
ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡುತ್ತಿದೆ ಎಂದು ಶಾಸಕ ಕೆ ಮಹದೇವ್ ತಿಳಿಸಿದರು. ತಾಲೂಕಿನ ಕಗ್ಗುಂಡಿ ಸಮೀಪ ತಂಬಾಕು ಮಂಡಳಿಯ ಪ್ರಾಂಗಣದಲ್ಲಿ ತಂಬಾಕು ಬೆಳೆಯುವ ರೈತರಿಗೆ ರಸಗೊಬ್ಬರ ವಿತರಿಸಿ ಮಾತಾಡಿದರು. ಈಗಾಗಲೇ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದೆ ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಅದರಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರದಲ್ಲಿ ಯಾವುದೇ ತಾರತಮ್ಯ ಇಲ್ಲದೆ ಪ್ರತಿಯೊಬ್ಬ ರೈತನಿಗೂ ಸಮನಾಗಿ ರಸಗೊಬ್ಬರ ಹಂಚಿಕೆ ಮಾಡಬೇಕು ಎಂದರು ಹುಣಸೂರು ಹೆಚ್ ಡಿ ಕೋಟೆ ಪಿರಿಯಾಪಟ್ಟಣ ರಾಮನಾಥಪುರ ಹೀಗೆ ಹಲವು ಕಡೆ ರೈತರು ಹೆಚ್ಚಾಗಿ ತಂಬಾಕು ಬೆಳೆಯನ್ನು ಬೆಳೆಯುತ್ತಿದ್ದು ರೈತರಿಗೆ ಸರ್ಕಾರ ಸಕಾಲಕ್ಕೆ ಯಾವ ರೀತಿ ತೊಂದರೆ ಇಲ್ಲದೆ ಪೂರ್ವಕವಾಗಿ ರಸಗೊಬ್ಬರ ವಿತರಣೆ ಹಂಚಿಕೆಯಾಗಿದೆ ಎಂದರು ತಾಲೂಕಿನಲ್ಲಿ ತಂಬಾಕು ಮಂಡಳಿ ಅಧಿಕಾರಿಗಳು ಹಾಗೂ ನೂತನವಾಗಿ ಸಂಘದ ಸದಸ್ಯರು ಎಲ್ಲರೂ ಒಟ್ಟುಗೂಡಿ ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ದೇಶದಲ್ಲಿ ಕೋವಿಡ್ ಮಹಾಮಾರಿ ರೋಗ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ರೈತರು ಜಾಗೃತರಾಗಿ ಮಾಸ್ಕ್ ಹಾಗೂ ಸ್ಯಾನಿಟರಿ ಬಳಸಿ ಅಂತರ ಕಾಯ್ದುಕೊಂಡು ರಸಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ಪಡೆದುಕೊಳ್ಳಬೇಕು ಸರ್ಕಾರದ ನಿಯಮವನ್ನು ಪಾಲಿಸಬೇಕು ರೈತರಿಂದ ಯಾವುದೇ ವಸೂಲಿ ಮಾಡಿದೆ ಅವರಿಗೆ ಸೂಕ್ತ ರೀತಿಯಲ್ಲಿ ಬಿತ್ತನೆ ಬೀಜವನ್ನು ಸಮರ್ಪಕವಾಗಿ ಹಂಚಿಕೆ ಮಾಡಬೇಕು ಎಂದರು ರೈತರು ಹೆಚ್ಚಾಗಿ ತಂಬಾಕು ಮಂಡಳಿ ಬಳಿ ಜಮಾಯಿಸಿದ ಒಂದು ಟ್ರ್ಯಾಕ್ಟರ್ ಮೂಲಕ 5ರಿಂದ 6 ಜನ ರೈತರು ತಂಬಾಕು ಮಂಡಳಿಗೆ ಬಂದು ಸರ್ಕಾರದ ನಿಯಮ ಪಾಲಿಸಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭ ತಂಬಾಕು ಮಂಡಳಿಯ ಉಪಾಧ್ಯಕ್ಷ ಪುಟ್ಟರಾಜು ತಾಪಂ ಸದಸ್ಯ ಮತ್ತು ಮಂಡಳಿಯ ನಿರ್ದೇಶಕ ಆರ್ ಎಸ್ ಮಹದೇವ್ ಹರಾಜು ಅಧೀಕ್ಷಕರಾದ ಡಾಕ್ಟರ್ ಮೃದು ಭೂಷಣ್ ಮಂಜುನಾಥ್ ಮತ್ತಿತರರಿದ್ದರು.