ – ತಾಲೂಕು ಪಂಚಾಯಿತಿ ಇಒ ಸಿ.ಆರ್.ಕೃಷ್ಣಕುಮಾರ್
ತಾಲೂಕು ಪಂಚಾಯಿತಿ ಇಒ ಸಿ.ಆರ್.ಕೃಷ್ಣಕುಮಾರ್ ಮಾತನಾಡಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಕೊರೊನಾ ಜಾಗೃತಿ ಮೂಡಿಸುವುದು ಸೇರಿದಂತೆ ಗ್ರಾಮಗಳಲ್ಲಿ ಕುಡಿಯುವ ನೀರು ಸ್ವಚ್ಛತೆ ಮುಂತಾದವುಗಳಿಗೆ ಹೆಚ್ಚಿನ ಒತ್ತನ್ನು ಪಿಡಿಒ ಗಳು ನೀಡಬೇಕು. ದೂರುಗಳು ಬಂದಾಗ ಸ್ಪಂದಿಸದೆ ಶಾಸಕರು, ಜನಪತ್ರಿನಿಧಿಗಳಿಂದ ಒತ್ತಡ ಬರುವ ಅವಕಾಶ ನೀಡಬಾರದು ಎಂದರು.

5 ಮಂದಿ ಮಾತ್ರ ಅಂತ್ಯಕ್ರಿಯೆ ನಡೆಸಲು ಅವಕಾಶ – ತಹಸೀಲ್ದಾರ್ ಕೆ.ಚಂದ್ರಮೌಳಿ
ಕೊರೊನಾದಿಂದ ಸಾವಿಗೀಡಾದ ಸಂದರ್ಭದಲ್ಲಿ ಅಂತ್ಯಕ್ರಿಯೆಗೆ 5 ಮಂದಿ ಮಾತ್ರ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡಬೇಕು. ಅಗತ್ಯ ಪಿ.ಪಿ.ಕಿಟ್‌ನೀಡಬೇಕು. ಮತ್ತು ಕೊರೊನಾದಿಂದ ಸಾವಿಗೀಡಾದ ಮನೆಯಲ್ಲಿ ಇರುವವರನ್ನು ಐಸೋಲೇಟ್ ಮಾಡಬೇಕು. ಆಶಾಕಾರ್ಯಕರ್ತರು, ಶಿಕ್ಷಕರು ಕೋವಿಡ್ ಪಾಜೀಟಿವ್ ಪ್ರಕರಣಗಳ ಗಸ್ತು ಮಾಡುತ್ತಿದ್ದು, ಕಟ್ನೋನ್ಮೆಂಟ್ ಜೋನ್‌ಗಳಲ್ಲಿ ಇರುವ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸವನ್ನು ಮತ್ತು ತೀರಬಡತನದಲ್ಲಿ ಇರುವ ಕುಟುಂಬಕ್ಕೆ ಪಂಚಾಯಿತಿ ಸಹಾಯ ಮಾಡಿರಿ ಎಂದು ತಿಳಿಸಿದರು. ಗ್ರಾಮಪಂಚಾಯಿತಿ ಮಟ್ಟದಲ್ಲಿ ಕೊರೊನಾ ತಡೆಗಟ್ಟಲು ಸಹಕಾರ ಬೇಕಾಗಿದೆ. 527 ಪ್ರಕರಣಗಳು ಬೆಳಕಿಗೆ ಬಂದಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಸಿಟೀವ್ ಬಂದವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಬೇಕು, ಕಂಟ್ಮೇನ್ಮೆಟ್ ಜೋನ್ ಹೆಚ್ಚು ಮಾಡಿರಿ, ಅಲ್ಲದೆ ಹೋಂಐಸೋಲೇಷನ್‌ನಲ್ಲಿ ಇರುವರಿಗೆ ಸರಿಯಾದ ಮಾತ್ರೆ ಚಿಕಿತ್ಸೆ ಲಭ್ಯವಾಗಬೇಕು. ಪ್ರತಿ ಪಿಎಚ್‌ಸಿಗೆ ತಾಲೂಕು ಮಟ್ಟದ ಅಧಿಕಾರಿಯನ್ನು ನೋಡಲ್ ಆಫೀಸರ್ ಆಗಿ ನೇಮಕ ಮಾಡಲಾಗಿದೆ. ಈ ಮೂಲಕ ಪಿಎಚ್‌ಸಿಗಳಲ್ಲಿ ಪಾಜಿಟೀವ್ ಪ್ರಕರಣಗಳು ಹೋಂಐಸೋಲೇಷನ್‌ಗೆ ಯೋಗ್ಯವೆ ಎಂಬುದನ್ನು ನೋಡಿ ಅನುಮತಿ ನೀಡಿ ಎಂದರು.

ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ ಇತ್ತೀಚೆಗೆ ಕೊರೊನಾದಿಂದ ಸಾವಿಗೀಡಾಗುತ್ತಿರುವ ಶ್ವಾಸಕೋಶ ಸಂಪೂರ್ಣ ನಾಶವಾಗಿರುವುದು ಕಂಡು ಬರುತ್ತಿದ್ದು ಮೊದಲನೇ ಅಲೆಗಿಂತ ಎರಡನೆ ಅಲೆಯಲ್ಲಿ ಶ್ವಾಸಕೋಶ ಶೀಘ್ರದಲ್ಲಿ ನಾಶಪಡಿಸುವ ಗುಣ ಎರಡನೆ ಅಲೆಯ ವೈರಸ್ ನಲ್ಲಿ ಇದೆ ಆದ್ದರಿಂದ ಪ್ರತಿದಿನ ರೋಗಿಗಳಿಗೆ ಶ್ವಾಸಕೋಶದ ಎಕ್ಸರೆ ಮಾಡಿಸಲಾಗುತ್ತಿದೆ. ಆದ್ದರಿಂದ ರೋಗಿಗಳು ನಿರ್ಲಕ್ಷ ಮಾಡದೆ ಅಗತ್ಯ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸರ್ಕಲ್‌ಇನ್ಸ್ಪೆಕ್ಟರ್ ಜಗದೀಶ್, ತಾಲೂಕು ಆರೋಗ್ಯಾಧಿಕಾರಿ ಶರತ್‌ಬಾಬು, ಸೇರಿದಂತೆ ವಿವಿಧ ಗ್ರಾಮಪಂಚಾಯಿತಿಗಳ ಅಧಿಕಾರಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top