
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ 2 ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಪಿರಿಯಪಟ್ಟಣ ಕೋವಿಡ್ ಸೆಂಟರ್ನಲ್ಲಿ ಊಟ ಹಾಗೂ ವಿವಿಧ ಸೌಲಭ್ಯಗಳಿಂದ ರೋಗಿಗಳು ವಂಚಿತರಾಗಿದ್ದಾರೆ ಸರಿಯಾದ ರೀತಿಯಲ್ಲಿ ಅಧಿಕಾರಿಗಳು ಮೂಲಭೂತ ಸೌಲಭ್ಯವನ್ನು ಒದಗಿಸಿಲ್ಲ ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಅದರಿಂದ ಇಂದು ಕೋವಿಡ್ ಸೆಂಟರ್ನಲ್ಲಿ ಯಾವ ರೀತಿ ಸೌಲಭ್ಯ ಇಲ್ಲ ಎಂದು ನೋಡುವ ಸಲುವಾಗಿ ಇಂದು ಭೇಟಿ ನೀಡಿದ್ದೇನೆ ಅದರಂತೆ ಕೋವಿಡ್ ಬಂದಿರುವ ರೋಗಿಗಳನ್ನು ಸಹ ವಿಚಾರಿಸಿದ್ದೇನೆ ಆದರೆ ಇಲ್ಲಿ ಯಾವುದೇ ಸಮಸ್ಯೆ ಇಲ್ಲ ಸರಿಯಾದ ರೀತಿಯಲ್ಲಿ ಆಹಾರ ಮತ್ತು ಮೂಲಭೂತ ಸೌಲಭ್ಯವನ್ನು ನೀಡುತ್ತಿದ್ದಾರೆ ಇಂದು ರೋಗಿಗಳು ಹೇಳಿದ್ದಾರೆ ಯಾರೇ ಆಗಲಿ ದೇಶ-ವಿದೇಶದಲ್ಲಿ ಮಹಮರಿ ಕೋವಿಡ್ 19 ವೈರಸ್ಸಿನಿಂದ ಜನ ಸಾಯುತ್ತಿದ್ದಾರೆ ವೈಯಕ್ತಿಕ ವಿಚಾರ ಹಾಗೂ ಟೀಕೆ-ಟಿಪ್ಪಣಿಗಳನ್ನು ಮಾಡುವುದನ್ನು ಬಿಟ್ಟು ಎಲ್ಲಿ ತಪ್ಪು ಆಗಿದೆಯೋ ಅದನ್ನು ಸರಿಪಡಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು ನಮ್ಮ ತಾಲೂಕಿನಲ್ಲಿ ಯಾವುದೇ ರೀತಿಯ ಆಕ್ಸಿಜನ್ ಕೊರತೆಯಿಲ್ಲ ಯಾವ ರೀತಿ ಕೊರತೆ ಬಾರದ ಹಾಗೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆ ಕೋವಿಡ್ ಎರಡನೇ ಅಲೆ ಇಂದ ರೋಗಿಗಳು ನೂರಕ್ಕೆ 80 ಪರ್ಸೆಂಟ್ ಗುಣಮುಖರಾಗುತ್ತಾರೆ ಸಾರ್ವಜನಿಕರು ಕೋವಿಡ್ ಮಹಮರಿ ರೋಗಕ್ಕೆ ಹೆದರದೆ ಆರೋಗ್ಯದ ಕಡೆ ಗಮನಹರಿಸಬೇಕು ಈಗಾಗಲೇ 50 ಆಕ್ಸಿಜನ್ ಬೆಡ್ ವ್ಯವಸ್ಥೆಯಿದೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಫೋನಿನ ಮುಖಾಂತರ ತಾಲ್ಲೂಕಿಗೆ ಬೇಕಾಗುವಂತಹ ವಿವಿಧ ರೀತಿಯ ಸೌಲಭ್ಯವನ್ನು ಒದಗಿಸಿಕೊಡುವಂತೆ ಮನವಿ ಮಾಡಲಾಗಿದೆ ಅದರಂತೆ 100 ಆಕ್ಸಿಜನ್ ಬೆಡ್ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ ಎಂದರು ತಾಲೂಕಿನಲ್ಲಿ ಎಲ್ಲಾ ನೋಡಲ್ ಅಧಿಕಾರಿಗಳು ನೇಮಕ ಮಾಡಿ ಗ್ರಾಮಾಂತರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಗಳನ್ನು ಕೂಡಲೇ ಕೋವಿಡ್ ಕೇಂದ್ರಕ್ಕೆ ರವಾನೆ ಮಾಡಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.

ಈ ಸಂದರ್ಭ ತಹಸಿಲ್ದಾರ್ ಕೆ ಚಂದ್ರಮೌಳಿ ತಾಲೂಕು ಟಿ ಎಚ್ ಓ ಶರತ್ ಬಾಬು ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಶ್ರೀನಿವಾಸ್ ಕ್ಷೇತ್ರ ಶಿಕ್ಷಣಾಧಿಕಾರಿ ವೈಕೆ ತಿಮ್ಮೇಗೌಡ ಸಮಾಜ ಕಲ್ಯಾಣ ಅಧಿಕಾರಿ ಸಿದ್ದೇಗೌಡ ಬಿಸಿಎಂ ಇಲಾಖೆ ಅಧಿಕಾರಿ ಮೋಹನ್ ಕುಮಾರ್ ಪುರಸಭೆ ಮುಖ್ಯಾಧಿಕಾರಿ ಪ್ರಸನ್ನ ಸಿಪಿಐ ಜಗದೀಶ್ ಮತ್ತಿತರು ಹಾಜರಿದ್ದರು.